ಡೊಳ್ಳು ಹೊಟ್ಟೆಯಿಂದ 6 ಪ್ಯಾಕ್ಸ್ ಹೊಟ್ಟೆ, ನಟ ಚಂದನ್ ಬಾಡಿ ಟ್ರಾನ್ಸ್‌ಫಾರ್ಮೇಶನ್!
ಫಿಟ್ನೆಸ್ ಫ್ರೀ ಚಂದನ್ ಬಾಡಿ ಟ್ರಾನ್ಸ್‌ಫಾರ್ಮೇಶನ್ ಲುಕ್ ವೈರಲ್. ಯಾವ ಬಾಲಿವುಡ್ ನಟನಿಗೂ ಕಡಿಮೆ ಇಲ್ಲ ನಮ್ಮ ಹುಡುಗ ಎಂದ ನೆಟ್ಟಿಗರು
ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ನಟ ಚಂದನ್ ಕುಮಾರ್ ಇದೀಗ ಫಿಟ್ನೆಸ್ ಫ್ರೀಕ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ 6 ಪ್ಯಾಕ್ ಫೋಟೋ ಹಂಚಿಕೊಂಡಿದ್ದಾರೆ.
'ಜುಲೈ 2021ರಿಂದ ಮಾರ್ಚ್ 2022ರ ಅವಧಿಯಲ್ಲಿ ಮಾಡಿದ ಟ್ರಾನ್ಸ್‌ಫಾರ್ಮೇಷನ್. ಅಂಬೆಗಾಲಿಟ್ಟು ನನ್ನ ಫಿಟ್ನೆಸ್ ಜರ್ನಿ ಶುರು ಮಾಡಿರುವೆ' ಎಂದು ಚಂದನ್ ಬರೆದುಕೊಂಡಿದ್ದಾರೆ.
'ನಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿ ಫಿಟ್ನೆಸ್‌ಗೆ ಶ್ರಮ ಹಾಕಿರುವೆ. ಇದು ನನ್ನ ಟಫೆಸ್ಟ್ ಕಮ್ ಬ್ಯಾಕ್. ಸಾಧಿಸುವುದಕ್ಕೆ ತುಂಬಾನೇ ಇದೆ' ಎಂದಿದ್ದಾರೆ ಚಂದನ್.
'ಲೈಫ್ ಬ್ಯುಸಿಯಾಗಿಟ್ಟುಕೊಳ್ಳಬೇಕು ಅಂದ್ರೆ ಏನಾದರೂ ಒಂದು ಮಾಡಬೇಕು. ನನ್ನ ಮುಂದಿನ ಸಿನಿಮಾ ಲಾಂಚ್‌ಗೆ ಕಾಯುತ್ತಿರುವೆ. ಸಂಪರ್ಕದಲ್ಲಿ ಇರಿ ನನ್ನ ಗೆಳೆಯರೆ' ಎಂದು ಚಂದನ್ ಹೇಳಿದ್ದಾರೆ.
ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಚಂದನ್ ಗೌಡ ಮತ್ತು ಕವಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರು ಹಲವು ವರ್ಷಗಳಿಂದ ಪ್ರೀತಿಸಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ಚಂದನ್ ನಟಿಸುತ್ತಿದ್ದಾರೆ. ಈಗ ತಮ್ಮ ಹೊಸ ಸಿನಿಮಾ ಪ್ರಾಜೆಕ್ಟ್‌ಗಳನ್ನು ಅನೌನ್ಸ್ ಮಾಡಲು ರೆಡಿಯಾಗಿದ್ದಾರೆ.