ರಾಜ್ ಬಿ ಶೆಟ್ಟಿ ನನ್ನ ಆಧ್ಯಾತ್ಮ ಗುರು, ರಕ್ಷಿತ್ ಶೆಟ್ಟಿ ತಿಂಡಿಪೋತ: ನಿರೂಪಕಿ ಅನುಶ್ರೀ
ಕನ್ನಡದ ಪ್ರಸಿದ್ಧ ನಿರೂಪಕಿ, ಕರಾವಳಿ ಬೆಡಗಿ ಅನುಶ್ರೀ ಅವರು ಮೊದಲ ಬಾರಿಗೆ ತುಳು ಸಂದರ್ಶನ ನೀಡಿದ್ದು, ತುಳುವಿನ ಪಾಡ್ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮ ದಿ ಪವರ್ ಹೌಸ್ ವೈನ್ಸ್ ಯೂಟ್ಯೂಬ್ ನಲ್ಲಿ ಲಭ್ಯವಿದೆ. ನಟ ರಕ್ಷಿತ್ ಮತ್ತು ರಾಜ್ ಬಿ ಶೆಟ್ಟಿ ಯವರ ಬಗ್ಗೆ ಮಾತನಾಡಿದ್ದಾರೆ.
ರಾಜ್ ಬಿ ಶೆಟ್ಟಿ ಅವರೊಬ್ಬ ಸ್ವೀಟ್ ಹಾರ್ಟ್, ನನ್ನ ಜೀವನದ ಯೋಚನೆಗಳನ್ನು ಬದಲಿಸಿದ ನನ್ನ ಜೀವನದ ಗುರು. ಹಾಗೆ ಹೇಳಿದ್ರೆ ಅವರಿಗೆ ಸಿಟ್ಟು ಬರುತ್ತದೆ. ಸುಮ್ಮನಿರು ಅಂತ ಬೈತಾರೆ. ಆದ್ರೆ ಅವರಿಗೆ ಗೊತ್ತಿಲ್ಲ. ನನ್ನ ಜೀವನದಲ್ಲಿ ಅವರಿಂದ ಎಷ್ಟು ಬದಲಾವಣೆಯಾಗಿದೆಯೆಂದು. ಬಹುಮುಖ್ಯ ಅಂಶವೆಂದರೆ ನಾನು ಜೀವನವನ್ನು ನೋಡುವ ರೀತಿಯನ್ನು ಅವರು ಬದಲಿಸಿದರು. ನನ್ನ ಜೀವನದ ಬಗ್ಗೆಯೇ ನಾನು ತುಂಬಾ ಜಡ್ಜ್ ಮಾಡುತ್ತಿದ್ದೆ. ಅಂದರೆ ನನ್ನ ಸುತ್ತ ನಾನೇ ಒಂದು ಕೋಟೆ ಹಾಕಿದ್ದೆ. ಹೀಗೆ ಇರಬೇಕು. ಹೀಗೆ ಮಾಡಬೇಕು. ಅಲ್ಲಿ ಹೋಗಬಾರದು ಇಲ್ಲಿ ಹೋಗಬಾರದೆಂದು ಆದರೆ ರಾಜ್ ಎಲ್ಲವನ್ನೂ ಮುರಿದರು.
raj b shetty and anushree
ಚಿಕ್ಕ ಚಿಕ್ಕ ವಿಚಾರಗಳನ್ನು ಜೀವನದಲ್ಲಿ ಎಂಜಾಯ್ ಮಾಡುವುದನ್ನು ನಾನು ರಾಜ್ ಅವರನ್ನು ನೋಡಿಯೇ ಕಲಿತಿದ್ದು, ನಾನು ಅವರಿಗೆ ಏಕಲವ್ಯ, ಅವರು ನನ್ನ ಆಧ್ಯಾತ್ಮಿಕ ಗುರು. ನನ್ನ ಜೀವನದ ಬೆಸ್ಟ್ ಫ್ರೆಂಡ್ ಕೊಟ್ಟಿದ್ದು ರಾಜ್. ಶಾಮಿಲ, ರವಿ ಅಣ್ಣ, ಅರ್ಪಿತಾ, ತ್ರಿಶಾ, ಪ್ರತೀಕ್, ಇವರೆಲ್ಲ ನನ್ನ ಜೀವನದ ಅತ್ಯಂತ ಪ್ರೀತಿಯ ಪ್ರೆಂಡ್ಸ್. ಇವರೆಲ್ಲ ನನಗೆ ಸಿಕ್ಕಿದ್ದು ರಾಜ್ ಬಿ ಶೆಟ್ಟಿಯಿಂದ.
