ಕನ್ನಡ ಬಿಟ್ಟು ತೆಲುಗು ಬಿಗ್‌ಬಾಸ್‌ಗೆ ಹಾರಿದ ಪುನೀತ್ ರಾಜ್‌ಕುಮಾರ್ ತಂಗಿ!
ಪುನೀತ್ ರಾಜ್‌ಕುಮಾರ್ ತಂಗಿಯಾಗಿ ಮಿಂಚಿದ್ದ ಕಿರುತೆರೆ ನಟಿ ಶೋಭಾ ಶೆಟ್ಟಿ ಈಗ ತೆಲುಗು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡತಿ , 'ಅಗ್ನಿಸಾಕ್ಷಿ' ಧಾರಾವಾಹಿ ನಟಿಯಾಗಿ ಇದ್ದ ಇವರು ತೆಲುಗು ಬಿಗ್ ಬಾಸ್ ಶೋನ 7 ನೇ ಸೀಸನ್ ಗೆ ಸ್ಪರ್ಧಿಯಾಗಿ ಒಳ ಹೋಗಿದ್ದಾರೆ. ತೆಲುಗು ಕಿರುತೆರೆಯಲ್ಲಿ ಈಕೆ ತುಂಬಾ ಫೇಮಸ್ ನಟಿಯಾಗಿದ್ದಾರೆ.
ಸೆಪ್ಟೆಂಬರ್ 03 ರಂದು ತೆಲುಗು ಬಿಗ್‌ಬಾಸ್ ಮತ್ತೆ ಆರಂಭವಾಗಿದ್ದು, 14ಯನ್ನು ಮನೆಯೊಳಗೆ ಸ್ಪರ್ಧಿಗಳನ್ನಾಗಿ ಕಳುಹಿಸಲಾಗಿದೆ. ಕನ್ನಡತಿ , 'ಅಗ್ನಿಸಾಕ್ಷಿ' ಧಾರಾವಾಹಿ ನಟಿ ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್ ಶೋನ 7 ನೇ ಸೀಸನ್ ಗೆ ಸ್ಪರ್ಧಿಯಾಗಿ ಒಳ ಹೋಗಿದ್ದಾರೆ.
ಶೋಭಾ ಶೆಟ್ಟಿ ಅವರು ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿದ್ದು, ತುಂಬಾ ಫೇಮಸ್ ನಟಿ ಎನಿಸಿಕೊಂಡಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆದು ತೆಲುಗು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ ಎಂದು ಸುದ್ದಿ ಹಬ್ಬಿದೆ.
ಇತರ ಸ್ಪರ್ಧಿಗಳಿಗಿಂತ ಹೆಚ್ಚು ಸಂಭಾವನೆ ಅಂದರೆ ಒಂದು ವಾರಕ್ಕೆ 1.25 ಲಕ್ಷ ರೂ ನಿಂದ 1.50 ಲಕ್ಷ ರೂಪಾಯಿ ಸಂಭಾವನೆ ಸಿಗಲಿದೆ ಎನ್ನಲಾಗುತ್ತಿದೆ. ಉಳಿದ ಸ್ಪರ್ಧಿಗಳಿಗೆ ಶೋಭಾ ಅವರಿಗಿಂತ ಕಡಿಮೆ ಸಂಭಾವನೆ ಎಂದು ಗುಲ್ಲೆದ್ದಿದೆ.
'ಪಡುವಾರಹಳ್ಳಿ ಪಡ್ಡೆಗಳು' ಧಾರಾವಾಹಿಯೊಂದಿಗೆ ನಟನಾ ಜಗತ್ತಿಗೆ ಕಾಲಿಟ್ಟ ಶೋಭಾ ಅವರಿಗೆ ವೈಷ್ಣವಿ ಗೌಡ, ವಿಜಯ್ ಸೂರ್ಯ ನಟನೆಯ 'ಅಗ್ನಿಸಾಕ್ಷಿ' ಧಾರಾವಾಹಿ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ಈ ಧಾರವಾಹಿಯಲ್ಲಿ ತನು ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆ ನಂತರ ಅವರು ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿಯಾದರು.
ಸ್ಟಾರ್ ಸುವರ್ಣ ವಾಹಿನಿಯ 'ನಮ್ಮ ರುಕ್ಕು' ಧಾರಾವಾಹಿಯಲ್ಲಿ ಶೋಭಾ ನಟಿಸಿದ್ದರು. 2017ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ನಟನೆಯ ಅಂಜನೀಪುತ್ರ ಸಿನೆಮಾದಲ್ಲಿ ತಂಗಿಯಾಗಿ ನಟಿಸಿದ್ದರು.
2017 ರಲ್ಲಿ ಶೋಭಾ ಶೆಟ್ಟಿ ಅವರು "ಅಷ್ಟ ಚೆಮ್ಮಾ" ಧಾರವಾಹಿ ಮೂಲಕ ತೆಲುಗು ದೂರದರ್ಶನದಲ್ಲಿ ತಮ್ಮ ಛಾಪು ಮೂಡಿಸಿದರು. 2018 ರಲ್ಲಿ "ಅಷ್ಟ ಚೆಮ್ಮಾ" ನಲ್ಲಿನ ಅವರ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಸ್ಟಾರ್ ಮಾ ಪರಿವಾರ್ ಪ್ರಶಸ್ತಿಯನ್ನು ಗಳಿಸಿತು. ನಂತರ "ಕಾರ್ತಿಕ ದೀಪಂ" ನಲ್ಲಿನ ಅವರ ನೆಗೆಟಿವ್ ಪಾತ್ರಕ್ಕಾಗಿ ಅವರು ಮನ್ನಣೆ ಪಡೆದರು. 2019 ರಲ್ಲಿ ಈ ನೆಗೆಟಿವ್ ಪಾತ್ರಕ್ಕಾಗಿ ಸ್ಟಾರ್ ಮಾ ಪರಿವಾರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
33 ವರ್ಷ ವಯಸ್ಸಿನ ಶೋಭಾ ಶೆಟ್ಟಿ ಬೆಂಗಳೂರಿನಲ್ಲಿ ಜನಿಸಿದರು. ಕರ್ನಾಟಕದ ದಾವಣಗೆರೆಯ ಬಾಪೂಜಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ M.Sc. ಪದವಿ ಪಡೆದಿದ್ದಾರೆ. ನಟನಾ ವೃತ್ತಿಯಲ್ಲಿ ಇಲ್ಲದಿರುತ್ತಿದ್ದರೆ ಅವರು ಇಂಜಿನಿಯರ್ ಆಗುತ್ತಿದ್ದರು.
ನಟ ನಾಗಾರ್ಜುನ ಅಕ್ಕಿನೇನಿ ಅವರು ಎಂದಿನಂತೆ ಈ ಶೋನ ನಿರೂಪಣೆ ಮಾಡುತ್ತಿದ್ದು, ಹಿರಿಯ ನಟ ಶಿವಾಜಿ ,ನಟಿ ಶಕೀಲಾ ,ದಾಮಿನಿ ಭಾಟ್ಲಾ , ಪ್ರಿಯಾಂಕಾ ಜೈನ್, ಶಿವ ಜ್ಯೋತಿ, ಫ್ರಿನ್ಸ್ ಯುವರ್, ಸುಭಾ ಶ್ರೀ ರಾಯಗುರು, ಸಂದೀಪ್, ಟೆಸ್ಟಿ ತೇಜ್, ರೋತಿ ರೋಜಾ, ಗೌತಮ್ ಕೃಷ್ಣ,ಕಿರಣ್ ರಾಥೋಡ್, ರಥಿಕಾ, ಪಲ್ಲವಿ ಪ್ರಶಾಂತ್, ಅಮರ್ದೀಪ್ ಚೌಧರಿ ಮುಂತಾದವರಿದ್ದಾರೆ.