ಮದುವೆ ಮುಗಿಸಿಕೊಂಡು ವೋಟ್ ಹಾಕಿದ 'ಗೀತಾ' ಸೀರಿಯಲ್ ನಟಿ; ಫೋಟೋ ವೈರಲ್
ಮತದಾನ ಮಾಡಿದ ಗೀತಾ. ಮದುಮಗಳಂತೆ ಅಲಂಕಾರ ಮಾಡಿಕೊಂಡಿರುವುದನ್ನು ನೋಡಿ ಎಲ್ಲರೂ ಶಾಕ್....

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿರುವ ಭವ್ಯಾ ಗೌಡ.
ಇತ್ತೀಚಿಗೆ ಭವ್ಯಾ ಗೌಡ (bhavya gowda) ಆಪ್ತ ಸ್ನೇಹಿತೆ ಮದುವೆ ಬಗ್ಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಲೇ ಇದ್ದರು.
ಸ್ನೇಹಿತೆಯ ಮದುವೆ ಮುಗಿಸಿಕೊಂಡು ವೋಟ್ ಹಾಕಿರುವ ಫೋಟೋ ಶೇರ್ ಮಾಡಿ ' ನನ್ನ ಸ್ಟೈಲ್‌ನಲ್ಲಿ ನನ್ನ ಡ್ಯೂಟಿ ಮುಗಿಸಿರುವೆ' ಎಂದು ಬರೆದುಕೊಂಡಿದ್ದಾರೆ.
ಇದ್ದಕ್ಕಿದ್ದಂತೆ ಗೀತಾ ಫೋಟೋ ನೋಡಿ ಅನೇಕರು ಗಾಬರಿ ಆಗಿದ್ದಾರೆ. ಇದೇನಪ್ಪ ಯಾವಾಗ ಮದುವೆ ಮಾಡಿಕೊಂಡರು ಎಂದು...ಆದರೆ ಇದು ಸ್ನೇಹಿತೆಯ ಮದುವೆ ಲುಕ್.
ಈಗಾಗಲೆ ಸಾಕಷ್ಟು ಬಾರಿ ಗೀತಾ ಮದುವೆ ವಿಚಾರ ಚರ್ಚೆಯಾಗಿ ಏಕೆಂದರೆ ಬಿಡುವಿನ ಸಮಯದಲ್ಲಿ ಮೇಕಪ್ ಫೋಟೋ ಶೂಟ್ ಮಾಡಿಸುತ್ತಾರೆ.
'ನಿನ್ನ ಕಂಗಳು ನೂರು ಕವಿತೆ ಬರೆಸಿವೆ ...ನಿನ್ನ ನಗುವದು ಮನದ ನೋವ ಮರೆಸಿವೆ ...ನಿನ್ನ ಚೆಲುವದು ಕಲ್ಲು ಮನಸ್ಸನ್ನು ಕರಗಿಸಿವೆ ...ನೀ ನೆಡದಾಡುವ ದಾರಿಯಲ್ಲಿ ನೂರು ಪ್ರೇಮದೀಪ ಬೆಳಗಿಸಿವೆ ..ಪ್ರೇಮಿಗಳ ಮನಸಿನಲ್ಲಿ ಕಹಳೆ ಮೊಳಗಿಸಿವೆ' ಎಂದು ಕೆ ಗೌಡ ಹೆಸರಿನ ಫಾಲೋವರ್ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.