Congratulations: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಆಶಿಕಾ ಪಡುಕೋಣೆ!
ಉದ್ಯಮಿ ಚೇತನ್ ಶೆಟ್ಟಿ ಜೊತೆ ಅಕ್ಟೋಬರ್ 18ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಆಶಿಕಾ ಮದುವೆ ಫೋಟೋ ಹಂಚಿಕೊಂಡಿದ್ದಾರೆ.

'ತ್ರಿನಯನಿ' (Trinayani)ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ಆಶಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಕ್ಟೋಬರ್ 18ರಂದು ಮಂಗಳೂರಿನಲ್ಲಿ (Mangalore)ಉದ್ಯಮಿ ಚೇತನ್ ಶೆಟ್ಟಿ (Chetan Kumar) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಒಬ್ಬರಿಗೊಬ್ಬರನ್ನು ಕಟ್ಟಿಕೊಂಡಿದ್ದೀವಿ ಎಂದು ಇನ್‌ಸ್ಟಾಗ್ರಾಂನಲ್ಲಿ (Instagram) ಫೋಟೋ ಹಂಚಿಕೊಂಡು ಬರೆದು ಕೊಂಡಿದ್ದಾರೆ.
ಗೋಲ್ಡ್ ಆ್ಯಂಡ್ ಕೆಂಪು ಬಣ್ಣದ ಸೀರೆಯಲ್ಲಿ (Saree) ಆಶಿಕಾ (Ashika Padukone), ಬಿಳಿ ಪಂಚೆ, ಶಲ್ಯಾ ಮತ್ತು ಪೇಟಾ ಧರಿಸಿ ಚೇತನ್ ಕಂಗೊಳ್ಳಿಸುತ್ತಿದ್ದಾರೆ.
ಮದುವೆ ಸಂಭ್ರಮದ ಪ್ರತಿ ಕ್ಷಣವನ್ನೂ ಆಶಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಡಿಸೈನರ್ ಔಟ್‌ಫಿಟ್‌ಗಳಿಗೆ (Designer outfit) ಮೆಚ್ಚುಗೆ ವ್ಯಕ್ತವಾಗಿದೆ.
ಆಶಿಕಾ ಆಪ್ತ ಸ್ನೇಹಿತರ ಸರ್ಪ್ರೈಸ್ ಬ್ಯಾಚುಲರ್ ಪಾರ್ಟಿ (Bachelor party) ಹಬ್ಬಿಕೊಂಡಿದ್ದರು. ಮರೂನ್ ಬಣ್ಣದ ಗೌನ್ ಮತ್ತು ಕಿರೀಟ ಧರಿಸಿದ ಆಶಿಕಾ ಪಾರ್ಟಿಯಲ್ಲಿ ಕಂಗೊಳಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.