MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Anubandha Awards : ಕಾರ್ತಿಕ್ ಮಹೇಶ್, ವೈಷ್ಣವ್, ಕರ್ಣ… ಮೊದಲ ದಿನ ಇನ್ಯಾರ್ಯಾರಿಗೆ ಒಲಿದು ಬಂತು ಪ್ರಶಸ್ತಿ?

Anubandha Awards : ಕಾರ್ತಿಕ್ ಮಹೇಶ್, ವೈಷ್ಣವ್, ಕರ್ಣ… ಮೊದಲ ದಿನ ಇನ್ಯಾರ್ಯಾರಿಗೆ ಒಲಿದು ಬಂತು ಪ್ರಶಸ್ತಿ?

ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಈಗಾಗಲೇ ಆರಂಭವಾಗಿದ್ದು, ಮೂರು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನ ಕಾರ್ತಿಕ್ ಮಹೇಶ್, ಕರ್ಣ, ತನ್ವಿ ರಾವ್ ಸೇರಿ ಹಲವರಿಗೆ ಅವಾರ್ಡ್ಸ್ ಬಂದಿದೆ. ಯಾರ್ಯಾರಿಗೆ ಯಾವೆಲ್ಲಾ ಅವಾರ್ಡ್ಸ್ ಬಂದಿದೆ ಅನ್ನೋದನ್ನ ನೋಡೋಣ,  

2 Min read
Author : Pavna Das
| Updated : Sep 21 2024, 12:56 PM IST
Share this Photo Gallery
  • FB
  • TW
  • Linkdin
  • Whatsapp
112

ಭಾಗ್ಯ ಮತ್ತು ತಾಂಡವ್ ನ ಸಂಸಾರದ ಕಥೆಯಾಗಿರುವ ಭಾಗ್ಯಲಕ್ಷ್ಮೀ ಧಾರಾವಾಹಿಗೆ )Bhagya Lakshmi serial) ಬೆಸ್ಟ್ ರೇಟೆಡ್ ಫಿಕ್ಷನ್ ಅವಾರ್ಡ್ಸ್ ಬಂದಿದೆ.
 

212

ಈ ಬಾರಿಯ ಕಲರ್ಸ್ ಅನುಬಂಧದಲ್ಲಿ ಮನೆ ಮೆಚ್ಚಿದ ಅಳಿಯ ಅವಾರ್ಡ್ - ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವೈಷ್ಣವ್ ಗೆ ದೊರೆತಿದೆ. ಇಷ್ಟವಿಲ್ಲದೇ ಮದುವೆಯಾದರೂ ವೈಷ್ಣವ್ ಉತ್ತಮ ಗಂಡ, ಮತ್ತು ಅಳಿಯನಾಗಿದ್ದ. 
 

312

ಜನ ಮೆಚ್ಚಿದ ಎಂಟರ್‌ಟೈನರ್ ಪುರುಷರ ವಿಭಾಗದ ಪ್ರಶಸ್ತಿಯನ್ನು ಬಿಗ್ ಬಾಸ್ ಕನ್ನಡ 10ರ ವಿನ್ನರ್ ಆಗಿರುವ ಕಾರ್ತಿಕ್ ಮಹೇಶ್ (Karthik Mahesh) ಅವರು ಪಡೆದಿದ್ದಾರೆ. 
 

412

ಈ ಸಾಲಿನ ಮನೆ ಮೆಚ್ಚಿದ ಸೊಸೆ, ಭಾಗ್ಯಲಕ್ಷ್ಮೀ (Bhagyalakshmi) ಧಾರಾವಾಹಿಯ ಭಾಗ್ಯಾ ಪಡೆದಿದ್ದಾರೆ. ಭಾಗ್ಯ ಅತ್ತೆಗೆ ತಕ್ಕಂತ ಸೊಸೆಯಾಗಿದ್ದು, ಅತ್ತೆ ಮೆಚ್ಚಿನ ಸೊಸೆಯೂ ಹೌದು, ಈಗ ಮನೆ ಮೆಚ್ಚಿದ ಸೊಸೆ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. 
 

512

ಫಿಕ್ಷನ್ ವಿಭಾಗದಲ್ಲಿ ಜನ ಮೆಚ್ಚಿದ ಹೊಸ ಪರಿಚಯ - ಕರಿಮಣಿ ಧಾರಾವಾಹಿಯ ಕರ್ಣ ಪಾಲಾಗಿದೆ. ಕರಿಮಣಿ ಮೂಲಕ ಈಗಷ್ಟೇ ನಟನೆಗೆ ಎಂಟ್ರಿ ಕೊಟ್ಟರು, ತಮ್ಮ ನಟನೆ, ಸ್ಟೈಲ್ ಮೂಲಕ ಇವರು ಮನೆಮಾತಾಗಿದ್ದಾರೆ. .
 

