ಅಬ್ಬಬ್ಬಾ! ಈ ಕಿರುತೆರೆ ನಟ-ನಟಿಯರು ಎಷ್ಟು ಸಣ್ಣ ಆಗಿದ್ದಾರೆ ನೋಡಿ...
ಕನ್ನಡ ಕಿರುತೆರೆ ನಟ-ನಟಿಯರು ಲಾಕ್‌ಡೌನ್ (Lockdown) ಸಮಯವನ್ನು ಒಂದೊಳ್ಳೆ ರೀತಿ ಕಳೆದಿದ್ದಾರೆ. ಎಲ್ಲರೂ ಮನೆಯಲ್ಲಿಯೇ ಜಿಮ್ (Gym), ಯೋಗ (yoga) ಮಾಡಿಕೊಂಡು ಸಮಯ ಕಳೆದಿದ್ದಾರೆ. ಇಲ್ಲಿದೆ ನೋಡಿ ಎಷ್ಟು ಸಣ್ಣ ಆಗಿದ್ದಾರೆಂದು.....

ಜನಪ್ರಿಯ ನಿರೂಪಕ, ನಟ ಹಾಗೂ ನೃತ್ಯಕಲಾವಿದ ಅಕುಲ್ ಬಾಲಾಜಿ (Akul Balaji) ಒಂದು ಸಮಯದಲ್ಲಿ ತುಂಬಾ ದಪ್ಪ ಆಗಿದ್ದರು. ಈಗ ಸಣ್ಣ ಅಗಿ ವೇದಿಕೆ ಮೇಲೆ ಫಿಟ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಅರಮನೆ ಗಿಣಿ ಧಾರಾವಾಹಿಯಲ್ಲಿ ಮಿಂಚಿದ ನಟ ಅರ್ಜುನ್ ಯೋಗಿ (Arjun Yogi) ಮ್ಯಾಸಿವ್ ಟ್ರಾನ್ಸ್‌ಫಾರ್ಮೇಶನ್ (Transformation) ಮಾಡಿಕೊಂಡಿದ್ದಾರೆ. ವರ್ಕೌಟ್ ಸಮಯದಲ್ಲಿ ಕನ್ನಡಿ ನೋಡುವಾಗ ನಾನು ಬದಲಾಗುತ್ತಿದ್ದ ರೀತಿ ನನಗೆ ಇನ್ನು ಹೆಚ್ಚು ವರ್ಕೌಟ್ ಮಾಡಲು ಪ್ರೋತ್ಸಾಹ ನೀಡುತ್ತಿತ್ತು ಎಂದಿದ್ದಾರೆ.
ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ಚಂದನ್ ಕುಮಾರ್ (Chandan Kumar) ಲಾಕ್‌ಡೌನ್ ಸಮಯದಲ್ಲಿ ದಪ್ಪ ಹೊಟ್ಟೆ ಕರಗಿಸಿ ಫಿಟ್ ಆಗಿದ್ದಾರೆ.
ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ಯೋತಿ ಕಿರಣ್ (jyothi Kiran) ಕೂಡ ತುಂಬಾನೇ ಸಣ್ಣ ಅಗಿದ್ದಾರೆ.
ಸತ್ಯ (Sathya) ಧಾರಾವಾಹಿಯಲ್ಲಿ ನಟಿಸುತ್ತಿರುವ ಸ್ಮಾರ್ಟ್ ವಿಲನ್ ಅನು ಜನಾರ್ದನ್ (Anu Jhanardhan) 2017ರಲ್ಲಿ ಗಳಿಸಿದ ಫ್ಯಾಟ್‌ನ ವರ್ಕೌಟ್ ಮತ್ತು ಡಯಟ್ ಮೂಲಕ ಕರಗಿಸಿದ್ದಾರೆ..
ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಐಶ್ವರ್ಯಾ (Aishwarya) ಕೂಡ ಒಂದು ವರ್ಷದ ಅವಧಿಯಲ್ಲಿ ಸಣ್ಣ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫಿಟ್ನೆಸ್ ಬದಲಾವಣೆ ಬರೆದುಕೊಂಡಿದ್ದಾರೆ.
ಜೊತೆ ಜೊತೆಯಲಿ (Jothe Jotheyalli) ಧಾರಾವಾಹಿಯ ಮಾನಸ ಮನೋಹರ್ (Manasa Manohar) ಕೂಡ ಲಾಕ್‌ಡೌನ್‌ನಲ್ಲಿ ವರ್ಕೌಟ್ ಮಾಡಿ ಸಣ್ಣ ಆಗಿದ್ದಾರೆ. ಅನೇಕ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಕ್ಷತ್ರಾ ಧಾರಾವಾಹಿಯ ಜಗನ್ನಾಥ್ ಚಂದ್ರಶೇಖರ್ (Jagannath Chandrashekar) ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.