ಆ ಜಾಗದಲ್ಲಿ ಟ್ಯಾಟೂ ಹಾಕಿ, ಪೋಸ್ ಕೊಟ್ಟ Deepika Das… ಫ್ಯಾನ್ಸ್ ಶಾಕ್
Deepika Das: ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಬ್ಯೂಟಿ ದೀಪಿಕಾ ದಾಸ್ ಇದೀಗ ತಮ್ಮ ಟ್ಯಾಟೂ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಸ್ಪೆಷಲ್ ಟ್ಯಾಟೂ ಹಾಕಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

ದೀಪಿಕಾ ದಾಸ್
ಕನ್ನಡ ಕಿರುತೆರೆಯ ಫೇವರಿಟ್ ನಾಗಿಣಿ ಅಂದ್ರೆ ಅದು ದೀಪಿಕಾ ದಾಸ್. ಅಮೃತಾ ಆಗಿ ಜನಪ್ರಿಯತೆ ಪಡೆದ ಬೆಡಗಿ ಜನಕ್ಕೆ ದೀಪಿಕಾ ದಾಸ್ ಆಗಿ ಹತ್ತಿರವಾಗಿದ್ದು, ಬಿಗ್ ಬಾಸ್ ಸೀಸನ್ 7 ಮೂಲಕ. ದೀಪಿಕಾ -ಶೈನ್ ಲವ್ ಬಗ್ಗೆ ಜನ ಮಾತನಾಡಿಕೊಳ್ಳುತ್ತಿರುವಾಗಲೇ ನಟಿ, ಸದ್ದಿಲ್ಲದೇ ಗೋವಾದಲ್ಲಿ ತಮ್ಮ ಗೆಳೆಯನನ್ನು ಮದುವೆಯಾಗುವ ಮೂಲಕ ಭಾರಿ ಸುದ್ದಿಯಾಗಿದ್ದರು. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ ನಟಿ.
ಟ್ಯಾಟೂ ಹಾಕಿಸಿಕೊಂಡ ಬೆಡಗಿ
ಇದೀಗ ದೀಪಿಕಾ ದಾಸ್ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹೊಸದಾಗಿ ರೀಲ್ಸ್ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಎರಡೆರಡು ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸ್ಪೆಷಲ್ ಜಾಗದಲ್ಲಿ ಟ್ಯಾಟೂ ಹಾಕಿಕೊಂಡು ಪೋಸ್ ಕೊಟ್ಟಿರುವ ದೀಪಿಕಾ ದಾಸ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ನೀತು ವನಜಾಕ್ಷಿ ಬಳಿ ಟ್ಯಾಟೂ ಹಾಕಿಸಿದ ದೀಪಿಕಾ
ದೀಪಿಕಾ ದಾಸ್ ಬಿಗ್ ಬಾಸ್ ನ ಮತ್ತೊಬ್ಬ ಸ್ಪರ್ಧಿಯಾಗಿದ್ದ ನೀತೂ ವನಜಾಕ್ಷಿ ಬಳಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನೀತು ಟಿಟ್ ಫಾರ್ ಟ್ಯಾಟೂ ಎನ್ನುವ ತಮ್ಮದೇ ಆದ ಟ್ಯಾಟೂ ಸ್ಟುಡಿಯೋ ಹೊಂದಿದ್ದು, ಅಲ್ಲಿಗೆ ಹೋಗಿ ದೀಪಿಕಾ ದಾಸ್ ಟ್ಯಾಟೂ ಹಾಕಿಸಿಕೊಂಡಿದ್ದು, ಟ್ಯಾಟೂ ಮಾಡುತ್ತಿರುವ ವಿಡೀಯೋ ಪೋಸ್ಟ್ ಮಾಡಿದ್ದಾರೆ.
ಬೆನ್ನಿನಿಂದ ಸೊಂಟದವರೆಗೂ ಟ್ಯಾಟೂ
ದೀಪಿಕಾ ದಾಸ್ ಕುತ್ತಿಗೆಯಿಂದ ಆರಂಭಿಸಿ, ಬೆನ್ನು ಸೊಂಟದವರೆಗೂ ಅಂದ್ರೆ, ಬೆನ್ನು ಮೂಳೆ ಮೇಲೆ ಪೂರ್ತಿಯಾಗಿ ಟ್ಯಾಟೂ ಮಾಡಿಸಿಕೊಂಡಿದ್ದಾರೆ. ಜೊತೆಗೆ ಕಾಲಿನ ಮೇಲೆ ಸಹ ಟ್ಯಾಟೂ ಹಾಕಿಸಿದ್ದಾರೆ. ಕೊನೆಗೆ ತಮ್ಮ ಪೂರ್ತಿ ಟ್ಯಾಟೂ ಶೋ ಆಫ್ ಕೂಡ ಮಾಡಿದ್ದಾರೆ. ಇದನ್ನ ನೋಡಿದ್ರೆ ಯಾವುದೋ ಸ್ಪೀರೀಚುವಲ್ ಎಲಿಮೆಂಟ್ ಇರುವಂತಹ ಟ್ಯಾಟೂನಂತೆ ಕಾಣಿಸುತ್ತಿದೆ.
ಫ್ಯಾನ್ಸ್ ಶಾಕ್
ದೀಪಿಕಾ ದಾಸ್ ಬೋಲ್ಡ್ ಮೂವ್ ಹಾಗೂ ಟ್ಯಾಟೂ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಡಿಡಿ ಯಾವಾಗ್ಲೂ ರಾಕಿಂಗ್,ಸೂಪರ್, ಫೈರ್ ಅಂತಾನೂ ಹೇಳಿದ್ದಾರೆ. ಇನ್ನೂ ಕೆಲವರು ಈ ಟ್ಯಾಟೂ ಯಾರಿಗೆ ನೋಡೋದಕ್ಕೆ ಹಾಕ್ಸಿದ್ದೀರಿ, ನಿಮ್ಮ ಗಂಡ ಮಾತ್ರ ನೋಡ್ಬೋದು ಅಷ್ಟೇ ಅಂದ್ರೆ, ಇನ್ನೊಬ್ಬರು, ಈ ಟ್ಯಾಟೂನ ತೋರಿಸೋದಕ್ಕೆ ಯಾವ ಡ್ರೆಸ್ ಹಾಕ್ತೀರಿ ಅಂತಾನೂ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

