ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾದ ಜೊತೆಜೊತೆಯಲಿ ಸೀರಿಯಲ್ ನಟಿ
ಜೊತೆಜೊತೆಯಲಿ ಸೀರಿಯಲ್ ನಲ್ಲಿ (Jothe Jotheyali) ಮಾನ್ಸಿಯಾಗಿ ಅಭಿನಯಿಸಿದ ಶಿಲ್ಪಾ ಅಯ್ಯರ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಹುಡುಗ ಯಾರು ಅನ್ನೋದನ್ನು ನೋಡೋಣ.

ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದ ನಟಿ ಶಿಲ್ಪಾ ಅಯ್ಯರ್ ( Shilpa Iyer) ಅವರು ಹೊಸ ಕನಸುಗಳೊಂದಿಗೆ ಹೊಸ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. `ಜೊತೆ ಜೊತೆಯಲಿ' ಸೀರಿಯಲ್ ನಲ್ಲಿ ಮಾನ್ಸಿ ಪಾತ್ರದಲ್ಲಿ ಮಿಂಚಿದ್ದ ನಟಿ ಶಿಲ್ಪಾ ಅವರು ಎಂಗೇಜ್ ಆಗಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.
ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲಿವಿನ ನಿಲ್ದಾಣ ಸೀರಿಯಲ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿರುವ ನಟಿ ಶಿಲ್ಪಾ ಅಯ್ಯರ್ ಅವರು ಇತ್ತೀಚಿಗೆ ಸಚಿನ್ ವಿಶ್ವನಾಥ್ (Sachin Vishwanath) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರವೇ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸೀರಿಯಲ್ ತಾರೆಯರ ಮದುವೆ, ನಿಶ್ಚಿತಾರ್ಥ ಸಾಲು, ಸಾಲಾಗಿ ನಡೆಯುತ್ತಿದ್ದು, ಇದೀಗ ಈ ಲಿಸ್ಟ್ ಗೆ ಶಿಲ್ಪಾ ಅವರು ಸಹ ಸೇರಿಕೊಂಡಿದ್ದಾರೆ. ಕುಟುಂಬಸ್ಥರು ನೋಡಿದ ಹುಡುಗನ ಜೊತೆ ಜನವರಿಯಲ್ಲಿ ಶಿಲ್ಪಾ ಅವರ ನಿಶ್ಚಿತಾರ್ಥ ನೆರವೇರಿದ್ದು, ಪ್ರೇಮಿಗಳ ದಿನ ಫೆ.14ರಂದು ತಮ್ಮ ಎಂಗೇಜ್‌ಮೆಂಟ್ ವೀಡಿಯೋ ಶೇರ್ ಮಾಡಿಕೊಳ್ಳುವ ಸಿಹಿಸುದ್ದಿ ನೀಡಿದ್ದಾರೆ.
ತಂದೆ ತಾಯಿ ಸೂಚಿಸಿದ ಹುಡುಗನಿಗೆ ಓಕೆ ಎಂದಿರುವ ಶಿಲ್ಪ ಅವರದ್ದು, ಪಕ್ಕಾ ಅರೇಂಜ್ ಮ್ಯಾರೇಜ್. ಇನ್ನು ಇವರ ಫಿಯಾನ್ಸಿ ಸಚಿನ್ ವಿಶ್ವನಾಥ್ ಅವರು ಲಾಯರ್ (Advocate) ಆಗಿ ಕೆಲಸ ಮಾಡುತ್ತಿದ್ದಾರೆ ಬೆಂಗಳೂರಿನವರೇ ಆಗಿರುವ ಸಚಿನ್ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. .
ಶಿಲ್ಪಾ ಅವರ ಎಂಗೇಜ್‌ಮೆಂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸದ್ಯದಲ್ಲೇ ಶಿಲ್ಪಾ ಅಯ್ಯರ್- ಸಚಿನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಮದುವೆ ದಿನಾಂಕ ಇನ್ನೂ ನಿಶ್ಚಯವಾಗಿಲ್ಲ, ಆದರೆ ಮೂಲಗಳ ಪ್ರಕಾರ ಎಪ್ರಿಲ್ ನಲ್ಲಿ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.
ಸುದ್ದಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಶಿಲ್ಪಾ ಅವರು ಕಿರುತೆರೆ ಸೀರಿಯಲ್ ಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಸದ್ಯ ಯಾವುದೇ ಸೀರಿಯಲ್ ನಲ್ಲಿ ಇವರು ನಟಿಸುತ್ತಿಲ್ಲ. ಮದುವೆಗೆ ತಯಾರಿ ನಡೆಸುವಲ್ಲಿ ಸದ್ಯ ನಟಿ ಬ್ಯುಸಿಯಾಗಿದ್ದಾರೆ.
ತಮ್ಮ ಭಾವಿ ಪತಿಯೊಂದಿಗಿನ ಫೋಟೋಗಳನ್ನು ಇವರು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದು, ವ್ಯಾಲೆಂಟೈನ್ಸ್ ಡೇ (valentines day) ದಿನ ಸಚಿನ್ ಸರ್ಫ್ರೆಸ್ ನೀಡಿರುವ ಫೋಟೋ ವಿಡೀಯೋಗಳನ್ನು ಹಂಚಿಕೊಂಡು ಸಂತೋಷ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.