ಭಾವನಾಗೆ ತಾಳಿ ಕಟ್ಟಿದ್ದು ತಾನೇ ಎನ್ನುವ ಸತ್ಯವನ್ನ ಕೊನೆಗೂ ಹೇಳೇಬಿಟ್ರು ಸಿದ್ದೇಗೌಡ್ರು!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವೀಕ್ಷಕರು ಕಾಯುತ್ತಿದ್ದ ಸಮಯ ಕೊನೆಗೂ ಬಂದಿದೆ. ಊರವರ ಎದುರು ಭಾವನಾಗೆ ತಾಳಿ ಕಟ್ಟಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ ಸಿದ್ಧು.

ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ದೊಡ್ಡದೊಂದು ತಿರುವು ಕಂಡಿದೆ. ಇಲ್ಲಿವರೆಗೆ ಭಾವನಾಗೆ ತಾಳಿ ಕಟ್ಟಿದ್ದು ಯಾರು ಅನ್ನೋದನ್ನು ನಾನೇ ಹುಡುಕಿ ಕೊಡ್ತೀನಿ ಎಂದಿದ್ದ ಸಿದ್ಧು, ಇದೀಗ ತಾನೇ ತಾಳಿ ಕಟ್ಟಿರುವ ವಿಷಯವನ್ನು ಎಲ್ಲರೆದುರು ಹೇಳುವ ಸಮಯ ಹತ್ತಿರ ಬಂದಿದೆ.
ಈಗಾಗಲೇ ಸಿದ್ದೇಗೌಡರ ಮದ್ವೆ ಬಗ್ಗೆ ತಮ್ಮ ರಾಜಕೀಯ ಸಮಾವೇಶದಲ್ಲಿ ಹೇಳೋದಕ್ಕೆ ಜವರೇ ಗೌಡರು ಪ್ಲ್ಯಾನ್ ಮಾಡಿದ್ದಾರೆ. ಇನ್ನೇನು ತಮ್ಮ ಮಗ ಹಾಗೂ ಮುನಿಸ್ವಾಮಿ ಮಗಳ ಮದುವೆ ಬಗ್ಗೆ ಊರಿನ ಮುಂದೆ ಹೇಳುತ್ತಿದ್ದಂತೆ ಸಿದ್ದು ಅದನ್ನ ತದೆಯುವ ಮೂಲಕ ಎಲ್ಲಾ ನಿಜವನ್ನು ಜನರ ಮುಂದೆ ಒಪ್ಪಿಕೊಳ್ತಾನೆ.
ನಾನು ಈ ಊರಿನ ಅಳಿಯ, ನನಗೆ ಈಗಾಗಲೇ ಮದುವೆ ಆಗಿದೆ ಎಂದು ಹೇಳುವ ಸಿದ್ಧು, ನಾನು ಯಾರನ್ನು ಮದುವೆಯಾಗಿದ್ದೀನಿ ಅನ್ನೋದನ್ನ ತಿಳಿಬೇಕಾ? ಎನ್ನುತ್ತಾ ನೇರವಾಗಿ ಭಾವನಾ ಬಳಿ ಹೋಗಿ, ಭಾವನಾ ಕೈ ಹಿಡಿದು ವೇದಿಕೆಗೆ ಕರೆತಂದು, ಇವರನ್ನೇ ನಾನು ಮದುವೆಯಾಗಿರೋದು, ಆಕೆಯ ಕುತ್ತಿಗೆಯಲ್ಲಿರೋ ತಾಳಿ ನಾನು ಕಟ್ಟಿದ್ದು, ಇವರು ನನ್ನ ಹೆಂಡ್ತಿ ಅಂದಿದ್ದಾರೆ.
ಸದ್ಯಕ್ಕೆ ಈ ಪ್ರೊಮೋ ಅಷ್ಟೇ ರಿಲೀಸ್ ಆಗಿದೆ. ಮುಂದೆ ಏನಾಗಲಿದೆ ಅನ್ನೋದು ಗೊತ್ತಿಲ್ಲ. ಆದರೆ ಕೊನೆಗೂ ಸಿದ್ದು ಸತ್ಯ ಒಪ್ಪಿಕೊಂಡಿರೋದನ್ನು ನೋಡಿ ವೀಕ್ಷಕರು ಮಾತ್ರ ಸಖತ್ ಖುಷಿಯಾಗಿದ್ದಾರೆ. ಅದಷ್ಟು ಬೇಗ ಭಾವನಾ ಕೂಡ ಸಿದ್ಧೂನ ಒಪ್ಪಿಕೊಳ್ಳಲಿ ಎಂದು ಹಾರೈಸ್ತಿದ್ದಾರೆ ಜನರು. ಈ ಬಗ್ಗೆ ಜನರು ಏನೇನೋ ಅಭಿಪ್ರಾಯ ತಿಳಿಸಿದ್ದಾರೆ ನೋಡೋಣ.
