ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ಯಾಕುಮಾರಿ ಧಾರಾವಾಹಿ ನಟಿ ರಶ್ಮಿತಾ!
ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ಯಾಕುಮಾರಿ ಧಾರಾವಾಹಿ ಯಾಮಿನಿ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್...
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ರಶ್ಮಿತಾ ಜೆ ಶೆಟ್ಟಿ ಯಾಮಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಜ್ಜಿ ಮತ್ತು ಯುವತಿ ಶೇಡ್ ಹೊಂದಿರುವ ಯಾಮಿನಿ ಪಾತ್ರ ಅದ್ಭುತವಾಗಿ ಮೂಡಿ ಬರುತ್ತಿದ್ದು ರಶ್ಮಿತಾ ನಟನೆ ಸೂಪರ್ ಎನ್ನುತ್ತಾರೆ ವೀಕ್ಷಕರು.
ರಶ್ಮಿತಾ ಜೆ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪತಿ ಹೆಸರು ಮದುವೆ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕನ್ಯಾಕುಮಾರಿ ತಂಡ ಮದುವೆ ಫೋಟೋ ಹಂಚಿಕೊಂಡಿದ್ದಾರೆ.
ಕೆಂಪು ಬಣ್ಣದ ಸೀರೆಯಲ್ಲಿ ರಶ್ಮಿಕಾ ಕಾಣಿಸಿಕೊಂಡರೆ ವೈಟ್ ಆಂಡ್ ರೆಡ್ ಸೂಟ್‌ನಲ್ಲಿ ಅವರ ಪತಿ ಮಿಂಚಿದ್ದಾರೆ. ಅದ್ಧೂರಿ ಮದುವೆಯಲ್ಲಿ ಸರಳವಾಗಿ ಕಾಣಿಸಿಕೊಂಡಿದ್ದಾರೆ.
ಮುಹೂರ್ತಕ್ಕೆ ರಶ್ಮಿಕಾ ಕ್ರೀಮ್ ಆಂಡ್ ಪಿಂಕ್ ಕಾಂಬಿನೇಷನ್ ಸೀರೆಯಲ್ಲಿ ಮಿಂಚಿದ್ದಾರೆ. ಈ ಲುಕ್‌ಗೆ ಮ್ಯಾಚ್ ಆಗುವ ರೀತಿಯಲ್ಲಿ ಕೂದಲಿಗೆ ಹೂಗಳಿಂದ ಅಲಂಕಾರ ಮಾಡಿಕೊಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಶ್ಮಿತಾ ಜೆ ಶೆಟ್ಟಿ 27 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ. 600 ಫೋಟೋಗಳನ್ನು ಹಂಚಿಕೊಂಡಿದ್ದಾರೆ.