- Home
- Entertainment
- TV Talk
- 9.25 ಕೋಟಿ ರೂ ವಂಚನೆ ಕೇಸ್ ನಡುವೆ ನಿಶ್ಚಿತಾರ್ಥ ಮಾಡಿಕೊಂಡ್ರಾ ಬಿಗ್ ಬಾಸ್ ಮಾಜಿ ಸ್ಪರ್ಧಿ?
9.25 ಕೋಟಿ ರೂ ವಂಚನೆ ಕೇಸ್ ನಡುವೆ ನಿಶ್ಚಿತಾರ್ಥ ಮಾಡಿಕೊಂಡ್ರಾ ಬಿಗ್ ಬಾಸ್ ಮಾಜಿ ಸ್ಪರ್ಧಿ?
ವಿವಾದಗಳಿಂದಲೇ ಬಿಗ್ ಬಾಸ್ ಮನೆ ಸೇರಿಕೊಂಡ ಈಕೆ ಮನೆಯಿಂದ ಹೊರಬಂದರೂ ವಿವಾದ ನಿಂತಿಲ್ಲ. ಕಳೆದ ವಾರ 9.25 ಕೋಟಿ ರೂಪಾಯಿ ವಂಚನೆ ಕೇಸ್‌ಲ್ಲಿ ತಗ್ಲಾಕಿಕೊಂಡ ಈಕೆ ಇದೀಗ ಎಂಗೇಜ್‌ಮೆಂಟ್ ಫೋಟೋ ಹಾಕಿ ಅಚ್ಚರಿ ನೀಡಿದ್ದಾರೆ.

ವಿವಾದಗಳಿಗೆ ಕೇರಾಫ್ ಅಡ್ರೆಸ್ ಅಶು ರೆಡ್ಡಿ..
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ಸೆಲೆಬ್ರಿಟಿಗಳಲ್ಲಿ ಅಶು ರೆಡ್ಡಿ ಕೂಡ ಒಬ್ಬರು. ಸದ್ಯ ಅವರು ವಿವಾದಗಳ ಕೇಂದ್ರಬಿಂದುವಾಗಿದ್ದಾರೆ. ಈ ಹಿಂದೆ ಪ್ರೇಮ ವಿಚಾರವಾಗಿ ವೈರಲ್ ಆಗಿದ್ದ ಈ ನಟಿ, ಈಗ ಚೀಟಿಂಗ್ ಕೇಸ್‌ನಲ್ಲಿ ಸಿಲುಕಿದ್ದಾರೆ. ಧರ್ಮೇಂದ್ರ ಎಂಬ ಎನ್‌ಆರ್‌ಐ, ಮದುವೆ ಆಗುವುದಾಗಿ ನಂಬಿಸಿ ಅಶು ರೆಡ್ಡಿ 9 ಕೋಟಿ ರೂ. ಪಡೆದಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕೇಸ್ ಇನ್ನೂ ನಡೆಯುತ್ತಿದೆ. ಇದರ ನಡುವೆ ಎಂಗೇಜ್‌ಮೆಂಟ್ ಫೋಟೋ ಹಾಕಿ ಅಚ್ಚರಿ ನೀಡಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ..
ಧರ್ಮೇಂದ್ರ ಪ್ರಕರಣದ ಬಗ್ಗೆ ಅಶು ರೆಡ್ಡಿ ಬೇರೆಯದ್ದೇ ಉತ್ತರ ನೀಡಿದ್ದಾರೆ. ಸತ್ಯಾಸತ್ಯತೆ ತಿಳಿಯದೆ ತನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಅಷ್ಟೇ ಅಲ್ಲ, ಪೊಲೀಸರು ದಾಖಲಿಸಿದ ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿದೆ ಎನ್ನಲಾಗಿದೆ. ಜನರೆಲ್ಲಾ ಅಶು ರೆಡ್ಡಿ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾಗಲೇ ಅವರು ಶಾಕ್ ನೀಡಿದ್ದಾರೆ.
ನಿಶ್ಚಿತಾರ್ಥ ಫೋಟೋ
ಅಶು ರೆಡ್ಡಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳಲ್ಲಿ ಅವರ ಕೈಯಲ್ಲಿ ಎಂಗೇಜ್‌ಮೆಂಟ್ ಉಂಗುರವಿತ್ತು. ಅದರ ಜೊತೆಗೆ ವರನ ಕೈ ಹಿಡಿದಿರುವ ಫೋಟೋ ಕೂಡ ಇದ್ದಿದ್ದರಿಂದ, ಅಶು ರೆಡ್ಡಿಗೆ ನಿಶ್ಚಿತಾರ್ಥ ನಡೆದಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಡಿತ್ತು. ಆದರೆ ಮತ್ತೊಂದು ಪೋಸ್ಟ್ ಹಾಕಿ ಕುತೂಹಲಕ್ಕೆ ಉತ್ತರ ನೀಡಿದ್ದಾರೆ.
ಬಿಗ್ ಬಾಸ್ ವಿನ್ನರ್ ಜೊತೆ ಅಶು ರೆಡ್ಡಿ..
ಕಣ್ಣಿಗೆ ಕಾಣೋದೆಲ್ಲಾ ನಿಜವಲ್ಲ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

