- Home
- Entertainment
- TV Talk
- ಧಾರಾವಾಹಿಯ ಮದುವೆ ಹಾಗೂ ಫಸ್ಟ್‌ನೈಟ್ ಅನ್ನು ರಿಯಲ್ ಲೈಫಲ್ಲಿ ನಿಜವಾಗಿಸಿಕೊಂಡ ಕಿರುತೆರೆ ಜೋಡಿ!
ಧಾರಾವಾಹಿಯ ಮದುವೆ ಹಾಗೂ ಫಸ್ಟ್‌ನೈಟ್ ಅನ್ನು ರಿಯಲ್ ಲೈಫಲ್ಲಿ ನಿಜವಾಗಿಸಿಕೊಂಡ ಕಿರುತೆರೆ ಜೋಡಿ!
ಕಿರುತೆರೆ ಧಾರಾವಾಹಿನಲ್ಲಿ ಪ್ರೇಮಿಗಳಾಗಿ ನಟಿಸಿ ಮದುವೆ ಮಾಡಿಕೊಂಡು ಗಂಡ-ಹೆಂಡತಿ ಆಗಿ ಪಾತ್ರ ಮಾಡಿ ಎಂದರೆ, ಇಲ್ಲೊಂದು ಜೋಡಿ ರಿಯಲ್ ಆಗಿಯೇ ಮದುವೆ ಮಾಡಿಕೊಂಡು ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದಾರೆ. ಇದೀಗ ಅವರು ಹೊಸದೊಂದು ಬಿಸಿನೆಸ್ ಕೂಡ ಆರಂಭಿಸಿದ್ದಾರೆ.

ಸಾಮಾನ್ಯವಾಗಿ ಧಾರಾವಾಹಿಗಳಿಗೆ ಮದುವೆಯಾಗದ ಸುಂದರ ಯುವತಿಯರು ಹಾಗೂ ಯುವಕರನ್ನು ಕರೆತಂದು ನಾಯಕ-ನಾಯಕಿ ಪಾತ್ರಗಳನ್ನು ಕೊಡಲಾಗುತ್ತದೆ. ಇದರಲ್ಲಿ ಪ್ರೇಮಿಗಳು, ಗಂಡ-ಹೆಂಡತಿ ಇತ್ಯಾದಿ ಪಾತ್ರಗಳನ್ನು ಮಾಡುತ್ತಾರೆ. ಆದರೆ, ಇಲ್ಲೊಂದು ಜೋಡಿ ಧಾರಾವಾಹಿಯಲ್ಲಿ ಗಂಡ-ಹೆಂಡತಿಯಾಗಿ ಪಾತ್ರ ಮಾಡಿ ಎಂದರೆ, ನಿಜ ಜೀವನದಲ್ಲಿಯೇ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ. ನಿರ್ದೇಶಕರು ಈ ಧಾರಾವಾಹಿ ಮುಕ್ತಾಯಗೊಳಿಸಿದ್ದು, ಇದೀಗ ಸ್ವಂತ ಉದ್ಯಮವನ್ನು ಆರಂಭಿಸಿದ್ದಾರೆ..
ರೇಡಿಯೋ ಮಿರ್ಚಿಯಲ್ಲಿ ಆರ್ ಜೆ ಆಗಿ ಕೆಲಸ ಮಾಡಿ ಸೆಂತಿಲ್ ಫೇಮಸ್ ಆಗಿದ್ದಾರೆ. ರೇಡಿಯೋದಲ್ಲಿ ಸಿಕ್ಕಾಪಟ್ಟೆ ರೆಸ್ಪಾನ್ಸ್ ಬಂದಿದ್ದಕ್ಕೆ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸೋಕೆ ಅವಕಾಶ ಬಂತು. ಅದಕ್ಕೆ ಒಪ್ಪಿಕೊಂಡು ತಮಿಳಿನ ವಿಜಯ್ ಟಿವಿಯಲ್ಲಿ ಪ್ರಸಾರವಾದ ಸರವಣನ್ ಮೀನಾಕ್ಷಿ ಸೀರಿಯಲ್ ನಲ್ಲಿ ಹೀರೋ ಆಗಿ ನಟಿಸಿದರು. ಆ ಸೀರಿಯಲ್ ನಲ್ಲಿ ಸೆಂತಿಲ್‌ಗೆ ಜೋಡಿಯಾಗಿ ಶ್ರೀಜಾ ನಟಿಸಿದ್ದರು. ಇವರಿಬ್ಬರ ಕೆಮಿಸ್ಟ್ರಿ ಸೀರಿಯಲ್ ಸಖತ್ ಹಿಟ್ ಆಗೋಕೆ ಕಾರಣ ಆಯ್ತು.
ಸೀರಿಯಲ್ ನಲ್ಲಿ ಮಾತ್ರ ಅಲ್ಲ, ರಿಯಲ್ ಲೈಫ್ ನಲ್ಲೂ ಇವರಿಬ್ಬರ ನಡುವೆ ಕೆಮಿಸ್ಟ್ರಿ ವರ್ಕೌಟ್ ಆಗಿದ್ದಕ್ಕೆ ಲವ್ ಮಾಡಿ ಮದುವೆ ಮಾಡಿಕೊಂಡರು. ಮದುವೆ ಆದ್ಮೇಲೂ ಸೆಂತಿಲ್ ಬೇರೆ ಬೇರೆ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದಾರೆ. ಈಗ ಅವರು ನಟಿಸುತ್ತಿರುವ 'ಅಣ್ಣಾ' ಸೀರಿಯಲ್ ಜೀ ತಮಿಳು ಟಿವಿ ಚಾನೆಲ್ ನಲ್ಲಿ ಪ್ರಸಾರ ಆಗುತ್ತಿದೆ. ಈ ಸೀರಿಯಲ್ ನಲ್ಲಿ ಮಿರ್ಚಿ ಶಿವಾಗೆ ಜೋಡಿಯಾಗಿ ನಿತ್ಯಾ ರಾಮ್ ನಟಿಸುತ್ತಿದ್ದಾರೆ. ಈ ಸೀರಿಯಲ್ ಟಿಆರ್‌ಪಿ ರೇಟಿಂಗ್ ನಲ್ಲೂ ಸಖತ್ ಸೌಂಡ್ ಮಾಡುತ್ತಿದೆ.
ಇದೇ ಟೈಮ್ ನಲ್ಲಿ ಕೆಲವು ದಿನಗಳ ಹಿಂದೆ ಆನ್ಲೈನ್ ಮೋಸದಲ್ಲಿ ಸಿಕ್ಕಿಹಾಕಿಕೊಂಡಿದ್ದಾಗಿ ಮಿರ್ಚಿ ಶಿವ ವಿಡಿಯೋ ಬಿಡುಗಡೆ ಮಾಡಿ ಸದ್ದು ಮಾಡಿದ್ರು. ಅದರಲ್ಲಿ ನಾನು 15 ಸಾವಿರ ಕಳ್ಕೊಂಡಿದ್ದೀನಿ ಅಂತ ಹೇಳಿದ್ರು. ಇದರ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೂಡ ಕೊಟ್ಟಿದ್ರು. ಈಗ ತಾನು ಹೊಸದಾಗಿ ಬಿಸಿನೆಸ್ ಶುರು ಮಾಡಿರೋ ವಿಷಯನೂ ರೀಸೆಂಟ್ ಆಗಿ ಒಂದು ಇಂಟರ್ವ್ಯೂನಲ್ಲಿ ಹೇಳಿದ್ದಾರೆ. ಅದು ಯಾವ ಬಿಸಿನೆಸ್ ಅಂತ ನೋಡೋಣ.
ಮಿರ್ಚಿ ಸೆಂತಿಲ್ ಕೆಫೆ ಬಿಸಿನೆಸ್ ಆರಂಭಿಸಿದ್ದಾರೆ. ಕೇರಳದಲ್ಲಿ ಕೆಫೆ ಬಿಸಿನೆಸ್ ಮಾಡುತ್ತಿದ್ದ ಒಬ್ಬರು, ಅದನ್ನ ಕಂಟಿನ್ಯೂ ಮಾಡೋಕೆ ಆಗದೆ ಮಾರೋಕೆ ರೆಡಿ ಇದ್ದರು. ಆಗ ಸೆಂತಿಲ್ ಹೆಂಡತಿ ಶ್ರೀಜಾ ನಾವ್ಯಾಕೆ ಆ ಬಿಸಿನೆಸ್ ತಗೊಂಡು ಮಾಡಬಾರದು ಅಂತ ಐಡಿಯಾ ಕೊಟ್ಟಿದ್ದಕ್ಕೆ, ಸೆಂತಿಲ್ ಓಕೆ ಎಂದಿದ್ದಾರೆ. ಸದ್ಯಕ್ಕೆ ಶ್ರೀಜಾ ಮತ್ತೆ ಸೆಂತಿಲ್ ಆ ಬಿಸಿನೆಸ್ ನ ಸಕ್ಸಸ್ ಫುಲ್ ಆಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಬಿಸಿನೆಸ್ ಗೋಸ್ಕರ ಪದೇ ಪದೇ ಕೇರಳಕ್ಕೆ ಹೋಗಿ ಬರೋದ್ರಿಂದ ಬ್ಯುಸಿ ಆಗಿದ್ದೀನಿ ಅಂತ ಸೆಂತಿಲ್ ಹೇಳಿದ್ದಾರೆ.