ಕನ್ನಡತಿ ಬೆಡಗಿ ರಮೋಲ ಬಿಂಕ, ವಯ್ಯಾರಕ್ಕೆ ಮನಸೋತ ಫ್ಯಾನ್ಸ್
ಕನ್ನಡತಿ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ರಮೋಲಾ, ಕಿರುತೆರೆಯಲ್ಲಿ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಂಡರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡುತ್ತಲೇ ಇರುತ್ತಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ (Kannadathi) ಸೀರಿಯಲ್ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಅದರಲ್ಲೂ ಈ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ ರಮೋಲ ಪಾತ್ರಕ್ಕೆ ಜೀವ ತುಂಬಿದ್ದರು.
ಸೀರಿಯಲ್ ಅರ್ಧದಲ್ಲಿ ಬಿಟ್ಟರೂ ರಮೋಲಾ (Ramola) ಅವರ ರಮೋಲ ಅವರನ್ನು ಇಂದಿಗೂ ಜನರು ಕನ್ನಡತಿಯ ಸಾನಿಯಾ ಎಂದೇ ಗುರುತಿಸುವರು. ಅಷ್ಟೊಂದು ಜನಪ್ರಿಯತೆ ಪಡೆದಿತ್ತು ಆ ಪಾತ್ರ.
ಕನ್ನಡ ಸಿನಿಮಾ ಒಂದರಲ್ಲೂ ನಟಿಸುತ್ತಿರುವ ರಮೋಲ, ಆಗೊಮ್ಮೆ ಈಗೊಮ್ಮೆ ಸೀರಿಯಲ್ (serial)ಗಳಲ್ಲೂ ಕಾಣಿಸಿಕೊಂಡಿದ್ದುಂಟು, ಆದರೆ ಕನ್ನಡತಿ ಬಳಿಕ ಯಾವ ಧಾರವಾಹಿಯನ್ನು ಫುಲ್ ಟೈಮ್ ನಟಿಯಾಗಿ ಕಾಣಿಸಿಕೊಳ್ಳಲೇ ಇಲ್ಲ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್ ನ ಒಂದೆರಡು ಸೀನ್ ಗಳಲ್ಲಿ, ಜೊತೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಸೀರಿಯಲ್ ನ ಕೆಲವು ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡಿದ್ರು ಅಷ್ಟೇ.
ನಟನೆಯಲ್ಲಿ ಅಷ್ಟಾಗಿ ಅದೃಷ್ಟ ಕುದುರದೇ ಇದ್ರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಈ ಬೆಡಗಿ, ತಮ್ಮ ಡ್ಯಾನ್ಸ್ ರೀಲ್ಸ್, ಫೋಟೋಗಳ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗ್ತಾ ಇರ್ತಾರೆ.
ಇತ್ತೀಚೆಗೆ ರಮೋಲ ಬಾಡಿ ಹಗ್ಗಿಂಗ್ ಶಾರ್ಟ್ ಡ್ರೆಸ್ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಇವರ ದಂತದ ಗೊಂಬೆಯಂತಹ ಸೌಂದರ್ಯ, ಮೈಮಾಟ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ.
ಅದಕ್ಕೂ ಮುನ್ನ ರಮೋಲ ನೀಲಿ ಬಣ್ಣದ ಪ್ಯಾಂಟ್ ಜೊತೆಗೆ, ಬಿಳಿ ಬಣ್ಣದ ಅಂದವಾದ ಟಾಪ್ ಧರಿಸಿ ಫೋಟೊ ಶೇರ್ ಮಾಡಿದ್ದರು, ಅದನ್ನು ಸಹ ಅಭಿಮಾನಿಗಳು ಮೆಚ್ಚಿ, ಎಂಥಾ ಬ್ಯೂಟಿ ಸಾನಿಯಾ ಮೇಡಂ ಎಂದು ಕಾಮೆಂಟ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.