- Home
- Entertainment
- TV Talk
- ಆತ್ಮಸಾಕ್ಷಿಗಳ ಪ್ರಶ್ನೆಗೆ ಹೆದರಿದ ಜಯಂತ್, ಲಕ್ಷ್ಮಿ ನಿವಾಸದಲ್ಲಿ ಸೈಕೋ ನಟನೆ ನೋಡಿ ಥ್ರಿಲ್ ಆದ ಫ್ಯಾನ್ಸ್
ಆತ್ಮಸಾಕ್ಷಿಗಳ ಪ್ರಶ್ನೆಗೆ ಹೆದರಿದ ಜಯಂತ್, ಲಕ್ಷ್ಮಿ ನಿವಾಸದಲ್ಲಿ ಸೈಕೋ ನಟನೆ ನೋಡಿ ಥ್ರಿಲ್ ಆದ ಫ್ಯಾನ್ಸ್
ಲಕ್ಷ್ಮೀ ನಿವಾಸ ಸೀರಿಯಲ್ ದಿನದಿಂದ ದಿನಕ್ಕೆ ಹೊಸ ಹೊಸ ಕಥೆಗಳ ಮೂಲಕ ಕ್ರೇಜ್ ಹುಟ್ಟಿಸುತ್ತಿದೆ. ಇದೆಲ್ಲದರ ಮಧ್ಯೆ ಜಯಂತ್ ನ ಸೈಕೋ ನಟನೆ ಮಾತ್ರ ಜನಕ್ಕೆ ಸಿಕ್ಕಾಪಟ್ಟೆ ಇಷ್ಟವಾಗ್ತಿದೆ.

ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಾ ಸಾಗುತ್ತಿರುವ ಲಕ್ಷ್ಮೀ ನಿವಾಸ (lakshmi Nivasa) ಸೀರಿಯಲ್ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಹಿಡಿದಿಟ್ಟು ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದು ಲಕ್ಷ್ಮೀ ಶ್ರೀನಿವಾಸರ ಕಥೆ ಇರಬಹುದು, ಜಾಹ್ನವಿ ಜಯಂತ್, ಭಾವನಾ -ಸಿದ್ಧೇಗೌಡ್ರು ಎಲ್ಲರ ಪಾತ್ರಗಳು ಕಥೆಗಳನ್ನು ಜನರು ಮೆಚ್ಚಿಕೊಂಡಿದ್ದಾರೆ.
ಅದರಲ್ಲೂ ಸೈಕೋ (psyhco character) ರೀತಿ ಆಡುವ ಜಯಂತ್ ಪಾತ್ರವನ್ನೂ ಹಾಗೂ ಪಾತ್ರಕ್ಕೆ ಜೀವ ತುಂಬುವ ದೀಪಕ್ ಸುಬ್ರಹ್ಮಣ್ಯ ಅವರ ಅಭಿನಯವನ್ನೂ ವೀಕ್ಷಕರು ಮೆಚ್ಚಿ ಹಾಡಿಹೊಗಳುತ್ತಿದ್ದಾರೆ. ಇದು ನೆಗಟೀವ್ ಶೇಡ್ ಪಾತ್ರವಾದರೂ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರೋ ಜಯಂತ್ ನಟನೆಗೆ ಜನ ಫಿದಾ ಆಗಿದ್ದಾರೆ.
ಆರಂಭದಲ್ಲಿ ತುಂಬಾನೆ ವಿನಯವಂತನಾದ, ಪರ್ಫೆಕ್ಷನಿಷ್ಟ್ (perfectionist) ಆಗಿರುವ, ಎಲ್ಲರಲ್ಲೂ ಪ್ರೀತಿ, ಗೌರವದಿಂದ ನೋಡುವ, ಇದ್ದರೆ ಇಂತಹ ಮಗ ಬೇಕು ಎನ್ನುವ ಪಾತ್ರದಲ್ಲಿ ಮಿಂಚಿದ್ದ ಜಯಂತ್ ಪಾತ್ರ ಮದುವೆಯಾದ ಬಳಿಕ, ಒಂದೊಂದೇ ಮುಖದ ಅನಾವರಣ ಮಾಡಲಾಗುತ್ತಿದೆ. ಈತನೊಬ್ಬ ಸೈಕೋ ಪ್ರೇಮಿ ಅನ್ನೋದು ಜನರಿಗೆ ತಿಳಿದಿದೆ, ಆದರೆ ಜಾಹ್ನವಿಗೆ ಇನ್ನೂ ತಿಳಿದಿಲ್ಲ.
ಜಾಹ್ನವಿಯನ್ನೂ ಮನೆಯಿಂದ ಹೊರಗೆ ಹೋಗಲೂ ಬಿಡದೆ, ಆಕೆಗೆ ಬೇಕೆಂದದ್ದನ್ನೆಲ್ಲಾ ಪೂರೈಸುವ, ಆಕೆಯನ್ನು ಕೆಣಕಲು, ಮುಟ್ಟಲು ಬಂದವರ ಕಾಲು ಮುರಿಯುತ್ತಾ ತಾನೊಬ್ಬ ಸೈಕೋ ಪ್ರೇಮಿ ಅನ್ನೋದನ್ನು ನಿರೂಪಿಸಿರುವ ಜಯಂತ್ ಗೆ ಸದ್ಯ ಆತ್ಮಸಾಕ್ಷಿಗಳು ಪ್ರಶ್ನೆ ಮೇಲೆ ಪ್ರಶ್ನೆ ಕೇಳುವ ಮೂಲಕ ಕುಗ್ಗುವಂತೆ ಮಾಡಿದೆ.
ತನ್ನ ತವರು ಮನೆಗೆ ಹೋಗೋದ್ರಿಂದ, ಹೆಂಡ್ತಿನಾ ಸ್ಟಾಪ್ ಮಾಡೋದಿಕ್ಕೆ ಆಗ್ಲಿಲ್ಲ, ಇನ್ನು ನಮ್ಮನ್ನು ಸ್ಟಾಪ್ ಮಾಡ್ತೀರಾ ಎಂದು ಕೇಳುವ ಆತ್ಮಸಾಕ್ಷಿಗಳು, ಹೆಂಡ್ತಿ ನಿಮ್ಮನ್ನು ಬಿಟ್ಟು ಹೋಗ್ತಿದ್ದಾರೆ ಅಂದ್ರೆ, ಅವರಿಗೆ ನೀವಂದ್ರೆ ಇಷ್ಟ ಇಲ್ಲ, ಆಕೆಗೆ ನಿನ್ನ ಮೇಲೆ ನಯಾಪೈಸೆ ಪ್ರೀತಿ ಇಲ್ಲ ಎಂದfರ್ಥ, ಅದಕ್ಕೆ ಏನೋ ಒಂದು ನೆಪ ಹೇಳಿ ತವರು ಮನೆಗೆ ಹೋಗ್ತಾಳೆ ಎಂದು ಜಯಂತ್ ನನ್ನು ಕೆಣಕುತ್ತದೆ.
ಅಷ್ಟೇ ಅಲ್ಲ ನೀವು ಜಾಹ್ನವಿನ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡ್ತಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಅವಳು ನಿನ್ನ ಪ್ರೀತಿ ಮಾಡ್ತ ಇಲ್ಲ. ಒಂದು ಸಲ ಹೆಂಡ್ತಿ ಮನೆಯಿಂದ ಹೊರಗೆ ಹೋದ್ಲು ಅಂದ್ರೆ, ಗಂಡನನ್ನು ಮನಸ್ಸಿನಿಂದ ಹೊರ ಹಾಕಿದ್ಲು ಅಂತಾನೆ ಅರ್ಥ. ಸಾಧ್ಯವಾದ್ರೆ ಅವಳು ಹೊರಗೆ ಹೋಗೋದನ್ನು ತಡಿ ಎಂದು ಎಲ್ಲಾ ಆತ್ಮಸಾಕ್ಷಿಗಳು ಜಯಂತ್ ನನ್ನು ಕೆಣಕಿ ಚಪ್ಪಾಳೆ ತಟ್ಟಿ ಮಾಯವಾಗಿಬಿಡುತ್ತೆ.
ಆತ್ಮಸಾಕ್ಷಿಗಳು ಜಯಂತ್ ನ ಸೈಕೋ ಮನಸ್ಥಿತಿಯನ್ನು ಬಿಂಬಿಸುತ್ತವೆ. ಈ ಪಾತ್ರವನ್ನು ದೀಪಕ್ ಅದ್ಭುತವಾಗಿ ನಿರ್ವಹಿಸಿದ್ದಾರೆ. ಅವರ ಮ್ಯಾನರಿಸಂ, ನಟನೆ, ಎಲ್ಲವೂ ಅದ್ಭುತವಾಗಿದೆ ಎಂದು ಜನರೇ ಹೊಗಳುತ್ತಿದ್ದಾರೆ. ಇವರು ಸೈಕೋ ನೋ ವಿಲ್ಲನ್ ಏನೇ ಆಗಿರಲಿ ಅದು ಪಾತ್ರ ಅಷ್ಟೇ. ಯಾವ್ದೇ ಪಾತ್ರ ಇರಲಿ ನಟನೆ ಮಾತ್ರ ಅದ್ಭುತ. ಜಯಂತ್ ಅವ್ರು 79's 80's ಮೀಸೆ ಇಲ್ಲದ ಅನಂತನಾಗ್ (Ananth Nag) ನೆನಪಾಗ್ತಾರೆ ಎಂದು ಒಬ್ಬರು ಹೇಳಿದ್ದಾರೆ.
ಜಯಂತ್ ಪಾತ್ರ ತುಂಬಾನೆ ಕೆಟ್ಟದಾಗಿದೆ, ಆದರೆ ಅವರ ಅಭಿನಯ ಮಾತ್ರ ಬೇರೆ ಲೆವೆಲ್. ಯಾರಿಗೂ ಇವರ ನಟನೆಯ ಎನರ್ಜಿಯನ್ನು ಮ್ಯಾಚ್ ಮಾಡೋದಕ್ಕೆ ಸಾಧ್ಯಾನೆ ಇಲ್ಲ. ನಟನೆ ಬಗ್ಗೆ ಮಾತನಾಡೋದಾದ್ರೆ, ಜಯಂತ್ ರನ್ನು ಯಾರಿಗೂ ಹೋಲಿಕೆ ಮಾಡೋದಕ್ಕೆ ಸಾಧ್ಯ ಇಲ್ಲ. ಅಂತಹ ಅದ್ಭುತ ನಟ ಇವರು ಎಂದು ಫ್ಯಾನ್ಸ್ ಸಿಕ್ಕಾಪಟ್ಟೆ ಹೊಗಳ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.