ನೀಳ ಕೇಶಕ್ಕೆ ಬಿತ್ತಾ ಕತ್ತರಿ: ನಿವೇದಿತಾ ಗೌಡ ಮೇಲೆ ಫ್ಯಾನ್ಸ್ ಗರಂ

First Published 18, Apr 2020, 11:58 AM

ಡಿಟ್ಟೋ ಬಾರ್ಬಿ ಗರ್ಲ್‌ನಂತಿರುವ ನೀವೇದಿತಾ ಗೌಡ ಬಿಗ್ ಬಾಸ್‌ಗೆ ಮನೆಗೆ ಎಂಟ್ರಿ ಕೊಟ್ಟಾಗ ಥೋ ಎಂದವರೇ ಹೆಚ್ಚು. ಡಬ್‌ಸ್ಮ್ಯಾಷ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಈ ಗೊಂಬೆ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆ ಮಾತಾದರು. ಚಂದನ್ ಶೆಟ್ಟಿ ಗೊಂಬೆ ಗೊಂಬೆ.. ಹಾಡು ಕಟ್ಟಿ ಹಾಡಲು ಆರಂಭಿಸಿದರ ಮೇಲೆ ಈ ಗೊಂಬೆಗೆ ಎಲ್ಲರೂ ಫಿದಾ ಆದರು. ಅದರಲ್ಲಿ ಅವರ ನೀಳ ಕೇಶ ಎಲ್ಲರನ್ನೂ ಆಕರ್ಷಿಸಿತ್ತು. ಅಂದುಕೊಂಡಂತೆ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಕೇಶ ತೈಲದ ಜಾಹೀರಾತುಗಳಲ್ಲೂ ಕಾಣಿಸಿಕೊಂಡರು. ಇದೀಗ ಇಂಥ ಅದ್ಭುತ ಕೂದಲಿಗೆ ಕತ್ತರಿ ಪ್ರಯೋಗ ಮಾಡಿದ್ರಾ?

ಕಂಗ್ಲಿಷ್ ಮಾತು, ಉದ್ದ ಜಡೆ ಹಾಗೂ ತಮ್ಮ ನಡೆ ನುಡಿಯಿಂದ ಬಿಗ್ ಮನೆಯಲ್ಲಿ ಹೆಸರ ಮಾಡಿದ ನಿವೇದಿತಾ ಗೌಡ.

ಅಲ್ಲದೇ ಗೊಂಬೆ ಗೊಂಬೆ ಎಂದು ಚಂದನ್ ಹಾಡು ಕಟ್ಟಿ ಹೇಳುವ ಮೂಲಕ ನಿವೇದಿತಾ ಎಲ್ಲರ ಗೊಂಬೆಯೇ ಆದರು.

ಬಿಗ್ ಬಾಸ್ ಮನೆಯಲ್ಲಿ ನಡೆದ ರಸ ಪ್ರಶ್ನೆ ಟಾಸ್ಕ್‌ನಲ್ಲಿ ಬೇರೆಯವರಿಗೆ ಹೋಲಿಸಿದಲ್ಲಿ ನಿವೇದಿತಾ ಸಾಕಷ್ಟು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದರು.

ಬರ ಬರುತ್ತಾ ಬೇರೆ ಸ್ಪರ್ಧಿಗಳ ಸಣ್ಣ ಬುದ್ಧಿಗೆ ಹೋಲಿಸಿದರೆ, ನಿವೇದಿತಾ ಬಹಳ ಪ್ರಬುದ್ಧ ಹೆಣ್ಣು ಎಂದೆನಿಸಲು ಆರಂಭವಾಗಿತ್ತು.

ಅಂತೆಯೇ ಅವರ ಸ್ಟೈಲ್, ನೈಲ್ ಪಾಲೀಷ್ ಪ್ರೇಮ, ನೇರ ನೇರಾ ನುಡಿ ಅಲ್ಲದೇ ನೀಳ ಕೇಶದಿಂದ ಅನೇಕ ಅಭಿಮಾನಿಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಆದರೆ, ಇವರನ್ನು ಮದುವೆಯಾದರೆ ಮೆಂಟೇನ್ ಮಾಡೋದು ಕಷ್ಟ ಎಂದು ಇತರೆ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ಚಂದನ್ ಸಹ ಸಾಥ್ ಕೊಟ್ಟಿದ್ದರು.

ಪರಿಸ್ಥಿತಿ ಬದಲಾಯಿತು.  ಆ ಸೀಸನ್‌ನಲ್ಲಿ ಚಂದನ್ ಶೆಟ್ಟಿಯೇ ಬಿಗ್ ಬಾಸ್ ಪ್ರಶಸ್ತಿ ಗೆದ್ದರು.

ಆಮೇಲೆ ಅದೃಷ್ಟವೇ ಬದಲಾಯಿತು. ನಂತರ ನಿವೇದಿತಾರ ಜೊತೆ ಸಪ್ತಪದಿ ತುಳಿದರು.

ಇದೀಗ ಈ ಜೋಡಿ ಹಾಡೊಂದನ್ನು ಹಾಡಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ನಿವೇದಿತಾ ಪದೆ ಪದೇ ತಮ್ಮ ಕೂದಲನ್ನು ಪ್ರದರ್ಶಿಸುತ್ತಿದ್ದಾರೆ.

ಉದ್ದ ಜಡೆಗೆ ಕತ್ತರಿ ಬಿದ್ದಂತೆ ಕಾಣುತ್ತಿದ್ದು, ಪ್ರೇಕ್ಷಕರು ಏಕೆ ಹೀಗೆ ಎಂದೇ ಪ್ರಶ್ನಿಸಿದ್ದಾರೆ.

ಆದರೆ, ಹಿಂದಿನ ಕೆಲವು ಫೋಟೋಗಳನ್ನೂ ಗಮನಿಸಿದರೆ ನಿವೇದಿತಾ ತಮ್ಮ ನೀಳ ಕೂದಲಿಗೆ ಆಗಾಗ ಕತ್ತರಿ ಪ್ರಯೋಗ ಮಾಡಿದಂತೆ ಕಾಣುತ್ತದೆ. ಒಟ್ಟಿನಲ್ಲಿ ನಿವಿ ಕೂದಲ ಫ್ಯಾನ್ಸ್‌ಗೆ ಬೇಜಾರಾಗಿದ್ದು ಮಾತ್ರ ಸುಳ್ಳಲ್ಲ.

ಕಮೆಂಟ್ಸ್ ಮಾಡಿ ಅಭಿಮಾನಿಗಳು ನಿವಿ ಕೂದಲ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಯಾವುದೇ ಸ್ಪಷ್ಟನೆ ಮಾತ್ರ ನೀಡಿಲ್ಲ ನಿವೇದಿತಾ ಗೌಡ.

loader