'ಮನಸೆಲ್ಲಾ ನೀನೆ' ಧಾರಾವಾಹಿ ನಟಿ Priyanka Chincholiಗೆ ಕೊರೋನಾ ಪಾಸಿಟಿವ್!
ಹೋಮ್ ಕ್ವಾರಂಟೈನ್ ಆಗಿದ್ದಾರೆ ಧಾರಾವಾಹಿ ನಟಿ ಪ್ರಿಯಾಂಕಾ. ಕೋವಿಡ್ ಟೆಸ್ಟ್ ರಿಪೋರ್ಟ್ ಪೋಟೋ ಹಂಚಿಕೊಂಡಿದ್ದಾರೆ.
ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನಸೆಲ್ಲಾ ನೀನೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ನಟಿ ಪ್ರಿಯಾಂಕಾ ಚಿಂಚೋಳಿ.
ಪ್ರಿಯಾಂಕಾ ಚಿಂಚೊಳಿ ಅವರಿಗೆ ಕೊರೋನಾ ಸೋಂಕು ತಗುಲಿದೆ, ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
'ನನಗೆ ಕೊರೋನಾ ವೈರಸ್ ಪಾಸಿಟಿವ್ ಆಗಿದೆ, ನಾನು ಈಗ ಕ್ವಾರಂಟೈನ್ (Quarantine) ಮೋಡ್‌ನಲ್ಲಿರುವೆ' ಎಂದು ಬರೆದುಕೊಂಡಿದ್ದಾರೆ.
ಎಲ್ಲರು ದಯವಿಟ್ಟು ಮಾಸ್ಕ್ ಧರಿಸಿ. ಸುರಕ್ಷಿತೆಯಿಂದಿರಿ, ಎಂದು ಅಭಿಮಾನಿಗಳಲ್ಲಿ ಪ್ರಿಯಾಂಕಾ (Priyanka Chincholi) ಮನವಿ ಮಾಡಿಕೊಂಡಿದ್ದಾರೆ.
2021ರ ಡಿಸೆಂಬರ್‌ನಲ್ಲಿ ಪ್ರಿಯಾಂಕಾ ಮತ್ತು ಉದ್ಯಮಿ ರಾಕೇಶ್ (Rakesh) ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ (Marrigae) ಕಾಲಿಟ್ಟರು.
ರಾಕೇಶ್ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಕಾರಣ ಮ್ಯಾರೇಜ್ ಸರ್ಟಿಫಿಕೇಟ್‌ಗಾಗಿ ಆಗಸ್ಟ್ ತಿಂಗಳಲ್ಲಿಯೇ ರಿಜಿಸ್ಟರ್ ಮ್ಯಾರೇಜ್ (Register Marriage) ಮಾಡಿಕೊಂಡಿದ್ದರು.