- Home
- Entertainment
- TV Talk
- Deepika Das: ನಾಡು ಬಿಟ್ಟು ಕಾಡಿಗೆ ಹೋಗಿ ಸೇರಿಕೊಂಡ ದೀಪಿಕಾ ದಾಸ್… ಆಫ್ರಿಕಾದಲ್ಲಿ ನಟಿ ಮಾಡ್ತಿರೋದೇನು?
Deepika Das: ನಾಡು ಬಿಟ್ಟು ಕಾಡಿಗೆ ಹೋಗಿ ಸೇರಿಕೊಂಡ ದೀಪಿಕಾ ದಾಸ್… ಆಫ್ರಿಕಾದಲ್ಲಿ ನಟಿ ಮಾಡ್ತಿರೋದೇನು?
ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ನಟನೆ, ಬ್ಯುಸಿನೆಸ್ ಎಲ್ಲಾದಕ್ಕೂ ಕೊಂಚ ಬ್ರೇಕ್ ಕೊಟ್ಟು ದೂರದ ಆಫ್ರಿಕಾದ ಕೆನ್ಯಾದಲ್ಲಿರುವ ಮಾಸೈ ಮಾರಾ ಸಫಾರಿ ತಾಣಕ್ಕೆ ತೆರಳಿ ಕಾಡು ಪ್ರಾಣಿಗಳ ನಡುವೆ ಸಮಯ ಕಳೆದು ಬಂದಿದ್ದಾರೆ.

ದೀಪಿಕಾ ದಾಸ್
ಕನ್ನಡ ಕಿರುತೆರೆಯಲ್ಲಿ ನಾಗಿಣಿ ಸೀರಿಯಲ್ ಮೂಲಕ ಮೋಡಿ ಮಾಡಿದ ನಟಿ ದೀಪಿಕಾ ದಾಸ್. ಬಳಿಕ ಬಿಗ್ ಬಾಸ್ ಸೀಸನ್ 7 ರಮೂಲಕ ಬಾಸ್ ಲೇಡಿಯಾಗಿ ಮಿಂಚುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು.
ಕನ್ನಡಿಗರ ಫೇವರಿಟ್
ದೀಪಿಕಾ ದಾಸ್ ನಟಿಸಿದ ಅವಧಿ ಕಡಿಮೆಯಾದರೂ ಸಹ ಇಂದಿಗೂ ಸಹ ಜನರು ದೀಪಿಕಾರನ್ನು ನಾಗಿಣಿಯ ಅಮೃತಾ ಆಗಿ ನೆನಪಿಟ್ಟುಕೊಂಡಿದ್ದಾರೆ. ಇವತ್ತಿಗೂ ನಟಿಯ ನಟನೆಯನ್ನು ಹಾಡಿ ಹೊಗಳುತ್ತಾರೆ ಜನ.
ಸಿನಿಮಾದಲ್ಲೂ ನಟನೆ
ದೀಪಿಕಾ ದಾಸ್ ಒಂದೆರಡು ಸಿನಿಮಾದಲ್ಲೂ ನಟಿಸಿದ್ದು, ಕೊನೆಯದಾಗಿ ಟ್ರಾವೆಲ್ ಗೆ ಸಂಬಂಧಿಸಿದ ಸಿನಿಮಾವಾದ ಪಾರು-ಪಾರ್ವತಿ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಅಷ್ಟೊಂದು ಯಶಸ್ಸು ಕಾಣಲಿಲ್ಲ.
ನಟನೆಯಿಂದ ಬ್ರೇಕ್
ಟ್ರಾವೆಲ್ ಪ್ರಿಯೆಯಾಗಿರುವ ದೀಪಿಕಾ ದಾಸ್ ಇದೀಗ, ತಮ್ಮ ನಟನೆಗೆ ಬ್ರೇಕ್ ಕೊಟ್ಟು ಮತ್ತೆ ಟ್ರಾವೆಲ್ ಮಾಡೋದಕ್ಕೆ ಹೊರಟಿದ್ದಾರೆ. ಈ ಸಲ ನಟಿ ದುಬೈ, ಲಂಡನ್ ಬಿಟ್ಟು ಪ್ರಕೃತಿಯ ಮಡಿಲನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಆಫ್ರಿಕಾದ ಮಾಸೈ ಮಾರಾದಲ್ಲಿ ದೀಪಿಕಾ
ದೀಪಿಕಾ ದಾಸ್ ಆಫ್ರಿಕಾದ ಕೆನ್ಯಾದಲ್ಲಿರುವ ಅತ್ಯದ್ಭುತವಾದ ಸಫಾರಿ ತಾಣವಾದ ಮಾಸೈ ಮಾರಾಕ್ಕೆ (Masai Mara) ತೆರಳಿದ್ದು, ಅಲ್ಲಿ ಜೀಪ್ ಸಫಾರಿ ಮಾಡುತ್ತಾ, ವಿವಿಧ ಪ್ರಾಣಿಗಳ ಫೋಟೊಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಸಫಾರಿ ಮಾಡಿದ ದೀಪಿಕಾ
ಮಾಸೈ ಮಾರಕ್ಕೆ ಕನ್ನಡದ ಹಲವು ಸೆಲೆಬ್ರಿಟಿಯರು ತೆರಳಿದ್ದರು ಇಶಿತಾ ವರ್ಷ, ಕೃಷಿ ತಾಪಂಡ, ಅನುಪಮಾ ಗೌಡ, ನೇಹಾ ಗೌಡ ಸೇರಿ ಹಲವರು ಸಫಾರಿ ಮಾಡಿದ್ದು, ಇದೀಗ ದೀಪಿಕಾ ದಾಸ್ ಕೂಡ ಸಫಾರಿ ಮಾಡಿದ ಸಂಭ್ರಮದಲ್ಲಿದ್ದಾರೆ.
ಪ್ರಾಣಿಗಳ ಜೊತೆ ಊಟ
ದೀಪಿಕಾ ದಾಸ್ ಲೆಪರ್ಡ್ ಪ್ರಿಂಟ್ ಡ್ರೆಸ್ ಧರಿಸಿದ್ದು, ತಾವು ಸಪಾರಿ ಮಾಡುತ್ತಾ, ಪ್ರಾಣಿಗಳ ಫೋಟೊ ಸೆರೆ ಹಿಡಿದು, ಅಲ್ಲೆ ಕಾಡಿನ ಮಧ್ಯ ಊಟ ಮಾಡುತ್ತಾ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.