ಕ್ರಿಮಿನಲ್ ಅವತಾರ ತೋರಿಸುವ ಯದುವೀರ್ ಫಾರಿನ್ ಚಿಕ್ಕಮ್ಮ ನಿಜಕ್ಕೂ ಯಾರು ಗೊತ್ತಾ?
ಹೂ ಮಳೆ ಧಾರಾವಾಹಿ ಮೂಲಕ ವಿಲನ್ ಪಾತ್ರಧಾರಿಗಳು ವೀಕ್ಷಕರಿಗೆ ಅಚ್ಚು ಮೆಚ್ಚಾಗುತ್ತಿದ್ದಾರೆ. ಕಾರ್ಪೋರೇಟರ್ ಕಾವೇರಿಗಿಂತ ಯದುವೀರ್ ಚಿಕ್ಕಮ್ಮನಾಗಿ ಬಂದಿರುವ ಭವಾನಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂ ಮೆಳೆ ಧಾರಾವಾಹಿಯಲ್ಲಿ ಯದುವೀರ್ ಚಿಕ್ಕಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಭವಾನೆ.
ಭವಾನಿ ಮೂಲತಃ ರಂಗಭೂಮಿ ಕಲಾವಿದೆ. ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಸೇತುರಾಮ್‌ರವರ ಅನಾವರಣ ಧಾರಾವಾಹಿಯಲ್ಲಿ ವೀಣಾ ಪಾತ್ರ ಜನಪ್ರಿಯವಾಗಿತ್ತು.
2017ರಲ್ಲಿ ಉರ್ವಿ ಚಿತ್ರಕ್ಕೆ ಬೆಸ್ಟ್ ಸಪೋರ್ಟಿಂಗ್ ನಟಿ ಫಿಲ್ಮಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಹೂ ಮಳೆ ಧಾರಾವಾಹಿಯಲ್ಲಿ ಸಖತ್ ಸ್ಟೈಲಿಶ್ ಆಗಿರುವ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯದುವೀರ್ ಚಿಕ್ಕಮ್ಮ ಸಂಸಾರದ ವಿಚಾರದದಲ್ಲಿ ತಲೆ ಓಡಿಸುವ ಮಾಸ್ಟರ್ ಪ್ಲಾನ್ ತುಂಬಾನೇ ಹಿಟ್ ಆಗಿದೆ.
ಮುಂದಿನ ಭಾಗದಲ್ಲಿ ಏನಾಗುತ್ತದೆ ಎನ್ನುವುದಕ್ಕಿಂತ ಲಹರಿಗೆ ಚಿಕ್ಕಮ್ಮ ಕೊಡುವ ಸವಾಲ್ ನೋಡಲು ಮಜಾವಾಗಿರುತ್ತದೆ.