RCB ಗೆಲುವಿಗಾಗಿ ರಕ್ತದಾನ ಮಾಡಿದ ನಟಿ ರಜಿನಿ
ಐಪಿಎಲ್ ಫೈನಲ್‌ನಲ್ಲಿ RCB ಗೆಲುವಿಗಾಗಿ ನಟಿ ರಜಿನಿ ರಕ್ತದಾನ ಮಾಡಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹೋಟೆಲ್‌ಗಳು ಫೈನಲ್ ಪಂದ್ಯ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿವೆ.

ಇಂದು ಐಪಿಎಲ್ ಸೀಸನ್ 18ರ ಫೈನಲ್ ಪಂದ್ಯ ನಡೆಯಲಿದ್ದು, ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. RCB ಗೆಲುವಿಗಾಗಿ ಇಡೀ ಕರುನಾಡು ಪ್ರಾರ್ಥಿಸುತ್ತಿದೆ.
ಇಂದು ಬೆಳಗ್ಗೆಯಿಂದಲೇ ಆರ್‌ಸಿಬಿ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ರಾಜಕೀಯ ಗಣ್ಯರು ಆರ್‌ಸಿಬಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ಕಿರುತೆರೆ ನಟಿ ರಜಿನಿ ಅವರು ರಾಯಲ್ ಚಾಲೆಂಜರ್ಸ್ ತಂಡದ ಗೆಲುವಿಗಾಗಿ ರಕ್ತದಾನ ಮಾಡಿದ್ದಾರೆ. ರಕ್ತದಾನ ಮಾಡಿರುವ ಫೋಟೋಗಳನ್ನು ರಜಿನಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ರಜಿನಿ ಜೊತೆಯಲ್ಲಿ ಅವರ ಜಿಮ್ ಟ್ರೈನರ್ ಸಹ ರಕ್ತದಾನ ಮಾಡಿದ್ದಾರೆ.
ಫೋಟೋ ಹಂಚಿಕೊಂಡಿರುವ ರಜಿನಿ, RCB win ಆಗ್ಲಿ ಅಂತ blood ಕೊಟ್ಟಿದ್ದಿವಿ, ಈಸಲ cup ನಮ್ದೇ ಜೈ RCB. ರಕ್ತ ದಾನ ಮಹಾ ದಾನ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಕಮೆಂಟ್ ಮಾಡಿರುವ ರಜಿನಿ ಅಭಿಮಾನಿಗಳು, ಇದು ಆರ್‌ಸಿಬಿ ಮೇಲಿನ ಪ್ರೀತಿ ಎಂದು ಕಮೆಂಟ್ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ ಫೈನಲ್ ಹಣಾಹಣಿ ಪಂದ್ಯದ ಹಿನ್ನೆಲೆಯಲ್ಲಿ ವಿಶೇಷವಾಗಿ ಆರ್‌ಸಿಬಿ ಗ್ರಾಹಕರನ್ನು ಸೆಳೆಯಲು ನಗರದ ಪ್ರತಿಷ್ಠಿತ ಹೊಟೆಲ್, ರೆಸ್ಟೊರೆಂಟ್, ಕ್ಲಬ್‌ಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿವೆ. ಕೋರಮಂಗಲ, ವೈಟ್‌ಫೀಲ್ಡ್, ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್, ಎಲೆಕ್ಟ್ರಾನಿಕ್ ಸಿಟಿ, ಇಂದಿರಾ ನಗರದ ಹೊಟೆಲ್‌ಗಳಲ್ಲಿ ಐಪಿಎಲ್ ಫೈನಲ್ ಪಂದ್ಯಾವಳಿ ನೇರಪ್ರಸಾರಕ್ಕೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.