Bride to be: ಕಿರುತೆರೆ ನಟಿ ಕಾವ್ಯಾ ಗೌಡ ಬ್ಯಾಚುಲರ್ ಪಾರ್ಟಿ ಹೇಗಿತ್ತು ನೋಡಿ...
ಸ್ನೇಹಿತರೊಟ್ಟಿಗೆ ಅದ್ಧೂರಿಯಾಗಿ ಬ್ಯಾಚುಲರ್ ಪಾರ್ಟಿ ಮಾಡಿಕೊಂಡ ಕಿರುತೆರೆ ನಟಿ ಕಾವ್ಯಾ ಗೌಡ. ಪೋಟೋಗಳು ಒಂದಕ್ಕಿಂತ ಒಂದು ವಿಭಿನ್ನ...

'ಮೀರಾ ಮಾಧವ', 'ಗಾಂಧಾರಿ','ರಾಧಾ ರಮಣ (Radha Ramana)' ಧಾರಾವಾಹಿ ಮೂಲಕ ಕನ್ನಡ ವೀಕ್ಷಕರ ಮನೆ ಮಗಳಾದ ನಟಿ ಕಾವ್ಯಾ ಗೌಡ.
ಡಿಸೆಂಬರ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಕಾವ್ಯಾ ಗೌಡ ಸ್ನೇಹಿತರು ಮತ್ತು ಅಕ್ಕನ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿಕೊಂಡಿದ್ದಾರೆ.
ಈ ಪಾರ್ಟಿಯಲ್ಲಿ ವಧು ಸ್ನೇಹಿತರು ಗ್ರೀನ್ ಬಣ್ಣದ ಉಡುಪು ಧರಿಸಿದ್ದಾರೆ ಹಾಗೂ ಸಹೋದರಿ ಪರ್ಪಲ್ ಬಣ್ಣದ ಗೌನ್ ಧರಿಸಿದ್ದಾರೆ.
ಕಾವ್ಯಾ ಗೌಡ ಪಿಂಕ್ ಬಣ್ಣದ ಗೌನ್ ಧರಿಸಿ ಕೈಯಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಗುಲಾಬಿ ಹೂ ಗುಚ್ಚ ಹಿಡಿದುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಬರೀ ಹೆಣ್ಣು ಮಕ್ಕಳೇ ಭಾಗಿಯಾಗಬೇಕಿದ್ದ ಪಾರ್ಟಿಯಲ್ಲಿ ಭಾವಿ ಪತಿ ಸೋಮಶೇಖರ್ ಕೂಡ ಪಾಲ್ಗೊಂಡಿದ್ದರು. ವೈಟ್ ಶರ್ಟ್ ಪಿಂಕ್ ಬ್ಲೇಸರ್ ಧರಸಿದ್ದರು.
ಕಾವ್ಯಾ ಸಹೋದರಿ ಭವ್ಯಾ ಗೌಡ ಎಲ್ಲರಿಗೂ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಹಾಗೇ ಅವರ ಪುತ್ರಿ ಆಧ್ಯಾ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ದು ಚಿಕ್ಕಮ್ಮನ ರೀತಿಯೇ ಬಟ್ಟೆ ಧರಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.