- Home
- Entertainment
- TV Talk
- ದೋಸ್ತನ ಗೆಲುವು ಸಂಭ್ರಮಿಸಿದ ಧನರಾಜ್ ಆಚಾರ್ … ವಿಷ್ಣು-ದ್ವಾರಕೀಶ್ ಜೋಡಿ ನಿಮ್ಮದು ಎಂದ ಫ್ಯಾನ್ಸ್
ದೋಸ್ತನ ಗೆಲುವು ಸಂಭ್ರಮಿಸಿದ ಧನರಾಜ್ ಆಚಾರ್ … ವಿಷ್ಣು-ದ್ವಾರಕೀಶ್ ಜೋಡಿ ನಿಮ್ಮದು ಎಂದ ಫ್ಯಾನ್ಸ್
ಬಿಗ್ ಬಾಸ್ ಸ್ಪರ್ಧಿ ಧನರಾಜ್ ಆಚಾರ್ ಬಿಗ್ ಬಾಸ್ ವಿನ್ನರ್ ಆಗಿರುವ ಹನುಮಂತನಿಗೆ ಸಿಕ್ಕ ಕಪ್ಪನ್ನು ಹಿಡಿದು ಗೆಲುವು ನಿನ್ನದು, ಖುಷಿ ನನ್ನದು ಎಂದು ಸಂಭ್ರಮಿಸಿದ್ದಾರೆ.

ಈಗಾಗಲೇ ಬಿಗ್ ಬಾಸ್ ಸೀಸನ್ 11 (Bigg Boss Season 11) ಕೊನೆಗೊಂಡಿದ್ದು, ಹಳ್ಳಿ ಹೈದ ಹನುಮಂತ (Hanumantha Lamani) ಇತರ ಸ್ಪರ್ಧಿಗಳಿಗೆ ಸಖತ್ ಟಕ್ಕರ್ ಕೊಟ್ಟು ಬಿಗ್ ಬಾಸ್ ವಿನ್ನರ್ ಆಗುವ ಮೂಲಕ, ಬಿಗ್ ಬಾಸ್ ಟ್ರೋಫಿಯನ್ನು ಕೈಗೆತ್ತಿಕೊಂಡಿದ್ದಾರೆ. ಇದೀಗ ತಮ್ಮ ಸ್ನೇಹಿತರ ಗೆಲುವನ್ನು ಧನರಾಜ್ ಆಚಾರ್ ಸಂಭ್ರಮಿಸಿದ್ದಾರೆ.
ಗೆಳೆಯ ಹನುಮಂತನಿಗೆ ಸಿಕ್ಕಂತಹ ಬಿಗ್ ಬಾಸ್ ಟ್ರೋಫಿಯನ್ನು ಕೈಯಲ್ಲಿ ಹಿಡಿದು, ತಲೆಯ ಮೇಲೆ ಇಟ್ಟು ಧನರಾಜ್ ಆಚಾರ್ (Dhanaraj Achar )ಸಂಭ್ರಮಿಸಿದ್ದು, ಈ ಅಪೂರ್ವ ಕ್ಷಣದ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ಧನರಾಜ್. ಈ ಫೋಟೊ ನೋಡಿ ಈ ಜೋಡಿಯ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದು, ಇವರಿಬ್ಬರ ಸ್ನೇಹ ನೋಡಿ ಹಾರೈಸಿದ್ದಾರೆ.
ಹನುಮಂತನ ಜೊತೆಗೆ ನಿಂತು ಆತನಿಗೆ ಸಿಕ್ಕ ಕಪ್ಪನ್ನು ಕೈಯಲ್ಲಿ ಹಿಡಿದು ದೋಸ್ತಾ ನೀ ಮಸ್ತಾ. ಗೆಲುವು ನಿನ್ನದು.. ಖುಷಿ ನನ್ನದು. ಇದು ದೋಸ್ತಿ ಗೆಲುವು ದೋಸ್ತಾ. ಇರು ನೀ ಜೊತೆಗಿರು ಎಂದೆಂದಿಗೂ ಎಂದು ಹೇಳಿ ಹಾರೈಸುವ ಮೂಲಕ ದೋಸ್ತನ ಗೆಲುವನ್ನು ತನ್ನ ಗೆಲುವು ಎನ್ನುವಂತೆ ಸಂಭ್ರಮಿಸಿದ್ದಾರೆ ಧನರಾಜ್ ಆಚಾರ್.
ಈ ಬಾರಿಯ ಬಿಗ್ ಬಾಸ್ ಸೀಸನ್ 11 ಬರೀ ಜಗಳ, ಮೋಸಗಳೇ ತುಂಬಿತ್ತು. ಇವೆಲ್ಲದರ ನಡುವೆ ಇವರಿಬ್ಬರ ಮುಗ್ಧ ಗೆಳೆತನ (ಫ಼್riendship) ಹೈಲೈಟ್ ಆಗಿತ್ತು. ಇಬ್ಬರೂ ಮುಗ್ಧರೇ ಆಗಿರೋದ್ರಿಂದ ಇವರಿಬ್ಬರ ಕಾಮಿಡಿ, ಮನರಂಜನೆ, ಜೊತೆಯಾಗಿ ಕಳೆದ ಸಮಯ ಎಲ್ಲವನ್ನು ಜನ ಇಷ್ಟಪಟ್ಟಿದ್ದರು. ಸ್ನೇಹ ಅಂದರೆ ಹೀಗೆ ಇರಬೇಕು ಎಂದು ಈ ಜೋಡಿಯನ್ನು ನೋಡಿ ಎಷ್ಟೋ ಜನ ಅಂದುಕೊಂಡಿದ್ದು ಇದೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವೂ ಈ ಜೋಡಿ ಜೊತೆಯಾಗಿರೋದನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಧನು ಹನು ಇಬ್ಬರು ಬೆಸ್ಟ್ ಜೋಡಿ ಎಂದಿದ್ದಾರೆ. ಅಷ್ಟೇ ಅಲ್ಲ ನಿಮ್ಮಿಬ್ಬರ ಸ್ನೇಹ ಯಾವಾಗಲೂ ಹೀಗೆ ಇರಲಿ ಎಂದು ಹಾರೈಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಸಂತೋಷ ಮತ್ತು ದುಃಖ ಸಮಯದಲ್ಲಿ ಜೊತೆಯಲ್ಲಿ ಇರುವ ದೋಸ್ತ ನಮ್ಮ ಹನುಮಂತ ಮತ್ತು ಧನರಾಜು ಎಂದಿದ್ದಾರೆ. ಮತ್ತೊಬ್ಬರು ನಿಮ್ಮಿಬ್ಬರನ್ನು ನೋಡುತ್ತಿದ್ದರೆ ಆಪ್ತಮಿತ್ರದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ತರ ಇದ್ದೀರಿ ಎಂದಿದ್ದಾರೆ.