ರಾಜ್ ಯಾವತ್ತೂ ಒಬ್ಬ ವ್ಯಕ್ತಿಯನ್ನು ಜಡ್ಜ್ ಮಾಡೋದಿಲ್ಲ. ತಪ್ಪು ಮಾಡಿದರೂ ಕೂಡ ಏನೂ ಹೇಳುವುದಿಲ್ಲ, ನಾವು ಮನಷ್ಯರು ತಪ್ಪುಗಳನ್ನು ಮಾಡುತ್ತೇವೆ. ತಪ್ಪುಗಳೇ ಮಾಡಬಾರದು ಎಂದಿದ್ದರೆ, ಅದನ್ನೇ ದೊಡ್ಡ ತಪ್ಪು ಮಾಡಿರುತ್ತಾರೆ. ನಾನು ಯಾವತ್ತೇ ಮಂಗಳೂರಿಗೆ ಬಂದರು. ಅವರ ಆಫೀಸ್ ನಲ್ಲಿ ನಾನು ಸಿಕ್ಕಿಯೇ ಸಿಗುತ್ತೇನೆ. ಕಾಪಿಕಾಡ್ ನಲ್ಲಿರುವ ಅವರ ಆಫೀಸ್ ಗೆ ಹೋಗುವುದೆಂದರೆ ನನಗೆ ಹೀಲಿಂಗ್. ಅವರ ಮುದ್ದಿನ ನಾಯಿಗಳಾದ ಜಿಗ್ಗಿ, ಪ್ಯಾಬ್ಲೋ, ಮರಿಯಾ ಜೊತೆಗೆ ಒಂದು ರೌಂಡು ಹೋಗುತ್ತೇನೆ. ಅಲ್ಲಿನ ಬ್ಲಾಕ್ ಟೀ ಕುಡಿದರೆ ನನಗೆ ಖುಷಿ ಎಂದಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಬಗ್ಗೆ ಮಾತನಾಡುತ್ತಾ, ಅವರು ಒಬ್ಬ ಜಂಟಲ್ ಮ್ಯಾನ್, ಅವರು ಅಧಿಕ ಪ್ರಸಂಗ ಏನೂ ಮಾತನಾಡುವುದಿಲ್ಲ. ಯಾರ ಬಗ್ಗೆ ಏನೂ ಕೂಡ ಬ್ಯಾಡ್ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ನಾವೇನಾದರೂ ಮಾತನಾಡಿದ್ರೆ ಹ್ಹಾ... ಎಂದು ಸುಮ್ಮನಾಗುತ್ತಾರೆ. ಕೆಲಸ ಮತ್ತು ಆಧ್ಯಾತ್ಮದ ಬಗ್ಗೆ ಮಾತನಾಡುವುದಾದರೆ ಅವರು ನಿಮ್ಮ ಬಳಿ ಮಾತನಾಡುತ್ತಾರೆ. ಅವರು ಮಹಿಳೆಯರಿಗೆ ಕೊಡುವ ಗೌರವ ಅದ್ಭುತ. ಅವರೊಬ್ಬ ಜಂಟಲ್ ಮ್ಯಾನ್.
ಆದರೆ ರಕ್ಷಿತ್ ಶೆಟ್ಟಿ ತಿನ್ನುವಾಗ ಮಾತ್ರ ನೀವು ನನಗೆ ಸಿಗುತ್ತಾ ಎಂದು ಊಹಿಸಿಕೊಳ್ಳುವುದು ಕೂಡ ಬೇಡ. ಅದರ ಬಗ್ಗೆ ಯೋಚನೆ ಕೂಡ ಬೇಡ. ದೊಡ್ಡ ಬಾಕ್ಸ್ ಪಾಪ್‌ಕಾರ್ನ್ ಹಿಡಿದುಕೊಂಡು ಕುಳಿತುಕೊಳ್ತಾರೆ. ಶೆಟ್ರೆ ನಮಗೂ ಕೊಡಿ ಅಂದ್ರೆ, ಒಂದ್ ಚೂರು ಕೊಡ್ತಾರೆ. ಮತ್ತೆ ಸ್ವಲ್ಪ ಹೊತ್ತಾದ ನಂತ್ರ ತಿನ್ನುತ್ತೀರಾ ಅಂತ ಕೇಳ್ತಾರೆ. ಅವರೊಬ್ಬ ಪರಿಶುದ್ಧವಾದ ಮನಸ್ಸಿನ ವ್ಯಕ್ತಿ. ಅವರಿಗೆ ಕಳಸದ ಕಾಫಿ ಗುಡ್ಡದ ಕಬಾಬ್ ಎಂದರೆ ಬಲು ಇಷ್ಟ.
ರಕ್ಷಿತ್ ಶೆಟ್ಟಿ ನಿಮ್ಮ ಚಾನೆಲ್ ಗೆ ಬಂದರೆ ಯಾಕೆ ಮಿಲಿಯನ್ ಗಟ್ಟಲೆ ವ್ಯೂವ್ಸ್ ಬರುತ್ತದೆ ಎಂದು ಎಷ್ಟೊ ಜನ ನನ್ನ ಬಳಿ ಕೇಳಿದ್ದರು. ಯಾಕಂದ್ರೆ ನಾನು ಅವರಲ್ಲಿ ನಾನ್ ಸೆನ್ಸ್ ಪ್ರಶ್ನೆಗಳನ್ನು ಕೇಳುವುದಿಲ್ಲ. ಯಾರೋ ಅವರ ಬಳಿ ಕೇಳಿದ್ದರಂತೆ ನೀವು ಅಲ್ಲೆಲ್ಲ (ಅನುಶ್ರೀ ಚಾನೆಲ್) ಹೇಗೆ ಚಂದ ಮಾತನಾಡುತ್ತೀರಿ ಎಂದು, ಅದಕ್ಕೆ ರಕ್ಷಿತ್ ಅವರು ಸೆನ್ಸಿಬೆಲ್ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಹೇಳಿದ್ದರಂತೆ. ನಾನು ಯಾವತ್ತೂ ಅವರಲ್ಲಿ ನಾನ್ ಸೆನ್ಸ್ ಪ್ರಶ್ನೆಗಳನ್ನು ಕೇಳುವುದಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಯಾವಾಗಲೂ ಅವರ ಬಳಿ ಟಚ್ ನಲ್ಲಿ ಇದ್ದೇನೆಂದು ಅಲ್ಲ.
ಯಾವಾಗಲಾದರೂ ಅಪರೂಪಕ್ಕೆ ಬೇಕಾದ ವಿಷ್ಯಕ್ಕೆ ಮಾತ್ರ ರಕ್ಷಿತ್ ಬಳಿ ಮಾತನಾಡುತ್ತೇನೆ. ಅವರು ನನ್ನ ಫ್ರೆಂಡ್ ಹಾಗೆಲ್ಲ ಏನೂ ಇಲ್ಲ. ಅವರು ಕಂಫರ್ಟೆಬಲ್ ಆಗಿದ್ದಾರೆ. ರಕ್ಷಿತ್ ಒಬ್ಬ ತುಂಬಾ ಜಾಲಿ ಮನುಷ್ಯ. ಅವರೊಬ್ಬ ಒಳ್ಳೆ ಮಾತುಗಾರ. ಅವರೊಬ್ಬ ಒಳ್ಳೆಯ ಬರಹಗಾರ. ಅವರು ಬರೆದ ಒಂದು ಹಾಡು, ನಾ ಈ ಸಂಜೆಗೆ (ಗೋಧಿ ಬಣ್ಣ ಸಾಧಾರಣ ಮೈಕಟ್ಟು) ನನಗೆ ಬಹಳ ಇಷ್ಟ. ಅವರು ಆ ಹಾಡಿನಲ್ಲಿ ಆಳವಾದ ಅರ್ಥವಿದೆ. ಅದು ಉತ್ತಮ ಬರಹಗಾರ ಎಂದು ನಿರೂಪಿಸುತ್ತದೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ.