ನನಗೇನು ಬೇಕೋ ಹಾಕೋತ್ತೀನಿ; ಬಿಕಿನಿ ಬಗ್ಗೆ ಕಾಮೆಂಟ್ ಮಾಡಿದವರಿಗೆ ತಿರುಗೇಟು ಕೊಟ್ಟ ಸಂಗೀತಾ!
ಸತಿ ಪಾತ್ರ ಮಾಡೋಕು ಮುನ್ನ ನಾನು ಸೂಪರ್ ಮಾಡಲ್. ಬಿಕಿನಿ ಬಗ್ಗೆ ಸಂಗೀತಾ ಶೃಂಗೇರಿ ಬೋಲ್ಡ್ ಮಾತು....
ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ಸಂಗೀತಾ ಶೃಂಗೇರಿ ಒಮ್ಮೆ ಬಿಕಿನಿ ಧರಿಸಿ ಫೋಟೋಶೂಟ್ ಮಾಡಿಸಿದ್ದರು. ಆಗ ನೀಡಿದ ಬೋಲ್ಡ್ ಹೇಳಿಕೆ ವೈರಲ್ ಆಗುತ್ತಿದೆ.
'ನನಗೆ ಸುಮಾರು ಡಿಸೈನರ್‌ಗಳು ಪರಿಚಯ ಇದ್ದಾರೆ ಬಾಲಿವುಡ್‌ನಿಂದ ಕೂಡ. ಅಲ್ಲಿನ ಡಿಸೈನರ್ಸ್ ನನ್ನನ್ನು ಭೇಟಿ ಮಾಡಿದಾಗ ಯಾಕೆ ಸೌತ್ ಇಂಡಿಯನ್ಸ್ ಇನ್ನೂ ಹಳೆ ಸ್ಟೈಲ್‌ನ ಫಾಲೋ ಮಾಡುತ್ತಿದ್ದಾರೆ ಅಂತ ಕೇಳುತ್ತಾರೆ.
ನಾವು ಹಳ್ಳೆ ಸ್ಟೈಲ್‌ನಲ್ಲಿ ಇದ್ದೀವಾ ಅಂತ ಯೋಚನೆ ಮಾಡಲು ಶುರು ಮಾಡಿದೆ. ಬಾಲ್ಯದಿಂದ ನನಗೆ ಒಂದು ಡ್ರೀಮ್ ಇತ್ತು ಎಲ್ಲಾ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂದು ಆದರೆ ಸತಿ ಪಾತ್ರ ಮಾಡುವಾಗ ಬೋಲ್ಡ್ ಫೋಟೋ ಅಪ್ಲೋಡ್ ಮಾಡಿದರೆ ನನ್ನ ಪ್ರೊಡಕ್ಷನ್ ತಂಡ ಅದನ್ನು ಡಿಲೀಟ್ ಮಾಡುವುದಕ್ಕೆ ಹೇಳಿತ್ತು.
ನಟನೆಗೆ ಕಾಲಿಡುವ ಮುನ್ನವೇ ಮಾಡಲ್ ಆಗಿದ್ದೆ. ನನಗೆ ಮೊದಲು ಪ್ರಶಸ್ತಿ ಸಿಕ್ಕಿದ್ದೆ ವರ್ಲ್ಡ್ ಸೂಪರ್ ಮಾಡಲ್ ಟೀನ್ ಅಂತ. ಇಂಡಸ್ಟ್ರಿಗೆ ಕಾಲಿಡದೇ ಇದ್ದಿದ್ದರೂ ನಾನು ಮಾಡಲ್ ಆಗಿರುತ್ತಿದ್ದೆ.
ಬಿಕಿನಿ ಹಾಕುವುದು ಗ್ಲಾಮರ್ ತೋರಿಸುವುದಕ್ಕೆ ಅಲ್ಲ ನಾವು ಎಷ್ಟು ಫಿಟ್ ಆಗಿದ್ದೀವಿ ಅಂತ. ನಮ್ಮ ಆಹಾರ ಶೈಲಿ ಮತ್ತು ಮಾಡುವ ವರ್ಕೌಟ್‌ನಿಂದ ನಾವು ಫಿಟ್ ಆಗಿದ್ದೀವಿ ಅದಿಕ್ಕೆ ಬಿಕಿನಿ ಹಾಕ್ತೀನಿ.
ಫಿಟ್ನೆಸ್ ಕಾಳಜಿ ವಹಿಸಿದರೆ ಯಾರಿಗೂ ಆರೋಗ್ಯದಲ್ಲಿ ಸಮಸ್ಯೆ ಬರುವುದಿಲ್ಲ. ಹಲವು ವರ್ಷಗಳ ಹಿಂದೆನೇ ನಾನು ಬಿಕಿನಿ ಹಾಕಿದ್ದೀನಿ ಆದರೆ ಯಾರಿಗೂ ಯಾಕೆ ಗೊತ್ತಿರಲಿಲ್ಲ ಅಂದ್ರೆ ಆಗ ನಾನು ಫೇಮಸ್ ಇರಲಿಲ್ಲ.
ಈಗ ಚಾರ್ಲಿ ಬೆಡಗಿ ಆದ್ಮೇಲೆ ಫೇಮಸ್ ಆದೆ. ಹರ ಹರ ಮಹಾದೇವ್ ಸಮಯದಲ್ಲಿ ನಾನು ಸೀರೆ ಹಾಕಿಕೊಂಡು 60-70 ವಯಸ್ಸಿನವರ ರೀತಿ ಇರುತ್ತಿದ್ದೆ. ನನಗೆ ವಯಸ್ಸಿದೆ ಯಾಕೆ ನಾನು ಈ ರೀತಿ ಡ್ರೆಸ್ ಹಾಕಿಕೊಳ್ಳುತ್ತಿರುವೆ ಎಂದು ಯೋಚನೆ ಮಾಡಿ ವರ್ಕೌಟ್ ಮಾಡಲು ಶುರು ಮಾಡಿ ನನಗೆ ಬೇಕಿರುವ ರೀತಿಯಲ್ಲಿ ಡ್ರೆಸ್ ಮಾಡಿಕೊಳ್ಳುತ್ತಿರುವೆ.
ಯಾರೇ ಕಷ್ಟ ಪಟ್ಟರೂ ಈ ರೀತಿ ಡ್ರೆಸ್ ಆಗಬಹುದು ಎಂದು ತೋರಿಸಿಕೊಡುತ್ತಿರುವೆ. ಪ್ರತಿಯೊಬ್ಬರಿಗೂ ಒಂದು ಶೈಲಿಯ ಬಟ್ಟೆ ಹಾಕಬೇಕು ಅನಿಸುತ್ತದೆ ಆದರೆ ಅವರಿಗೆ ಅವಕಾಶ ಮತ್ತು ದೇಹ ಪೋರ್ಟ್ ಮಾಡುವುದಿಲ್ಲ ಅವರಿಗೆ ನಾನು ಸ್ಪೂರ್ತಿ ನೀಡುತ್ತಿರುವೆ.