ಕಿರುತೆರೆ ನಟ ಚಂದು ಗೌಡ- ಶಾಲಿನಿ ದಂಪತಿಗೆ ಹೆಣ್ಣು ಮಗು!
ಕುಟುಂಬಕ್ಕೆ ಮುದ್ದಾದ ಲಕ್ಷ್ಮಿಯನ್ನು ಬರ ಮಾಡಿಕೊಂಡ ಕಿರುತೆರೆ ನಟ ಚಂದು ಬಿ ಗೌಡ ದಂಪತಿ.
ಕನ್ನಡ ಕಿರುತೆರೆ ನಟ ಕಮ್ ಆಟೋಮೊಬೈಕ್ ಕ್ರೇಜಿ ಬಾಯ್ ಚಂದು ಬಿ ಗೌಡ (Chandu B Gowda) ಅಭಿಮಾನಿಗಳ ಜೊತೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಧಾರಾವಾಹಿ ಲೋಕದಿಂದ ಬ್ರೇಕ್ ತೆಗೆದುಕೊಂಡ ಚಂದು ಅಕ್ಟೋಬರ್ 29, 2020ರಲ್ಲಿ ಗೆಳತಿ ಶಾಲಿನಿ ನಾರಾಯಣ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬೆಂಗಳೂರಿನಲ್ಲಿ ಮದುವೆ ಅದ್ಧೂರಿಯಾಗಿ ನಡೆಯಿತ್ತು.
2022ರ ಜೂನ್ ತಿಂಗಳಿನಲ್ಲಿ ಶಾಲಿನಿ ಸೀಮಂತ ಅದ್ಧೂರಿಯಾಗಿ ನಡೆಯಿತ್ತು. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಗಂಡು ಅಥವಾ ಹೆಣ್ಣು ಮಗು ಅಂತ ಗೆಸ್ ಮಾಡಲು ಶುರು ಮಾಡಿದ್ದರು.
ಸುಮಾರು ನಾಲ್ಕು ವರ್ಷಗಳ ಕಾಲ ಚಂದು ಮತ್ತು ಶಾಲಿನಿ ಪ್ರೀತಿಸಿ ಮದುವೆಯಾದರು. ಈ ಹಿಂದೆ ಇಬ್ಬರೂ ತಮ್ಮ ಲವ್ ಸ್ಟೋರಿ ಹಂಚಿಕೊಂಡಿದ್ದರು. ಮಾಡಲಿಂಗ್ ಕ್ಷೇತ್ರದಲ್ಲಿ ಶಾಲಿನಿ ಗುರುತಿಸಿಕೊಂಡಿದ್ದಾರೆ.
ಲಕ್ಷ್ಮಿ ಬಾರಮ್ಮ ಧಾರಾವಾಹಿ ನಂತರ ಚಂದು ಚಾಕ್ ಕಾರ್ನರ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು ಆನಂತರ ತೆಲುಗು ಕಿರುತೆರೆಗೆ ಕಾಲಿಟ್ಟು ತ್ರಿನಯನಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಶ್ರೀನಗರ ಕಿಟ್ಟಿ ಜೊತೆ ಸಿನಿಮಾ ಮಾಡುತ್ತಿದ್ದಾರೆ.
ಚಂದು ಮತ್ತು ಶಾಲಿನಿ ಮಗುವಿನ ಫೋಟೋವನ್ನು ಎಲ್ಲೂ ರಿವೀಲ್ ಮಾಡಿಲ್ಲ. ರಾಬರ್ಟ್, ಕಷ್ಕ್, ಜಾಕ್‌ಪಾಟ್, ಕಮರೊಟ್ಟು ಚೆಕ್‌ಪೋಸ್ಟ್, ದ್ವಿಪಾತ್ರ, ಶ್ರೀ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಚಂದು ಅಭಿನಯಿಸಿದ್ದಾರೆ.