ವಿದೇಶದಲ್ಲಿ ಕ್ಯಾಪ್ಸ್ ಕೆಫೆ ಆರಂಭಿಸಿದ ಕಾಮಿಡಿಯನ್ ಕಪಿಲ್ ಶರ್ಮಾ, ಆದಾಯ ಡಬಲ್
ಕಾಮಿಡಿ ಶೋ ಮೂಲಕ ಕಪಿಲ್ ಶರ್ಮಾ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದೀಗ ಕಪಿಲ್ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ವಿದೇಶದಲ್ಲಿ ಕಪಿಲ್ ಶರ್ಮಾ ಕ್ಯಾಪ್ಸ್ ಕೆಫೆ ಆರಂಭಿಸಿದ್ದಾರೆ.

ಕಾಮಿಡಿ ಶೋ ಮೂಲಕ ಜನಪ್ರಿಯವಾಗಿರುವ ಕಪಿಲ್ ಶರ್ಮಾ ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಕಪಿಲ್ ಶರ್ಮಾ ಹಲವು ಬಾಲಿವುಡ್ ನಟರಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಅತ್ಯಂತ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದೀಗ ಕಪಿಲ್ ಶರ್ಮಾ ಕಾಮಿಡಿಗೆ ಅಥವಾ ಬಾಲಿವುಡ್‌ಗೆ ಮಾತ್ರ ಸೀಮಿತವಾಗುತ್ತಿಲ್ಲ. ಹೊಸ ಉದ್ಯಮ ಆರಂಭಿಸಿದ್ದಾರೆ.
ಕಪಿಲ್ ಶರ್ಮಾ ರೆಸ್ಟೋರೆಂಟ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ವಿದೇಶದಲ್ಲಿ ಕಪಿಲ್ ಶರ್ಮಾ ಕ್ಯಾಪ್ಸ್ ಕೆಫೆ ಆರಂಭಗೊಂಡಿದೆ. ಕಳೆದ ಕೆಲ ದಿನಗಳಿಂದ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಕ್ಯಾಪ್ಸ್ ಕೆಫೆ ಇದೀಗ ಗ್ರಾಹಕರಿಂದ ತುಂಬಿ ತುಳುಕುತ್ತಿದೆ. ಕಪಿಲ್ ಶರ್ಮಾ ಕ್ಯಾಪ್ಸ್ ಕಫೆ ಆರಂಭದಲ್ಲೇ ಭರ್ಜರಿ ಯಶಸ್ಸು ಕಂಡಿದೆ. ಹಲವು ಖಾದ್ಯಗಳು, ವಿಶೇಷವಾಗಿ ಪಂಜಾಬಿ ಖಾದ್ಯಗಳು ಈ ಕೆಫೆಯಲ್ಲಿ ಲಭ್ಯವಿದೆ.
ಕೆನಡಾ, ಸರ್ರೆ, ಬ್ರಿಟನ್, ಕೊಲಂಬಿಯಾದಲ್ಲಿ ಕಪಿಲ್ ಶರ್ಮಾ ಕ್ಯಾಪ್ಸ್ ಕೆಫೆ ಆರಂಭಗೊಂಡಿದೆ. ಕಪಿಲ್ ಶರ್ಮಾಹಾಗೂ ಪತ್ನಿ ಗಿನ್ನಿ ಚಾತ್ರಾತ್ ಈ ಕೆಫೆ ಆರಂಭಿಸಿದ್ದಾರೆ. ವಿಶೇಷವಾಗಿ ಕಪಿಲ್ ಶರ್ಮಾ ಪತ್ನಿ ಗಿನ್ನಿ ವಿಶೇಷ ಆಸಕ್ತಿ ವಹಿಸಿ ರೆಸ್ಟೋರೆಂಟ್ ಸೇರಿದಂತೆ ಇತರ ಎಲ್ಲಾ ವಿನ್ಯಾಸದ ಮುತುವರ್ಜಿ ವಹಿಸಿದ್ದಾರೆ.
ಕಾಫಿ, ಸ್ವೀಟ್ಸ್, ಕೇಕ್, ಸೇರಿದಂತೆ ಹಲವು ವಿಶೇಷ ಖಾದ್ಯಗಳು ಈ ಕೆಫೆಯಲ್ಲಿದೆ. ಕೆಫೆ ಆರಂಭಗೊಂಡ ಕ್ಷಣದಿಂದಲೂ ಭಾರಿ ಗ್ರಾಹಕರನ್ನು ಸೆಳೆಯುತ್ತಿದೆ. ಈ ಕುರಿತು ಕ್ಯಾಪ್ಸ್ ಕೆಫೆ ಸಂತಸ ಹಂಚಿಕೊಂಡಿದೆ. ಹಲವು ದಿನಗಳ ಕಾಯುವಿಗೆ ಸಾರ್ಥಕವಾಗಿದೆ. ಎಲ್ಲಾ ಗ್ರಾಹಕರು ಶಾಂತವಾಗಿ ಕುಳಿತು ಆಹಾರ ಸವಿಯಿರಿ, ಆಹಾರ ಆನಂದಿಸುತ್ತಾ ಸವಿಯಬೇಕು ಎಂದು ಕ್ಯಾಪ್ಸ್ ಕೆಫೆ ಹೇಳಿದೆ. ಇದೇ ವೇಳೆ ಈ ಕೆಫೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಕಪಿಲ್ ಶರ್ಮಾ ಸದ್ಯ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ 3ನೇ ಆವೃತ್ತಿ ಲಾಂಚ್ ಮಾಡಲು ಮುಂದಾಗಿದ್ದಾರೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಶೋ ಭರ್ಜರಿ ಕಮ್‌ಬ್ಯಾಕ್‌ಗೆ ಸಿದ್ಧತೆ ನಡೆಯುತ್ತಿದೆ. ಕಾಮಿಡಿ ಶೋ ಮೂಲಕ ಭಾರಿ ಜನಪ್ರಿಯತೆ ಪಡೆದಿರುವ ಕಪಿಲ್ ಈಗಾಗಲೇ ಬಾಲಿವುಡ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೆರೆಡು ಸಿನಿಮಾದಲ್ಲಿ ಕಪಿಲ್ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಕಿಸ್ ಕಿಸ್ಕೋ ಪ್ಯಾರ್ ಕರೂನ್, ದಾದಿ ಕಿ ಶಾದಿ ಎರಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.