ವೈಕುಂಠ ಏಕಾದಶಿ ದಿನ ಇಸ್ಕಾನ್ ಮಂದಿರದಲ್ಲಿ ಗೋವಿಂದ ಗೋವಿಂದ ಎಂದ ದೀಪಿಕಾ ದಾಸ್
ವಿದೇಶದಲ್ಲಿ ಟ್ರಾವೆಲ್ ಮಾಡುತ್ತಾ ಬ್ಯುಸಿಯಾಗಿದ್ದ ದೀಪಿಕಾ ದಾಸ್, ಇದೀಗ ಭಾರತಕ್ಕೆ ಬಂದಿದ್ದು, ವೈಕುಂಠ ಏಕಾದಶಿ ದಿನ ಇಸ್ಕಾನ್ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ನಾಗಿಣಿ ಸೀರಿಯಲ್ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟ ದೀಪಿಕಾ ದಾಸ್ (Deepika Das), ಬಿಗ್ ಬಾಸ್ ಸೀಸನ್ 7 ರ ಮೂಲಕ ಕನ್ನಡಿಗರ ಮನೆಮಾತಾಗಿದ್ದರು. ನಂತರ ನಟನೆಯಿಂದ ದೂರವೇ ಉಳಿದಿದ್ದ ನಟಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ಜನರ ಜೊತೆ ಕನೆಕ್ಟ್ ಆಗುತ್ತಲಿದ್ದರು.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಗೋವಾದಲ್ಲಿ ಸದ್ದಿಲ್ಲದೇ ಉದ್ಯಮಿ ದೀಪಕ್ ಗೌಡ (Deepak Gowda) ಜೊತೆ ಮದುವೆಯಾಗುವ ಮೂಲಕ ಚಿತ್ರರಂಗಕ್ಕೆ ಶಾಕ್ ಕೊಟ್ಟಿದ್ದ ಬೆಡಗಿ, ಬಳಿಕ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಶನ್ ಏರ್ಪಡಿಸುವ ಮೂಲಕ ಚಿತ್ರರಂಗದ, ಕನ್ನಡ ಕಿರುತೆರೆಯ ನಟ-ನಟಿಯರಿಗೆ ಅದ್ಧೂರಿಯಾಗಿ ಪಾರ್ಟಿ ನೀಡಿದ್ದರು.
ಮದುವೆಯಾದ ಬಳಿಕ ದೀಪಿಕಾ ದಾಸ್ ವಿದೇಶದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಒಂದು ದಿನ ನ್ಯೂಯಾರ್ಕ್, ಲಂಡನ್, ದುಬೈ ಎನ್ನುತ್ತಾ, ದೇಶ ವಿದೇಶ ಸುತ್ತುತ್ತಾ, ತಮ್ಮ ಪತಿ ಜೊತೆ ಎಂಜಾಯ್ ಮಾಡ್ತಿದ್ದಾರೆ. ನ್ಯೂ ಇಯರ್ ಸಂದರ್ಭದಲ್ಲೂ ನಟಿ ವಿದೇಶದಲ್ಲಿ ಮೋಜು, ಮಸ್ತಿ ಮಾಡುತ್ತಿರುವ ವಿಡೀಯೋ, ಫೋಟೊಗಳನ್ನು ಶೇರ್ ಮಾಡಿದ್ದರು.
ಇದೀಗ ಭಾರತಕ್ಕೆ ಬಂದಿರುವ ದೀಪಿಕಾ ದಾಸ್, ಇತ್ತೀಚೆಗೆ ಯಾವುದೋ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪತಿ ದೀಪಕ್ ಜೊತೆ ಕಾಣಿಸಿಕೊಂಡಿದ್ದರು. ಇದೀಗ ವೈಕುಂಠ ಏಕಾದಶಿಯ (Vaikunta Ekadashi) ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದು, ಅಲ್ಲಿನ ಒಂದಷ್ಟು ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ದೀಪಿಕಾ ದಾಸ್ ನೀಲಿ, ನೇರಳೆ, ಕೆಂಪು ಬಣ್ಣದ ಮೈಸೂರ್ ಸಿಲ್ಕ್ ಸೀರೆ (Mysore silk saree) ಧರಿಸಿ, ಕೈತುಂಬಾ ಬಳೆ, ಕುತ್ತಿಗೆಗೆ ನೆಕ್ಲೆಸ್ ಧರಿಸಿ, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ತಮ್ಮ ಫೋಟೊ ಜೊತೆ ದೀಪಿಕಾ ವೈಕುಂಠ ಏಕಾದಶಿ, ಗೋವಿಂದ, ಗೋವಿಂದ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.
ನಟಿಯ ಸುಂದರವಾದ ಫೋಟೊ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದು, ತ್ರಿಪುರ ಸುಂದರಿ, ಬ್ಯೂಟಿಫುಲ್, ಗಾರ್ಜಿಯಸ್, ಸುಂದರಿ ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ತಮ್ಮ ಒಂದಷ್ಟು ಫೋಟೊಗಳನ್ನು ಮಾತ್ರ ಶೇರ್ ಮಾಡಿದ್ದು, ಫೋಟೊದಲ್ಲಿ ಗಂಡ ಮಿಸ್ ಆಗಿದ್ದಾರೆ. ಇನ್ನು ಸಿನಿಮಾ ವಿಷ್ಯಕ್ಕೆ ಬರೋದಾದ್ರೆ ದೀಪಿಕಾ ಪಾರು ಪಾರ್ವತಿ (Paru Parvathi)ಎನ್ನುವ ಸಿನಿಮಾದಲ್ಲಿ ನಟಿಸಿದ್ದು, ಇದು ಟ್ರಾವೆಲ್ ಸ್ಟೋರಿ ಹೊಂದಿರುವ ಸಿನಿಮಾ ಆಗಿದೆ.