612

ನಿನಗಾಗಿಯ (Ninagaagi seral) ಜೀವ ಅವರಿಗೆ ಮನೆ ಮೆಚ್ಚಿದ ಅಪ್ಪ ಪ್ರಶಸ್ತಿ ಲಭಿಸಿದೆ. ತಾಯಿಯಿಲ್ಲದ ಕೃಷ್ಣಾಳನ್ನು ಪ್ರೀತಿಯಿಂದ ಸಾಕಿ ಸಲಹುವ ಮುದ್ದಿನ ಬೇಬಿಯಾಗಿ ಜೀವಾ ಅಂದ್ರೆ ರಿತ್ವಿಕ್ ಮಠದ್ ಅದ್ಭುತವಾಗಿ ನಟಿಸಿದ್ದಾರೆ. 
 

712

ಅನುಬಂಧ ಅವಾರ್ಡ್ಸ್ (Anubandha) ಮನೆ ಮೆಚ್ಚಿದ ಸಹೋದರ ಪ್ರಶಸ್ತಿಯನ್ನು ಕರಿಮಣಿ ಧಾರವಾಹಿಯ ಭರತ್ ಪಡೆದುಕೊಂಡಿದ್ದಾರೆ. ಅಣ್ಣ ಕರ್ಣನ ಎಲ್ಲಾ ಕೆಲಸದಲ್ಲೂ ನೆರವಾಗುತ್ತಾ, ಜೊತೆಯಾಗಿ ನಿಲ್ಲುವ ಕರ್ಣನ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ. 
 

812

ಇನ್ನು ಜನಮೆಚ್ಚಿದ ಡಿಜಿಟಲ್ ಜೋಡಿ ಪ್ರಶಸ್ತಿಯನ್ನು ರಾಮಾಚಾರಿಯ ಚಾರು-ರಾಮಾಚಾರಿ ಜೋಡಿ ಪಡೆದುಕೊಂಡಿದ್ದಾರೆ. ಇವರಿಬ್ಬರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. 
 

912

2024ನೇ ಸಾಲಿನ ಜನ ಮೆಚ್ಚಿದ ಮಂಥರೆ ಪಟ್ಟ ಎಲ್ಲರೂ ಊಹಿಸಿದಂತೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೋಸ್ಟ್ ಡಿಸರ್ವಿಂಗ್ ನಟಿಯಾಗಿರುವ ಕಾವೇರಿ ಪಡೆದಿದ್ದಾರೆ.
 

1012

ಜನಮೆಚ್ಚಿದ ವಿಧೂಷಕ ಪ್ರಶಸ್ತಿಯನ್ನು ನಿನಗಾಗಿ ಧಾರವಾಹಿಯ ಬಾಲ ಆಲಿಯಾಸ್ ಬಾಲ ಮಾಮ ಪಡೆದಿದ್ದಾರೆ.  ತನ್ನ ಪಂಚಿಂಗ್ ಡೈಲಾಗ್ ಮೂಲಕ ನಟ ವೀಕ್ಷಕರ ಮುಖದಲ್ಲಿ ನಗು ತರಿಸಿದ್ದಾರೆ. 
 

1112

ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೀರ್ತಿ ಆಲಿಯಾಸ್ ತನ್ವಿ ರಾವ್ (Tanvi Rao) ಜನಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿ ಪಡೆದಿದ್ದಾರೆ, ಕಳೆದ ಬಾರಿಯೂ ಇವರು ಸ್ಟೈಲ್ ಐಕಾನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 
 

1212

ಇನ್ನು ಮನೆ ಮೆಚ್ಚಿದ ಅಮ್ಮ ಪ್ರಶಸ್ತಿ ಇಬ್ಬರ ಪಾಲಾಗಿದ್ದು, ಶ್ರೀಗೌರಿ ಧಾರಾವಾಹಿಯ ಮಂಗಳಮ್ಮ ಹಾಗೂ ರಾಮಾಚಾರಿಯ ಅಮ್ಮ ಜಾನಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಪ್ರಶಸ್ತಿಗಳು

Latest Videos
Recommended Stories
Recommended image1
ಇರಾನ್-ಇಸ್ರೇಲ್ ಯುದ್ಧ: ಅಬಿಧಾಬಿ ಏರ್ಪೋರ್ಟ್‌ನಲ್ಲಿ ಸಿಲುಕಿ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಪರದಾಟ!
Recommended image2
Nanda Gokula Serial: ತನ್ನ ಬೇಳೆ ಬೇಯಿಸಿಕೊಳ್ಳಲು, ಬಾಕಿಯವ್ರ ಖುಷಿಗೆ ಕೊಳ್ಳಿ ಇಟ್ಟ ಪ್ರಿಯಾ!
Recommended image3
ಸತೀಶ್‌ ಮೂತ್ರ ವಿಸರ್ಜನೆ ಮಾಡುವ ವಿಡಿಯೋಕ್ಕೆ ಕಿಚ್ಚ ಸುದೀಪ್‌ ಹಾಡು ಬಳಕೆ; ದೂರು ದಾಖಲಿಸಿದ ರಜತ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved