'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ ಹೊರ ನಡೆದ ನಟಿ ಅಮೀತಾ ಕುಲಾಲ್ ತೆಲುಗಿಗೆ ಎಂಟ್ರಿ!
'ಗಿಫ್ಟ್ ಬಾಕ್ಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಅಮೀತಾ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ ಹೊರ ನಡೆದಿದ್ದಾರೆ.
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಶೀಘ್ರವೇ ಪ್ರಸಾರವಾಗಲು ಸಿದ್ಧವಾಗುತ್ತಿದ್ದ ಪುಟ್ಟಕ್ಕನ ಮಕ್ಕಳು (Putakkana Makkalu) ಧಾರಾವಾಹಿಯಿಂದ ಪ್ರಮುಖ ಪಾತ್ರಧಾರಿ ಅಮೀತಾ ಕುಲಾಲ್ ಹೊರ ನಡೆದಿದ್ದಾರೆ.
ಧಾರಾವಾಹಿಯಲ್ಲಿ ಪುಟ್ಟಕ್ಕನ ಮಕ್ಕಳಾಗಿ ಕಾಣಿಸಿಕೊಳ್ಳಬೇಕಿದ್ದ ನಟಿ ಅಮೀತಾ ಕುಲಾಲ್ (Ameeta Kulal) ಹೊರ ನಡೆದಿದ್ದಾರೆ ಎನ್ನುವುದು ಸುದ್ದಿಯಾಗಿದೆ.
ಗಿಫ್ಟ್ ಬಾಕ್ಸ್ (Gift Box) ಚಿತ್ರದ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಅಮೀತಾ ಇದೀಗ ತೆಲುಗು (Telugu) ಧಾರಾವಾಹಿ ಲೋಕಕ್ಕೆ ಕಾಲಿಟ್ಟಿದ್ದಾರೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮುಹೂರ್ತಕ್ಕೂ ಅಮೀತಾ ಭಾಗಿಯಾಗಿದ್ದರು. ವೈಯಕ್ತಿಕ ಕಾರಣಗಳಿಂದ ಹೊರ ನಡೆದಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.
ಅಮೀತಾ ಮಾತ್ರವಲ್ಲದೆ ವಿನಯ್ ಗೌಡ, ತಾರಕ್ ಪೊನ್ನಪ್ಪ, ಐಶ್ವರ್ಯ, ರೂಪಾ ಮಾನ್ಸಿ ಜೋಶಿ , ಚಂದನ್ ಗೌಡ ಸೇರಿದಂತೆ ಅನೇಕ ಕನ್ನಡಿಗರು ತೆಲುಗು ಪಾದಾರ್ಪಣೆ ಮಾಡಿದ್ದಾರೆ.