ತೆಲುಗು ವೇದಿಕೆಯಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ; ವಿಕ್ರಮ್ - ವೇದಾ ಜೋಡಿ ನೋಡಿ ಫ್ಯಾನ್ಸ್ ಫಿದಾ
ಕನ್ನಡದ ಜನಪ್ರಿಯ ನೀನಾದೆ ನಾ ಧಾರಾವಾಹಿಯ ಫೇವರಿಟ್ ಜೋಡಿ ವಿಕ್ರಮ್ ಮತ್ತು ವೇದಾ ತೆಲುಗು ವೇದಿಕೆಯಲ್ಲಿ ಒಂದಾಗಿ ಕಾಣಿಸಿಕೊಂಡಿದ್ದು, ಡ್ಯಾನ್ಸ್ ಕೂಡ ಮಾಡಿದ್ದಾರೆ. ಫ್ಯಾನ್ಸ್ ಗಳಿಗ್ಯಾಕೋ ಒಬ್ಬರು ಲವ್ ಮಾಡ್ತಿದ್ದಾರೆ ಅನಿಸ್ತಿದೆಯಂತೆ.
ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ನೀನಾದೆ ನಾ ಸೀರಿಯಲ್. ನೀನಾದೆ ನಾ ಮುಖ್ಯ ಪಾತ್ರಧಾರಿಗಳಾದ ವಿಕ್ರಮ್ ಮತ್ತು ವೇದಾ ಇಬ್ಬರಂತೂ ಸದ್ಯ ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿ ಎನಿಸಿಕೊಂಡಿದ್ದಾರೆ.
ವಿಕ್ರಮ್ ಮತ್ತು ವೇದಾ (Vikram and Vedha) ಅನ್ನೋದಕ್ಕಿಂತ ಗುಂಡ ಮತ್ತು ಬೇತಾಳ ಅಂತಾನೆ ಫೇಮಸ್ ಆಗಿರುವ ಈ ಜೋಡಿಯ, ಕೋಪ, ಜಗಳ, ಹುಸಿ ಮುನಿಸು, ಪ್ರೀತಿ ಎಲ್ಲವೂ ಜನರಿಗೆ ಎಷ್ಟು ಮೋಡಿ ಮಾಡಿದೆ ಅಂದ್ರೆ, ಇವರಿಬ್ಬರ ಹೆಸರಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫೇಜಸ್ ಕ್ರಿಯೇಟ್ ಆಗಿದೆ.
ವಿಕ್ರಮ್ ಪಾತ್ರದಲ್ಲಿ ಕಾಣಿಸಿಕೊಂಡಿರೋ ದಿಲೀಪ್ ಶೆಟ್ಟಿ (Dileep Shetty) ಮತ್ತು ವೇದಾ ಪಾತ್ರ ನಿರ್ವಹಿಸುತ್ತಿರುವ ಖುಷಿ ಶಿವು (Khushi Shivu) ಇಬ್ಬರೂ, ಆನ್ ಸ್ಕ್ರೀನ್ ಮಾತ್ರವಲ್ಲ ಆಫ್ ಸ್ಕ್ರೀನ್ ನಲ್ಲೂ ತುಂಬಾನೆ ಕ್ಲೋಸ್ ಆಗಿದ್ದಾರೆ. ಇವರಿಬ್ಬರ ಸೋಶಿಯಲ್ ಮೀಡಿಯಾ ನೋಡಿದ್ರೆ ಇವರಿಬ್ಬರು ಆಫ್ ಸ್ಕ್ರೀನ್ ಕೂಡ ಟಾಮ್ ಆಂಡ್ ಜೆರ್ರಿ ಅನ್ನೋದು ತಿಳಿಯುತ್ತೆ.
ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ದಿಲೀಪ್ ಮತ್ತು ಖುಷಿ ಇಬ್ಬರೂ ಸಹ ಹೆಚ್ಚಾಗಿ ಜೊತೆಗಿರುವ ಫೋಟೋಗಳನ್ನು , ಜೊತೆಗೆ ಮಾಡಿರುವಂತಹ ಡ್ಯಾನ್ಸ್ ರೀಲ್ಸ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತಿಚೇಗೆ ಜೊರೆಯಾಗಿ ಯೂಟ್ಯೂಬ್ ಚಾನೆಲ್ ಮಾಡುವ ಬಗ್ಗೆಯೂ ಮಾಹಿತಿ ನೀಡಿದ್ದರು. ಹಾಗಾಗಿ ಈ ಜೋಡಿಯ ಮೇಲೆ ವೀಕ್ಷಕರಿಗೂ ಸಿಕ್ಕಾಪಟ್ಟೆ ಪ್ರೀತಿ ಆಗಿಬಿಟ್ಟಿದೆ.
ದಿಲೀಪ್ ಶೆಟ್ಟಿ ತೆಲುಗು ಕಿರುತೆರೆಯಲ್ಲೂ ಸಹ ಬ್ಯುಸಿಯಾಗಿದ್ದು, ಝೀ ತೆಲುಗಿನ ಸೂಪರ್ ಜೋಡಿ (Super Jodi), ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಸ್ಪರ್ಧಿಯಾಗಿದ್ದಾರೆ. ಇತ್ತೀಚೆಗೆ ಈ ಕಾರ್ಯಕ್ರಮದ ಸಂದರ್ಭದಲ್ಲಿ ಸ್ಟೇಜ್ ಮೇಲೆ ಸರ್ ಪ್ರೈಸ್ ಆಗಿ ಖುಷಿಯವರು ಬಂದಿದ್ದರು. ತೆಲುಗು ವೇದಿಕೆ ಮೇಲೆ ಕನ್ನಡದ ಫೇವರಿಟ್ ಜೋಡಿಗಳನ್ನು ನೋಡಿ ವಿಕ್ರಮ್ ವೇದಾ ಫ್ಯಾನ್ಸ್ ತುಂಬಾನೆ ಖುಷಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ನಿರೂಪಕಿ ಖುಷಿ ಬಗ್ಗೆ ದಿಲೀಪ್ ಬಳಿ ಕೇಳಿದಾಗ ಆತ ಖುಷಿ ನನ್ನ ಬೆಸ್ಟ್ ಫ್ರೆಂಡ್ ಎಂದಿದ್ದಾರೆ. ಅದಕ್ಕೆ ದಿಲೀಪ್ ಸಹ ಸ್ಪರ್ಧಿ, ಹುಡುಗರೆಲ್ಲಾ ಹೀಗೆ ಹುಡುಗೀರನ್ನು ಬೆಸ್ಟ್ ಫ್ರೆಂಡ್ ಅಂತಾಲೇ ಹೇಳೊದು ಎಂದು ಕಾಲೆಳೆದಿದ್ದಾರೆ. ಅದಕ್ಕೆ ಖುಷಿ ದಿಲೀಪ್ ಕೈಯಿಂದ ಮೈಕ್ ಕಸಿದುಕೊಂಡು, ದಿಲೀಪ್ ಬೇರೆ ಹುಡುಗೀರ ಜೊತೆ ಜಗಳ ಮಾಡೊದನ್ನು ನೋಡೋದು ನಂಗೆ ಇಷ್ಟ, ಇನ್ನೂ ಫೈಟ್ ಮಾಡಲಿ ಎಂದಿದ್ದಾರೆ.
ಖುಷಿ ಮತ್ತು ದಿಲೀಪ್ ಸ್ಟೇಜ್ ಮೇಲೆ ಒಂದು ರೋಮ್ಯಾಂಟಿ ಹಾಡಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದನ್ನೆಲ್ಲಾ ನೋಡ್ತಿರೋ ಅಭಿಮಾನಿಗಳು ಇದು ಫ್ರೆಂಡ್ ಶಿಪ್ ಅಂತೂ ಅಲ್ಲ, ನಿಜವಾಗಿಯೂ ಲವ್ ಆಗಿರೋ ಹಾಗಿದೆ, ನೀವಿಬ್ಬರು ಜೋಡಿಯಾದ್ರೆ ನಮಗಂತೂ ಫುಲ್ ಖುಶ್, ನಿವೀಬ್ರು ಮದುವೆಯಾಗಿ, ಈ ಮುದ್ದಾದ ಜೋಡಿಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.