- Home
- Entertainment
- TV Talk
- ರಂಭಾ ಜೊತೆ ಇರೋ ಈ ನಟಿ ನೆನಪಿದ್ದಾರೆಯೇ? ಮಾಂಗಲ್ಯ ಸೀರಿಯಲ್ ನೋಡಿರೋರಿಗೆ ಖಂಡಿತಾ ಗೊತ್ತಿರತ್ತೆ!
ರಂಭಾ ಜೊತೆ ಇರೋ ಈ ನಟಿ ನೆನಪಿದ್ದಾರೆಯೇ? ಮಾಂಗಲ್ಯ ಸೀರಿಯಲ್ ನೋಡಿರೋರಿಗೆ ಖಂಡಿತಾ ಗೊತ್ತಿರತ್ತೆ!
ನಟಿ ರಂಭಾ ಜೊತೆ ಕಾಣಿಸಿಕೊಂಡಿರುವ, ಸದ್ಯ ತಮಿಳು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಈ ನಟಿ ಒಂದು ಕಾಲದಲ್ಲಿ ಕನ್ನಡ ಕಿರುತೆರೆ ಆಳಿದವರು… ಯಾರು ಅನ್ನೋದು ನೆನಪಿದೆಯೇ?

ಬಹುಭಾಷಾ ನಟಿ ರಂಭಾ (Actress Rambha) ಜೊತೆ ಇರುವಂಥಹ ನಟಿ ಯಾರೂ ಅನ್ನೋದು ಗೊತ್ತಾಯ್ತಾ ನಿಮಗೆ? ಇವರು ಒಂದು ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಮೆರೆದಂತಹ ನಟಿ ಸದ್ಯ ತಮಿಳು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.
ಇವರು ಬೇರಾರು ಅಲ್ಲ ನಟಿ ಸುಚಿತ್ರಾ ಕೆಎಸ್ (Suchitra KS). ನಿಮಗೆ ಹಲವು ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಾಂಗಲ್ಯ ಸೀರಿಯಲ್ ನೆನಪಿದ್ಯಾ? ಆ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದು ಇವರೇ ಅಲ್ವಾ?
ಹೌದು, ಮಾಂಗಲ್ಯ (Mangalya) ಧಾರಾವಾಹಿ ಸುಮಾರು 7-8 ವರ್ಷಗಳವರೆಗೆ ಪ್ರಸಾರವಾಗುತ್ತಿದ್ದಂತಹ ಧಾರಾವಾಹಿ ಇದು, ಈ ಧಾರಾವಾಹಿಯನ್ನು ಜನ ಇಷ್ಟಪಟ್ಟು ನೋಡುತ್ತಿದ್ದರು. ಮಧ್ಯಮ ವರ್ಗದ ಕುಟುಂಬದ ಕಥೆ ವ್ಯಥೆಯೇ ಮಾಂಗಲ್ಯ.
ಉದಯ ಟಿವಿ ಧಾರಾವಾಹಿಗಳ ಪೈಕಿ 'ಮಾಂಗಲ್ಯ' ದೊಡ್ಡ ವೀಕ್ಷಕರ ಬಹಳ ಹೊಂದಿತ್ತು. ನಾಲ್ಕು ಅಕ್ಕ ತಂಗಿಯರ ಕಥೆ ಇದಾಗಿತ್ತು. ಈ ಧಾರಾವಾಹಿ ಬರೋಬ್ಬರಿ 1400 ಸಂಚಿಕೆಗಳಲ್ಲಿ ಪ್ರಸಾರವಾಗಿತ್ತು. ಈ ಧಾರಾವಾಹಿಯಲ್ಲಿ ಸುಚಿತ್ರ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಹಲವು ಸೀರಿಯಲ್ ಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ನಟಿಯ ಕನ್ನಡದ ಜನಪ್ರಿಯ ಧಾರಾವಾಹಿಗಳು ಅಂದ್ರೆ, ಮಾಂಗಲ್ಯ ಮತ್ತು ಈಶ್ವರಿ. ಇವರು ಕನ್ನಡ ಮಾತ್ರವಲ್ಲ ತಮಿಳು ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ, ಟಿವಿ ಶೋ, ಕ್ವಿಜ್ ಶೋಗಳ ನಿರೂಪಣೆ ಕೂಡ ಮಾಡಿದ್ದಾರೆ.
ಸುಚಿತ್ರಾ ಗಂಡುಗಲಿ ಕುಮಾರ ರಾಮ (gandugali kumararama), ಪ್ರೀತ್ಸೋದು ತಪ್ಪಾ, ಎಲೆಕ್ಷನ್, ಶಿವಾ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು. ಸೈವಮ್ ಎನ್ನುವ ಸಿನಿಮಾದಲ್ಲಿ ನಾಸರ್ ಗೆ ಜೋಡಯಾಗುವ ಮೂಲಕ ತಮಿಳು ಸಿನಿಮಾಕ್ಕೂ ಎಂಟ್ರಿ ಕೊಟ್ಟಿದ್ದರು, ಈ ಜನಪ್ರಿಯ ನಟಿ.
ತಮಿಳಿನಲ್ಲಿ ಮೊದಲಿಗೆ ನನ್ನಲ್ ಎನ್ನುವ ಸೀರಿಯಲ್, ಬಳಿಕ ಮಾಂಗಲ್ಯ ದೋಷಮ್ ಸೀರಿಯಲ್ ನಲ್ಲಿ ನಟಿಸಿದ್ದರು, ಅದಾದ ಬಳಿಕ 2020ರಲ್ಲಿ ವಿಜಯ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಭಾಕ್ಯಲಕ್ಷ್ಮೀ (Bhakyalakshmi) ಧಾರಾವಾಹಿಗೆ ಸಹಿ ಹಾಕಿದರು. ಕಳೆದ ನಾಲ್ಕು ವರ್ಷಗಳಿಂದ ಸುಚಿತ್ರಾ ಭಾಗ್ಯ ಆಗಿ ನಟಿಸುತ್ತಿದ್ದಾರೆ. ಇದೇ ಧಾರಾವಾಹಿ ಕನ್ನಡದಲ್ಲಿ ಭಾಗ್ಯಲಕ್ಷ್ಮಿಯಾಗಿ ಪ್ರಸಾರವಾಗುತ್ತಿದೆ.
ಇನ್ನು ಇಷ್ಟು ವರ್ಷಗಳಿಂದ ತಮಿಳು, ತೆಲುಗಿನಲ್ಲಿ ಬ್ಯುಸಿಯಾಗಿದ್ದ ನಟಿ ಇದೀಗ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಉದಯ ಟಿವಿಯಲ್ಲಿ (Udaya TV) ಪ್ರಸಾರವಾಗಲಿರುವ ಸಿಂಧು ಭೈರವಿ ಧಾರಾವಾಹಿಯಲ್ಲಿ ನಟಿಸಲಿದ್ದಾರೆ.