- Home
- Entertainment
- TV Talk
- ಬೋಲ್ಡ್ ಫೋಟೋ ಹಂಚಿಕೊಂಡು 'ಬೀ ಕೇರ್‌ಫುಲ್' ಎಂದ ಸಾರಾ ಅಣ್ಣಯ್ಯ: ನಿಮ್ ಮನಸ್ಸು ದೊಡ್ಡದು ಎಂದ ಫ್ಯಾನ್ಸ್
ಬೋಲ್ಡ್ ಫೋಟೋ ಹಂಚಿಕೊಂಡು 'ಬೀ ಕೇರ್‌ಫುಲ್' ಎಂದ ಸಾರಾ ಅಣ್ಣಯ್ಯ: ನಿಮ್ ಮನಸ್ಸು ದೊಡ್ಡದು ಎಂದ ಫ್ಯಾನ್ಸ್
ಕನ್ನಡತಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಆದ ಈ ಚೆಲುವೆ ಎಲ್ಲರ ಮನ ಸೆಳೆಯುವಲ್ಲಿ ಸಫಲರಾದರು. ನಮ್ಮ ಲಚ್ಚಿ ಎಂಬ ಧಾರಾವಾಹಿಯಲ್ಲಿ ಮಿಂಚಿದ್ದರು ಸಾರಾ ಅಣ್ಣಯ್ಯ. ಇದೀಗ ಹಳದಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ.

ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ಸುಂದರವಾದ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹಳದಿ ಬಣ್ಣದ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಈ ಕನ್ನಡತಿ ಚೆಲುವೆ.
ನಟಿ ಬ್ರೈಟ್ ಹಳದಿ ಬಣ್ಣದ ಡ್ರೆಸ್ ಧರಿಸಿ ಸೂರ್ಯಕಾಂತಿಯಂತೆ ಕಂಗೊಳಿಸಿದ್ದಾರೆ. ಇದರಲ್ಲಿ ಅವರ ಆಕರ್ಷಕ ಲುಕ್ ಆಕರ್ಷಕವಾಗಿ ಕಾಣಿಸಿದ್ದು ಹಸಿರಿನ ಮಧ್ಯೆ ಸ್ಟೈಲಿಷ್ ಪೋಸ್ಗಳನ್ನು ಕೊಟ್ಟಿದ್ದಾರೆ. ನಟಿ ಕೆಂಪು ಬಣ್ಣದ ಸ್ಲಿಂಗ್ ಬ್ಯಾಗ್ ಧರಿಸಿದ್ದರು.
ಬ್ಲ್ಯಾಕ್ ಕನ್ನಡಕ ಧರಿಸಿದ್ದ ಸಾರಾ ಅಣ್ಣಯ್ಯ ಅವರು ಗಲ್ಲದ ಮೇಲೆ ಕೈಇಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಟಿ ಯಾವುದೇ ಸರ ಅಥವಾ ಕಿವಿಯೋಲೆ ಕೂಡಾ ಧರಿಸಿರಲಿಲ್ಲ. ಅವರ ಲಿಪ್ಸ್ಟಿಕ್ ಕೂಡಾ ಹೈಲೈಟ್ ಆಗಿತ್ತು.
ನೆಟ್ಟಿಗರು, ಸೂಪರ್ ಮೇಡಂ. ತುಂಬಾ ಕ್ಯೂಟ್ ಆಗಿ ಇದ್ದೀರಾ. ಬ್ಯೂಟಿಫುಲ್. ನೀವು ಅಂಥಹ ಡ್ರೆಸ್ ಧರಿಸಬೇಕಾಗಿಲ್ಲ. ನಿಮ್ ಮನಸ್ಸು ದೊಡ್ಡದು ಅಂತೆಲ್ಲಾ ತರೇಹವಾರಿ ಕಾಮೆಂಟ್ ಮಾಡಿದ್ದಾರೆ.
ಕನ್ನಡತಿ ಸೀರಿಯಲ್ನಲ್ಲಿ ಹೇಗೆ ಮಾಡರ್ನ್ ಆಗಿದ್ದರೋ ಅದೇ ರೀತಿ ಸಾರಾ ಅಣ್ಣಯ್ಯ ನಿಜ ಜೀವನದಲ್ಲಿಯೂ ಮಾಡರ್ನ್, ಕಾರಣ ಅವರು ನಟಿಯಷ್ಟೇ ಅಲ್ಲದೆ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಅವರು ಸ್ಟೈಲಿಷ್ & ಮಾಡರ್ನ್ ಆಗಿದ್ದಾರೆ.
ಸಾರಾ ಅಣ್ಣಯ್ಯ ಅವರು ಅಪ್ಪಟ ಕೊಡಗಿನ ಕುವರಿ. ಇವರು ಮಡಿಕೇರಿ ಮೂಲದವರು. ಆದರೆ ಅವರಿಗೆ ಹೆಚ್ಚಿನ ಮನ್ನಣೆ ತಂದುಕೊಂಡಿದ್ದು ಕನ್ನಡದ ಕನ್ನಡತಿ ಸೀರಿಯಲ್ನ ವರೂಧಿನಿ ಪಾತ್ರ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಸಾರಾ ಅವರು ವಿಡಿಯೋ, ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಸದ್ಯ ಅವರ ಈಗಿನ ಫೋಟೋಸ್ ವೈರಲ್ ಆಗಿವೆ.