- Home
- Entertainment
- TV Talk
- ಖ್ಯಾತ ನಟಿಯ ತುಟಿ ಮತ್ತು ಬಾಯಿ ಬಗ್ಗೆ ಅಸಹ್ಯ ಕಾಮೆಂಟ್ ಮಾಡಿದ ಹಾಸ್ಯ ನಟ ಕಪಿಲ್; ಕಣ್ಣೀರಿಟ್ಟ ನಟಿ
ಖ್ಯಾತ ನಟಿಯ ತುಟಿ ಮತ್ತು ಬಾಯಿ ಬಗ್ಗೆ ಅಸಹ್ಯ ಕಾಮೆಂಟ್ ಮಾಡಿದ ಹಾಸ್ಯ ನಟ ಕಪಿಲ್; ಕಣ್ಣೀರಿಟ್ಟ ನಟಿ
ಡೈಲಾಗ್ ಹೇಳಲು ಗೊತ್ತಾಗದೆ ಕಕ್ಕಾ ಬಿಕ್ಕಿ ಆದ ಸುಮೋನಾ ಚಕ್ರವರ್ತಿಗೆ ಅಸಹ್ಯ ಕಾಮೆಂಟ್ ಮಾಡಿದ ಕಪಿಲ್ ಶರ್ಮಾ.

ಕಪಿಲ್ ಶರ್ಮಾ ರಿಯಾಲಿಟಿ ಶೋನಲ್ಲಿ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುಮೋನಾ ಚಕ್ರವರ್ತಿ ಡೈಲಾಗ್ ಮರೆತಾಗ ಕೆಟ್ಟ ಕಾಮೆಂಟ್ ಹೇಳಿದ್ದಾರೆ. ಇದರ ಬಗ್ಗೆ ರಿಯಾಕ್ಟ್ ಕೂಡ ಮಾಡಿದ್ದಾರೆ.
ಈ ಶೋದ ಶೂಟಿಂಗ್ ವೇಳೆ ಸುಮೋನಾ ಅವರು ತಮ್ಮ ಮಾತನಾಡುವ ಸಾಲುಗಳನ್ನು ಮರೆತಿದ್ದರಂತೆ. ಆ ಸಮಯದಲ್ಲಿ ಕಪಿಲ್ ಶರ್ಮಾ ಅವರು ಸುಮೋನಾ ಅವರ ತುಟಿಗಳ ಮೇಲೆ ತಮಾಷೆ ಮಾಡಿರುವುದಾಗಿ ನಟಿ ಆರೋಪಿಸಿದ್ದಾರೆ.
ಈ ಘಟನೆಯ ಬಳಿಕ ನನಗೆ ತೀವ್ರ ಅವಮಾನವಾಗಿ ಕುಸಿದು ಹೋದೆ. ಘಟನೆಯ ನಂತರ ಅರ್ಚನಾ ಪುರಣ್ ಸಿಂಗ್ ಅವರು ತಮ್ಮ ಕೂರಿಸಿ ಸಮಾಧಾನಪಡಿಸಿದರು. ಆದರೂ ನನ್ನ ನೋವು ಕಡಿಮೆ ಆಗಿರಲಿಲ್ಲ ಎಂದು ಸುಮೋನಾ ಹೇಳಿದ್ದರು.
ಆರಂಭಿಕ ದಿನಗಳು ಸ್ವಲ್ಪ ಸವಾಲಾಗಿತ್ತು. ನನಗೆ ನಟನೆ ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ನಾನು ಹೇಳಬೇಕಿರುವ ವಾಕ್ಯಗಳನ್ನು ಮರೆತಿದ್ದೆ. ಆಗ ಕಪಿಲ್ ಅವರು ನನ್ನ ಬಾಯಿ ಮತ್ತು ತುಟಿಗಳನ್ನು ಗೇಲಿ ಮಾಡಿದರು.
ಅವರು ನನ್ನ ಬಾಯಿಯಲ್ಲಿ ಹಾಸ್ಯವನ್ನು ಸಿಡಿಸಲು ಮೊದಲ ಸಂಚಿಕೆಯಲ್ಲಿ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಿರಲಿಲ್ಲ. ನಂತರ ಅವರು ಅದನ್ನು ಕೈಬಿಟ್ಟರು. ಆದರೆ ನನ್ನ ತುಟಿ ಮತ್ತು ಬಾಯಿಗೆ ಅಪಹಾಸ್ಯ ಮಾಡಿದರು.
ಆದರೆ ನಂತರದ ಸಂಚಿಕೆಗಳಲ್ಲಿ ನಾನು ಹಾಸ್ಯ ಮಾಡುವುದನ್ನು ಕಲಿತೆ. ಆದರೆ ಈ ಅವಮಾನ ಮತ್ತು ಕೆಟ್ಟ ಅನುಭವ ಮಾತ್ರ ಇದುವರೆಗೆ ಮರೆತಿಲ್ಲ ಎಂದಿದ್ದಾರೆ.
'ಯಾರಾದರೂ ನಿಮ್ಮನ್ನು ನೋಡಿ ನಗುತ್ತಿದ್ದರೆ, ಅದು ಅವಮಾನ ಆಗುತ್ತದೆ. ಅದೂ ನನ್ನ ತುಟಿ ಅಥವಾ ಬಾಯಿಯ ಬಗ್ಗೆ ಅಸಹ್ಯ ಕಮೆಂಟ್ ಮಾಡಿದ್ದಾರೆ. ಇದನ್ನು ನಾನು ಜೀವನ ಪೂರ್ತಿ ಮರೆಯುವುದಿಲ್ಲ ಎಂದಿದ್ದಾರೆ ಸುಮೋನಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.