ಸಿದ್ಧೇ ಗೌಡ್ರೆ ಕೊನೆಗೂ ಸತ್ಯವನ್ನು ಒಪ್ಪಿಕೊಂಡು ಒಳ್ಳೆದನ್ನೇ ಮಾಡಿದ್ರಿ, ಆದ್ರೆ ಈವಾಗ ಭಾವನಾ ಒಪ್ಕೋತ್ತಾಳೆ ಅನ್ನೋದೆ ಡೌಟ್ ಎಂದಿದ್ದಾರೆ. ಅಷ್ಟೇ ಅಲ್ಲ ಇದು ಕನಸಾಗದೇ ಇರ್ಲಿ, ಸಿದ್ದೆ ಗೌಡ್ರು ಹೇಳೋದೆಲ್ಲಾ ನನಸಾಗಲಿ ಅಂತಾನೂ ಬೇಡ್ಕೋತಿದ್ದಾರೆ ಜನ. ಕನಸು ಆಗಿಲ ಅಂದ್ರೆ ಸಾಕು. ಗೌಡ್ರೆ ಸತ್ಯ ಹೇಳಿದ್ದು ಒಳ್ಳೇದು ಅಯ್ತು. ಭಾವನಾ ಗೌಡ್ರು ಸೂಪರ್ ಜೋಡಿ ಎಂದಿದ್ದಾರೆ ವೀಕ್ಷಕರು.
ಕಥೆ ಬಗ್ಗೆ ಹೇಳೋದಾದ್ರೆ, ಎಲ್ಲಾರಿಂದಲೂ ಅಪಶಕುನ ಅನಿಸಿಕೊಂಡಿರುವ ಭಾವನಾ, ವಯಸ್ಸು 30 ದಾಟಿದ್ರೂ ಬಂದ ಮದುವೆ ಸಂಬಂಧಗಳೆಲ್ಲಾ ಒಂದಲ್ಲ ಒಂದು ಕಾರಣದಿಂದ ಮುರಿದು ಬಿದ್ದು, ಒಂಟಿಯಾಗಿಯೇ ಉಳಿಯುತ್ತಾಳೆ. ಆಗಲೇ ಸಿದ್ಧು ಭಾವನಾಳನ್ನು ನೋಡಿ, ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾನೆ. ತನಗಿಂತ ವಯಸ್ಸಲ್ಲಿ ದೊಡ್ಡೋಳಾದ್ರೂ ಮದುವೆ ಆದ್ರೆ ಭಾವನಾಳನ್ನೆ ಎನ್ನುವ ಹಠ ಸಿದ್ದೇಗೌಡ್ರದ್ದು.
ಪರಿಸ್ಥಿತಿ ಮುಂದೇನು ಅಂತ ತಿಳಿಯದೇ ಇರುವ ಸಮಯದಲ್ಲಿ, ಒಂದು ವೇಳೆ ಭಾವನಾ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೇ ಎನ್ನುವ ಯೋಚನೆಯಿಂದ ಸಿದ್ಧು, ಊರ ಜಾತ್ರೆಯ ಸಮಯದಲ್ಲಿ ಎಲ್ಲರೂ ಮಲಗಿರುವ ಸಮಯದಲ್ಲಿ ಭಾವನಾ ಕುತ್ತಿಗೆಗೆ ತಾಳಿ ಕಟ್ಟಿರ್ತಾರೆ. ಎಲ್ಲರಿಂದ ವಿಷ್ಯ ಮುಚ್ಚಿಟ್ಟ ಭಾವನಾ ತಾಳಿ, ರಹಸ್ಯ ನಿಧಾನವಾಗಿ ಮನೆಯವರೆಲ್ಲರೂ ತಿಳಿಯುತ್ತಾ ಬಂದಿದೆ. ಕೊನೆಗೆ ಸಿದ್ದು ತಾನೇ ಹುಡುಕಿ ಕೊಡೋದಾಗಿ ಹೇಳಿದ್ದ. ಈಗ ಭಾವನಾಗೆ ನಾನೇ ತಾಳಿ ಕಟ್ಟಿದ್ದು ಹೇಳೋ ಮೂಲಕ ಮಹಾತಿರುವು ಕೊಟ್ಟಿದ್ದಾರೆ ಸಿದ್ದೇ ಗೌಡ್ರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.