ಕಣ್ಣು ಸೆಳೆಯುತ್ತಿದೆ ಮಯೂರಿ ಉಪಾಧ್ಯ ಸ್ಟೈಲಿಷ್ ಲುಕ್, ಸೀಕ್ರೆಟ್ ರಿವೀಲ್!
ತಮ್ಮದೇ ಆದಂತ ಡಿಸೈನ್ ಲ್ಯಾಂಗ್‌ವೇಜ್ ಹೊಂದಿರುವ ಡ್ಯಾನ್ಸರ್ ಮಯೂರಿ ಲುಕ್ ಬಗ್ಗೆ ಡಿಸೈನರ್ ವರ್ಷಿಣಿ ಮಾತನಾಡಿದ್ದಾರೆ.

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿರುವ ಮಯೂರಿ ಉಪಾಧ್ಯ.
ವಾರ ವಾರವೂ ಮಯೂರಿ ಉಪಾಧ್ಯ (Mayuri Upadhya) ಲುಕ್‌ಗಳು ತುಂಬಾನೇ ವೈರಲ್ ಆಗುತ್ತಿದೆ. ತಮ್ಮ ಡಿಫರೆಂಟ್ ಸ್ಟೈಲಿಂಗ್‌ನಿಂದಾಗಿ ಸ್ಟ್ರಾಂಗ್ ಲುಕ್ ಹೊಂದಿದ್ದಾರೆ.
ಪ್ರತಿಷ್ಠಿತ ಫ್ಯಾಷನ್ ಡಿಸೈನರ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರವ ವರ್ಷಿಣಿ (Designer Varshini) ಮಯೂರಿ ಅವರಿಗೆ ಡಿಸೈನ್ ಮಾಡುತ್ತಾರೆ, ವೈದುರ್ಯ ಮೇಕಪ್ ಮಾಡುತ್ತಾರೆ.
ಪ್ರತಿ ಶೋ ಆರಂಭದಲ್ಲೂ ಮಯೂರಿ ಅವರು ಡಿಸೈನರ್‌ಗಳ ಜೊತೆ ಕುಳಿತುಕೊಂಡು ತಮ್ಮ ಕ್ಯಾರೆಕ್ಟರ್ ಬಗ್ಗೆ ಹೇಳುತ್ತಾರೆ ಆನಂತರ ಅವರಿಗೆ ಹೊಂದುವಂತೆ ಡಿಸೈನ್ ಮಾಡಲಾಗುತ್ತದೆ.
ಕನ್ನಡ ಅಕ್ಷರಗಳು ಹೊಂದಿರುವ ಗ್ರೀನ್ ಡಿಸೈನರ್ ಜಾಕೆಟ್ ಲುಕ್ ಸಖತ್ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.
'ಅವರಿಗೆ ಸ್ಟೈಲಿಂಗ್ ಮಾಡುವುದು ದೊಡ್ಡ ಚಾಲೆಂಜ್ ಆಗಿರುತ್ತದೆ. ಅವರಿಗೆ ದೇಶಾದ್ಯಂತ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳುತ್ತೀವಿ. ಒಂದೊಂದು ಥೀಮ್‌ಗೆ ತಕ್ಕಂತೆ ಸ್ಟೈಲ್ ಮಾಡಬೇಕು' ಎಂದು ಡಿಸೈನರ್ ವರ್ಷಿಣಿ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ.
'ಪ್ರತಿವಾರವೂ ಮಯೂರಿ ಅವರೇ ಮೆಸೇಜ್ ಮಾಡಿ ಕಾಲ್ ಮಾಡಿ ಹೀಗೆ ಮಾಡೋಣ ಹಾಗೆ ಮಾಡೋಣ ಎಂದು ಹೇಳುತ್ತಾರೆ. ಅವರ ಜೊತೆ ಕೆಲಸ ಮಾಡುವುದಕ್ಕೆ ತುಂಬಾನೇ ಖುಷಿ ಆಗುತ್ತೆ' ಎಂದಿದ್ದಾರೆ.