ಸೀರಿಯಲ್ ಸೆಟ್‌ನಲ್ಲೇ ಪ್ರೀತಿ: ಸಹ ನಟ- ನಟಿಯರನ್ನೇ ಮದುವೆಯಾದ ಹಾಟ್ ಜೋಡಿಗಳಿವರು
ಬೆಂಗಳೂರು (ಆ.17): ಕನ್ನಡದ ಧಾರವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಪರಸ್ಪರವಾಗಿ ಪ್ರೀತಿಸಿ, ಮದುವೆಯಾಗಿರುವ ಮುದ್ದಾದ ಜೋಡಿಗಳು ಇಲ್ಲಿದ್ದಾರೆ ನೋಡಿ. ಇಲ್ಲಿ 2010ರಿಂದ ಇತ್ತೀಚೆಗೆ ಬಂದ ನಟ ನಟಿಯರೇ ಹೆಚ್ಚಿನ ಪ್ರಮಾಣದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರವಾಹಿಯ ತಾಂಡವ ಸ್ಯಾಂಡಲ್ವುಡ್ ನಟಿ ಸಂಗೀತಾ ಭಟ್ ಅವರು ಪತಿ ಆಗಿದ್ದಾರೆ. ಅವರ ನಿಜವಾದ ಹೆಸರು ಸುದರ್ಶನ್ ರಂಗಪ್ರಸಾದ್ ಆಗಿದ್ದು, ಇತ್ತೀಚೆಗೆ 7ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಸ್ಪೆಷಲ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ರಾಮಾಚಾರಿ'ಯಲ್ಲಿ ವಿಲನ್ ವೈಶಾಖಳಾಗಿ ಕಾಣಿಸಿಕೊಂಡಿರುವ ಐಶ್ವರ್ಯಾ ಸಾಲಿಮಠ್ ಧಾರವಾಹಿಯ ಸಹ ಕಲಾವಿದರನ್ನೇ ಮದುವೆ ಮಾಡಿಕೊಂಡಿದ್ದಾರೆ. ಅವರ ಕ್ಯೂಟ್ ಫೋಟೋ ಇಲ್ಲಿದೆ ನೋಡಿ.
ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಅತ್ಯಂತ ಚಿರಪರಿಚಿತರಾದ ಕವಿತಾಗೌಡ ಮತ್ತು ಚಂದನ್‌ಗೌಡ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಇಬ್ಬರೂ ಬೆಳ್ಳಿ ತೆರೆಗೆ ಕಾಲಿಟ್ಟು ಸಿನಿಮಾಗಳಲ್ಲಿಯೂ ನಾಯಕ, ನಾಯಕಿಯಾಗಿ ಪಾತ್ರ ಮಾಡಿದ್ದಾರೆ.
ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಧಾರಾವಾಹಿ ನಡೆಯುವಾಗ ಅಮೃತಾ ರಾಮಮೂರ್ತಿ ಮತ್ತು ರಾಘವೇಂದ್ರನ ನಡುವೆ ಪ್ರೀತಿ ಹುಟ್ಟಿತ್ತು. ಈ ಸುಂದರ ದಂಪತಿಗೆ ಈಗ ಪುಟ್ಟ ಮಗಳಿದ್ದಾಳೆ.
ಕನ್ನಡ ಕಿರುತೆರೆಯಲ್ಲಿ 'ಕುಲವಧು' ಮಿಂಚಿರುವ ದೀಪಿಕಾ ಬೆಳ್ಳಿಪರದೆ ಮೇಲೂ ರಾರಾಜಿಸಿದ್ದಾರೆ. 'ನನ್ ಮಗಳೇ ಹೀರೋಯಿನ್' ಮತ್ತು 'ಚಿಟ್ಟೆ' ಚಿತ್ರಗಳಲ್ಲೂ ದೀಪಿಕಾ ಕಾಣಿಸಿಕೊಂಡಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ 'ಮಾನಸ ಸರೋವರ' ಧಾರಾವಾಹಿಯಲ್ಲಿ ನಟಿಸಿದ್ದ ಆಕರ್ಷ್ ಜೊತೆ ವಿವಾಹ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 5 ವಿಜೇತ ಚಂದನ್ ಶೆಟ್ಟಿ ಹಾಗೂ ಅದೇ ಸೀಸನ್‌ನ ಗೆಳತಿ ನಿವೇದಿತಾ ಗೌಡ ಅವರನ್ನು ವಿವಾಹವಾದರು. ನಿವೇದಿತಾಗೌಡ ಗಿಚ್ಚಿಗಿಲಿಗಿಲಿ ಕಾಮಿಡಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಪ್ರೀತಿ ಚಿಗುರಿದ ಪರಿಣಾಮ ಗೋವಿಂದೇ ಗೌಡ ಮತ್ತು ದಿವ್ಯಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಗೋವಿಂದೇಗೌಡ ಹಾಗೂ ದಿವ್ಯಶ್ರೀ ದಂಪತಿ ಒಂದು ಮಗುವಿನ ಪೋಷಕರು ಆಗಿದ್ದಾರೆ.
ಕನ್ನಡ ಕಿರುತೆರೆಯಲ್ಲಿ 1986ರಲ್ಲಿ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾದ ಸಿಹಿ ಕಹಿ ಧಾರಾವಾಹಿಯಲ್ಲಿ ಚಂದ್ರು ಮತ್ತು ಗೀತಾ ಭೇಟಿಯಾಗಿತ್ತು. ಇವರು 1990ರಲ್ಲಿ ಮದುವೆ ಆಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು, ಅದರಲ್ಲಿ ಒಬ್ಬ ಮಗಳನ್ನು ಸಿನಿಮಾ ನಟ ಕಿರಣ್‌ಗೆ ಕೊಟ್ಟು ಮದುವೆ ಮಾಡಿದ್ದಾರೆ.