ಗಂಡ ಹೆಂಡತಿ ಸೀರಿಯಲ್ ನಾಯಕಿ ನಿರುಷಾ ಗೌಡ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಂಡ ಹೆಂಡತಿ ಸೀರಿಯಲ್ ನಲ್ಲಿ ನಾಯಕಿ ಸ್ವಾತಿ ಪಾತ್ರದಲ್ಲಿ ನಟಿಸುತ್ತಿರುವ ನಿರುಷ ಗೌಡಾ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಗಂಡ ಹೆಂಡತಿ ಸೀರಿಯಲ್ ಸದ್ಯ ಜನರ ಮನಸ್ಸು ಸಹ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸ್ವಾತಿ ಮತ್ತು ಮುರಳಿಯ ಪರಿಶುದ್ಧ ಸ್ನೇಹವನ್ನು ಸೀರಿಯಲ್ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ.
ಕಥೆ ಬಗ್ಗೆ ಹೇಳುವುದಾದರೆ ಸ್ವಾತಿ ಮತ್ತು ಮುರಳಿ ಬೆಸ್ಟ್ ಫ್ರೆಂಡ್ಸ್. ಫ್ರೆಂಡ್ ಗಾಗಿ ಏನು ಬೇಕಾದರೂ ಮಾಡುವ ಗುಣ ಇಬ್ಬರದ್ದು. ಮುರಳಿಗೆ ಆಗಲೇ ಹುಡುಗಿ ನಿಶ್ಚಯವಾಗಿರುತ್ತೆ, ಸ್ವಾತಿ ರಾಹುಲ್ ಎಂಬ ಹುಡುಗನ ಲವ್ವಲ್ಲಿ ಬಿದ್ದಿರುತ್ತಾಳೆ.
ಟ್ವಿಸ್ಟ್ ಸಿಕ್ಕಿದ್ದೇ ಅಲ್ಲಿ, ಸ್ವಾತಿಯನ್ನು ಮೋಸದಿಂದ ಗರ್ಭಿಣಿಯಾಗಿಸಿದ ರಾಹುಲ್, ಆಕೆಯನ್ನು ನಡು ನೀರಿನಲ್ಲಿ ಕೈ ಬಿಡುತ್ತಾನೆ. ಇದರಿಂದ ನೊಂದ ಸ್ವಾತಿ ಸುಸೈಡ್ ಮಾಡಲು ಹೊರಟಾಗ, ಜೀವದ ಗೆಳೆಯ ಮುರಳಿ ತನ್ನ ನಿಶ್ಚಿತಾರ್ಥವನ್ನೇ ಕ್ಯಾನ್ಸಲ್ ಮಾಡಿಸಿ, ಸ್ವಾತಿಯನ್ನು ಸುರಕ್ಷಿತವಾಗಿ ತನ್ನ ಮನೆಗೆ ಕರೆದುಕೊಂಡು ಬಂದು ತನಗೆ ಮತ್ತು ಸ್ವಾತಿಗೆ ಮದುವೆಯಾಗಿದೆ ಎನ್ನುತ್ತಾನೆ.
ಎರಡೂ ಮನೆಯವರ ದ್ವೇಷವನ್ನು ಎದುರಿಸುತ್ತಿರುವ ಸ್ವಾತಿ ಮತ್ತು ಮುರಳಿ ಎಲ್ಲವನ್ನೂ ಎದುರಿಸಿ ನಿಲ್ಲುತ್ತಾರೆ. ಮುರಳಿ ತನ್ನ ಸ್ನೇಹಿತೆಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧವಾಗಿ, ಗರ್ಭಿಣಿ ಸ್ನೇಹಿತೆಯನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತಾನೆ. ಸದ್ಯ ಇಬ್ಬರ ಸ್ನೇಹವೂ ಜನರಿಗೆ ಇಷ್ಟವಾಗಿದೆ. ಇಂತಹ ಸ್ನೇಹಿತರು ಇರಬೇಕು ಎಂದು ಹೇಳುವಷ್ಟರ ಮಟ್ಟಿಗೆ ಇಬ್ಬರ ಸ್ನೇಹ ಜನಮನ ಗೆದ್ದಿದೆ.
ಸ್ವಾತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ನಿರುಷಾ ಗೌಡ (Nirusha Gowda). ನಿರುಷಾಗೆ ನಟನೆ ಹೊಸದೇನಲ್ಲ. ಈ ಹಿಂದೆ ಸಿರಿಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಅಮ್ಮನ ಮದುವೆ ಸೀರಿಯಲ್ ಲ್ಲಿ ನಟಿ ಭವ್ಯಶ್ರೀ ರೈ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಸೀರಿಯಲ್ ಗೆ ಬರುವ ಮುನ್ನ ಮಾಡೆಲಿಂಗ್ (modeling) ಕೂಡ ಮಾಡುತ್ತಿದ್ದರು ನಿರುಷಾ. ಇವರ ಸೋಶಿಯಲ್ ಮೀಡಿಯಾ ಖಾತೆ ನೋಡಿದ್ರೆ ಅಲ್ಲಿ ನೀವು ನಿರುಷಾ ಗೌಡ ಅವರ ಮಾಡೆಲಿಂಗ್ ಫೋಟೋ ಶೂಟ್ ಗಳನ್ನು ಕಾಣಬಹುದು.
ಗಂಡ ಹೆಂಡತಿ ಸೀರಿಯಲ್‌ನಲ್ಲಿ ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ನಟಿ ನಿರುಷಾ ಗೌಡ, ನಿಜ ಜೀವನದಲ್ಲಿ ತುಂಬಾನೆ ಮಾಡರ್ನ್. ಇವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಡರ್ನ್ ವೇರ್ ಮತ್ತು ಸೀರೆ ಎರಡರಲ್ಲೂ ತೆಗೆಸಿದ ಹಲವಾರು ಫೋಟೋಗಳನ್ನು ಕಾಣಬಹುದು.
ಪ್ರಾಣಿಪ್ರಿಯೆಯಾಗಿರುವ ನಿರುಷಾ ಗೌಡ, ಇತ್ತೀಚೆಗಷ್ಟೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ತಮ್ಮ ಮುದ್ದಿನ ನಾಯಿ ಜೊತೆಗೆ ಫೋಟೊ ತೆಗೆಸಿಕೊಂಡಿದ್ದರು. ರೆಡ್ ಟೀ ಶರ್ಟ್ ಮತ್ತು ಶಾರ್ಟ್ಸ್ ಲುಕ್‌ನಲ್ಲಿ ನಟಿ ಸುಂದರವಾಗಿ ಕಾಣಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಿರುಷಾ ಗೌಡ, ಯಾವಾಗಲೂ ತಮ್ಮ ಸೀರಿಯಲ್ ನಟರ ಜೊತೆಗೆ, ಮುರಳಿ ಜೊತೆಗೆ ರೀಲ್ಸ್ ಮಾಡಿ ಹಂಚಿ ಕೊಳ್ಳುತ್ತಿರುತ್ತಾರೆ. ಸದ್ಯದಲ್ಲೇ ಸ್ವಾತಿ ಮತ್ತು ಮುರಳಿ ಡುಯೆಟ್ ನೋಡುವ ಚಾನ್ಸ್ ಕೂಡ ಇದೆ. ತಮ್ಮ ಡ್ಯಾನ್ಸ್ ತುಣುಕನ್ನು ನಟಿ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದರು.