ಮೂಗುತಿ ಸುಂದರಿಯಾದ ರಜಿನಿ…. ಜೀವನದ ರಹಸ್ಯಗಳ ಬಗ್ಗೆ ಹೇಳಿದ್ದಾರೆ ಕೇಳಿ!
ಹಿಟ್ಲರ್ ಕಲ್ಯಾಣದ ಚೆಲುವೆ ರಜನಿ ಸೀರೆಯುಟ್ಟು, ಮೂಗು ಬೊಟ್ಟು ಧರಿಸಿ ಫೋಟೋ ಶೂಟ್ ಮಾಡಿಸಿದ್ದು, ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ.
ಹಿಟ್ಲರ್ ಕಲ್ಯಾಣದಲ್ಲಿ ಅಂತರಾ ಪಾತ್ರದ ಮೂಲಕ ಮಿಂಚಿದ ಕಿರುತೆರೆ ನಟಿ ರಜಿನಿ (Rajini) ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಹೆಚ್ಚಾಗಿ ತಮ್ಮ ಒಂದಷ್ಟು ಫೊಟೋಗಳ ಜೊತೆಗೆ ಒಂದಿಷ್ಟು ಒಳ್ಳೊಳ್ಳೆ ಲೈನ್ಸ್ ಸಹ ಬರೆಯುತ್ತಾರೆ.
ಈ ಬಾರಿ ನಟಿ ಗ್ರೇ ಬಣ್ಣದ ಸೀರೆ ಧರಿಸಿದ್ದು, ಅದಕ್ಕೆ ಕಾಂಟ್ರಾಸ್ಟ್ ಆಗಿ ಬ್ಲ್ಯಾಕ್ ಬಣ್ಣದ ಬ್ಲೌಸ್ ಧರಿಸಿದ್ದಾರೆ. ಅಷ್ಟೇ ಅಲ್ಲ ಸುಂದರವಾದ ಮೆಟಲ್ ಮೂಗುತಿ ಧರಿಸಿದ್ದು, ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ.
ರಜಿನಿ ಮಳೆಯ ನಡುವೆ ಯಾವುದೋ ತಾಣಕ್ಕೆ ಟ್ರಾವೆಲ್ ಮಾಡಿದ್ದು, ಅಲ್ಲಿನ ಸುಂದರವಾದ ಪ್ರಕೃತಿಯ ನಡುವೆ ಬೇರೆ ಬೇರೆ ಪೋಸ್ ನೀಡುತ್ತಾ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ನಟಿಯ ಮೂಗುತಿ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ.
ನಟಿ ತಮ್ಮ ಫೋಟೋ ಜೊತೆ ಎಷ್ಟು ತಾಳ್ಮೆಯಿಂದ ಇರುತ್ತೀವೋ ಅಷ್ಟು 'ಅಗ್ರಸ್ಥಾನ'.. ಎಷ್ಟು ದೂರ ಇರುತ್ತೀವೋ ಅಷ್ಟು 'ಗೌರವ'. ಎಷ್ಟು ಕಡಿಮೆ ಆಸೆ ಪಡುತ್ತೀವೋ ಅಷ್ಟು 'ಪ್ರಶಾಂತತೆ'. ಎಷ್ಟು ಕಡಿಮೆ ಮಾತಾನಾಡುತ್ತೀವೋ ಅಷ್ಟು 'ಬೆಲೆ'. ಇದುವೇ ಜೀವನದ ರಹಸ್ಯಗಳು. ಎಂದು ಬರೆದುಕೊಂಡಿದಾರೆ.
ಫ್ಯಾನ್ಸ್ ನಟಿಯ ಫೋಟೋವನ್ನು ಇಷ್ಟಪಟ್ಟಿದ್ದು, ಸುಂದರವಾದ ಮಾತುಗಳು, ಜೊತೆಗೆ ಸುಂದರವಾದ ಫೋಟೋ ಎಂದಿದ್ದಾರೆ. ಅಷ್ಟೇ ಅಲ್ಲ ಬ್ಯೂಟಿ ಐಕಾನ್, ನ್ಯಾಚುರಲ್ ಬ್ಯೂಟಿ, ಅಪ್ಸರೆ ಎಂದೆಲ್ಲಾ ಕಾಮೆಂಟ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಹಿಟ್ಲರ್ ಕಲ್ಯಾಣದ (hitler kalyana) ಬಳಿಕ ಬೇರೆ ಯಾವುದೇ ಧಾರಾವಾಹಿಯಲ್ಲಿ ರಜಿನಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿಲ್ಲ, ಮಹಾನಟಿ ರಿಯಾಲಿಟಿ ಶೋನಲ್ಲಿ ದೇವಿ ಪಾತ್ರದಲ್ಲಿ ಮತ್ತು ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ದೇವಿಯಾಗಿ ಕಾಣಿಸಿಕೊಂಡಿದ್ದರು.
ತಮ್ಮ ಫಿಟ್ನೆಸ್ (fitness) ಬಗ್ಗೆ ತುಂಬಾನೆ ಕಾಳಜಿ ವಹಿಸುವ ನಟಿ ತಮ್ಮ ವರ್ಕೌಟ್ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ಕಾಮಿಡಿ ವಿಡಿಯೋಗಳು, ಹೊಸ ಟ್ರೆಂಡ್ ನಲ್ಲಿರುವ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ನಟಿ ಜನರ ಜೊತೆ ಸದಾ ಕನೆಕ್ಟ್ ಆಗಿರುತ್ತಾರೆ.