MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕನ್ನಡತಿ ಹರ್ಷ ಬೆಂಕಿ ಲುಕ್ ಗೆ ಹೆಣ್ಣು ಹೈಕ್ಳು ಫಿದಾ! ಭುವಿ‌ ಮೇಡಂ ಕೂಡ ಬೌಲ್ಡ್ ಆಗೋದ್ರಾ?

ಕನ್ನಡತಿ ಹರ್ಷ ಬೆಂಕಿ ಲುಕ್ ಗೆ ಹೆಣ್ಣು ಹೈಕ್ಳು ಫಿದಾ! ಭುವಿ‌ ಮೇಡಂ ಕೂಡ ಬೌಲ್ಡ್ ಆಗೋದ್ರಾ?

ಕನ್ನಡತಿ ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದ ಹರ್ಷ ಆಲಿಯಾಸ್ ಕಿರಣ್ ರಾಜ್ ಇದೀಗ ತಮ್ಮ ನ್ಯೂ ಲುಕ್ ಮೂಲಕ ಹೆಣ್ಣು ಮಕ್ಕಳ ನಿದ್ದೆ ಕದ್ದಿದ್ದಾರೆ.  

2 Min read
Author : Pavna Das
Published : Aug 28 2024, 04:53 PM IST
Share this Photo Gallery
  • FB
  • TW
  • Linkdin
  • Whatsapp
17

ಹರ್ಷ -ಭುವಿ ಜೋಡಿ ಬಗ್ಗೆ ನೆನಪಿಸುವ ಅಗತ್ಯಾನೆ ಇಲ್ಲ. ಕನ್ನಡತಿ ಧಾರಾವಾಹಿ (Kannadathi serial) ಮೂಲಕ ಜನಮನ ಗೆದ್ದ ಫೇವರಿಟ್ ಜೋಡಿ ಇವರು. ಸದ್ಯ ಹರ್ಷ ಮತ್ತು ಭುವಿ ಇಬ್ಬರೂ ಸೀರಿಯಲ್ ಗಳಿಂದ ದೂರ ಇದ್ದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 
 

27

ಇದೀಗ ಹರ್ಷ ಅಂದ್ರೆ ಕಿರಣ್ ರಾಜ್ (Kiran Raj) ಅವರ ನ್ಯೂ ಲುಕ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಕಿರಣ್ ಸ್ಟೈಲಿಶ್ ಲುಕ್ ನೋಡಿ ಅಭಿಮಾನಿಗಳು ಮನಸೋತಿದ್ದು, ಅದರಲ್ಲೂ ಮಹಿಳಾ ಅಭಿಮಾನಿಗಳು ಫಿದಾ ಆಗೋಗ್ಬಿಟ್ಟಿದ್ದಾರೆ. 

37

ಸೈಮಾ (SIIMA) ನಾಮಿನೇಶನ್ ಪಾರ್ಟಿಗೆ ಕಿರಣ್ ರಾಜ್ ಆಗಮಿಸುತ್ತಿರುವ ವಿಡಿಯೋ ಭಾರಿ ಸದ್ದು ಮಾಡ್ತಿದೆ. ಅನಿಲ್ ಅನಿ ಡಿಸೈನ್ ಮಾಡಿರುವ ಬ್ಲ್ಯಾಕ್ ಬಣ್ಣದ ಬ್ಲೇಸರ್ ರೀತಿಯ ವಿ ನೆಕ್ ಶರ್ಟ್ ಧರಿಸಿದ್ದು, ಅದರ ಜೊತೆಗೆ ಬ್ಲ್ಯಾಕ್ ಫಾರ್ಮಲ್ಸ್ ಹಾಗೂ ಗಾಗಲ್ಸ್ ಧರಿಸಿದ್ದು ತುಂಬಾನೆ ಹಾಟ್ ಆಗಿ ಕಾಣಿಸ್ತಿದ್ದಾರೆ. 
 

47

ಕಿರಣ್ ರಾಜ್ ಫೋಟೊ ಸೋಶಿಯಲ್ ಮೀಡೀಯಾದಲ್ಲಿ (Social media) ಅಪ್ ಲೋಡ್ ಆಗುತ್ತಿದ್ದಂತೆ, ಅಭಿಮಾನಿಗಳು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇದರಲ್ಲಿ ಹೆಚ್ಚಾಗಿ ಮಹಿಳಾ ಅಭಿಮಾನಿಗಳೇ ಇದ್ದು ಕಿರಣ್ ಸ್ಟೈಲಿಶ್ ಲುಕ್ ಮಹಿಳಾ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದಂತಿದೆ ಅನ್ನೋದನ್ನ ಕಾಮೆಂಟ್ ನೋಡಿದ್ರೇನೆ ತಿಳಿಯುತ್ತೆ. 
 

57

ಕಿಂಗ್ ಆಫ್ ಸ್ಟೈಲ್, ನಿಮ್ಮನ್ನ ನೋಡಿ ಕಳೆದೋಗ್ಬಿಟ್ಟೆ, ಜಸ್ಟ್ ಲುಕ್ಕಿಂಗ್ ಲೈಕ್ ವಾವ್, ಬ್ಲ್ಯಾಕ್ ಡ್ರೆಸಲ್ಲಿ ಹ್ಯಾಂಡ್ಸಮ್ ಹುಡುಗ,  ನೆಕ್ಸ್ಟ್ ಇಯರ್ ಬ್ಲ್ಯಾಕ್ ಲೇಡಿ ಗ್ಯಾರಂಟಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲದೇ ಸ್ಟನ್ನಿಂಗ್, ಬ್ರೀತ್ ಟೇಕಿಂಗ್, ಬೆಂಕಿ ಲುಕ್, ಹ್ಯಾಂಡ್ಸಮ್, ನನ್ನ ಬಾಯ್ ಫ್ರೆಂಡ್ ಆಗ್ತೀರಾ?, ಹಾಟ್ ಆಗಿ ಕಾಣಿಸ್ತೀರಿ ಎನ್ನುವಂತಹ ಕಾಮೆಂಟ್ ಗಳೇ ಕಾಣಿಸ್ತಿದೆ. 
 

67

ಅಷ್ಟೇ ಅಲ್ಲ ನೀವು ಹಾಲಿವುಡ್ ಹೀರೋ ತರ ಕಾಣಿಸ್ತಿದ್ದೀರಿ, ಆ ಲುಕ್, ಆ ಸ್ಟೈಲ್, ಆಟಿಟ್ಯೂಡ್, ಕಾನ್ಫಿಡೆನ್ಸ್ ಲೆವೆಲ್ ನೆಕ್ಸ್ಟ್ ಲೆವೆಲ್. ಹ್ಯಾಂಡ್ಸಮ್ ಮತ್ತು ಟ್ಯಾಲೆಂಟೆಡ್ ಹೀರೋ ಎಂದಿದ್ದಾರೆ. ಇದ್ರ ಜೊತೆ ಇನ್ನೊಬ್ಬರು ಸೂಪರ್ ಹ್ಯಾಂಡ್ಸಮ್ ಆಗಿದ್ದೀರಾ ಸರ್ ಕಿರಣ್ ಸರ್ ಎಂದಿದ್ದಾರೆ. 
 

77

ಇನ್ನು ಕನ್ನಡತಿಯ ಕೋ ಸ್ಟಾರ್ ರಂಜನಿ ರಾಘವನ್ (Ranjani Raghavan) ಸಹ ಕಿರಣ್ ರಾಜ್ ವಿಡಿಯೋಗೆ ಕಾಮೆಂಟ್ ಮಾಡಿದ್ದು, ಯು ಲುಕ್ ಗ್ರೇಟ್, ನಿಮ್ಮ ಚಿತ್ರ ಬಿಡುಗಡೆಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಇದಕ್ಕೆ ಕಿರಣ್ ಕೂಡ ಉತ್ತರಿಸಿದ್ದು, ಥ್ಯಾಂಕ್ಯೂ ಸೋ ಮಚ್. ನಿಮ್ಮ ಮುಂದಿನ ಎಲ್ಲಾ ಪ್ರಾಜೆಕ್ಟ್ ಗಳಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕಿರಣ್ ರಾಜ್

Latest Videos
Recommended Stories
Recommended image1
Amruthadhare Serial Update: ಮಲ್ಲಿ ನಿಶ್ಚಿತಾರ್ಥ ಸಂಭ್ರಮ ಬಲು ಜೋರು… ಕಳಚಿ ಬೀಳುತ್ತಾ ಸುನಿಲ್ ಮುಖವಾಡ!
Recommended image2
Bhargavi LLB Serial ಮುಗಿಯಲಿದೆ ಎನ್ನುವಷ್ಟರಲ್ಲಿ ಹೊಸ ಅವತಾರದಲ್ಲಿ ಬಂದ ಭಾರ್ಗವಿ!
Recommended image3
Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ: ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved