ನವರಾತ್ರಿ ಹಬ್ಬಕ್ಕೆ ಬ್ರಹ್ಮಚಾರಿಣಿಯಾಗಿ ಅವತಾರವೆತ್ತಿದ ರಾಮಚಾರಿಯ ಚಾರು!
ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಮಾಚಾರಿ ಸೀರಿಯಲ್ ನಟಿ ಮೌನ ಗುಡ್ಡೆಮನೆ ಬ್ರಹ್ಮಚಾರಿಣಿಯಾಗಿ ಮಿಂಚಿದ್ದು, ಈ ಅದ್ಭುತ ಫೋಟೋ ಶೂಟನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಮೆಚ್ಚಿದ್ದಾರೆ.

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನರು ಮೆಚ್ಚಿದ್ದ ಧಾರಾವಾಹಿ ರಾಮಾಚಾರಿಯ ಚಾರು ಖ್ಯಾತಿ ಮೌನ ಗುಡ್ಡೆಮನೆ ನವರಾತ್ರಿ ಹಿನ್ನೆಲೆಯಲ್ಲಿ ದೇವಿಯಾಗಿ ಅವತಾರವೆತ್ತಿದ್ದಾರೆ. ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನವರಾತ್ರಿಯ ಎರಡನೆ ದಿನದಂದು ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಮೌನ (Mouna Guddemane) ಬ್ರಹ್ಮಚಾರಿಣಿಯಂತೆ ಬಿಳಿ ಬಣ್ಣದ ಸೀರೆಯುಟ್ಟು, ಕೆಂಪು ರವಿಕೆ, ಕಾಸಗಲದ ಕೆಂಪು ಬೊಟ್ಟು ತೊಟ್ಟು ದೇವಿಯೇ ಅವತರಿಸಿ ಬಂದಂತೆ ಕಾಣಿಸಿಕೊಂಡಿದ್ದಾರೆ.
ಬಿಳಿ ಬಣ್ಣದ ಸೀರೆಗೆ ಮ್ಯಾಚ್ ಆಗುವಂತೆ ಕೆಂಪು ಬೊಟ್ಟು, ಕೆಂಪು ಲಿಪ್ ಸ್ಟಿಕ್, ಕೆಂಪು ಗಾಜಿನ ಬಳೆಗಳು, ಕೈಯಲ್ಲಿ ದೊಡ್ಡದಾದ ಉಂಗುರ, ಕಿವಿಯಲ್ಲಿ ಮುತ್ತಿನ ಜುಮುಕಿ, ಮೂಗಲ್ಲಿ ಮುತ್ತಿನ ಮೂಗುತಿ ಹಾಕಿ ಕೂದಲು ಲೂಸ್ ಆಗಿ ಬಿಟ್ಟಿದ್ದು, ಸುರಸುಂದರಿಯಂತೆ ಕಾಣಿಸುತ್ತಿದ್ದಾರೆ.
ತಮ್ಮ ನೆಚ್ಚಿನ ನಟಿಯನ್ನು ದೇವಿ ಅವತಾರದಲ್ಲಿ ಕಂಡು ಅಭಿಮಾನಿಗಳಂತೂ ತುಂಬಾ ಖುಷಿಯಾಗಿದ್ದಾರೆ. ಸಾಕ್ಷಾತ್ ದೇವಿಯನ್ನೇ ಕಂಡಂತಾಗಿದೆ ಎಂದು ಕೆಲವರು ಹೇಳಿದರೆ, ಯಾವುದೇ ಪಾತ್ರಕ್ಕೂ ಸೈ ಎನಿಸುವಂತ ಸುಂದರಿ ಚಾರು ಎಂದು ಮತ್ತೆ ಕೆಲವರು ಹೇಳಿದ್ದಾರೆ.
ಬ್ರಹ್ಮಚಾರಿಗೆ ಸಂಬಂಧಿಸಿದಂತೆ ಮೌನ, ಎರಡು ವಿಡಿಯೋ ಮತ್ತು ಫೋಟೋಗಳನ್ನು ಸಹ ಶೇರ್ ಮಾಡಿದ್ದಾರೆ. ವಿಭಿನ್ನ ಉಡುಗೆಯಲ್ಲಿ, ಪ್ರಶಾಂತ್ ಮೇಕ್ ಓವರ್ ಲುಕ್ ನಲ್ಲಿ, ಅರುಣ್ ಕುಮಾರ್ ಪೋಟ್ರೇಟ್ ಫೋಟೋಗ್ರಾಫಿಯಲ್ಲಿ ಮೌನ ಅದ್ಭುತವಾಗಿ ಕಾಣಿಸುತ್ತಿದ್ದಾರೆ.
ಇನ್ನು ಸೀರಿಯಲ್ ವಿಷಯಕ್ಕೆ ಬಂದ್ರೆ ಚಾರು ತನ್ನ ಮಾವನ ಷಷ್ಟಿಪೂರ್ತಿ ಆಚರಣೆ ಮಾಡಲು ಸಿಕ್ಕಾಪಟ್ಟೆ ಸಂಭ್ರಮದಲ್ಲಿದ್ದಾರೆ, ಮನೆಯವರೆಲ್ಲಾ ಅದು ಸಾಧ್ಯವೇ ಆಗಲ್ಲ ಎಂದು ಹೇಳಿದ್ರು, ನಾನು ಮಾಡಿಯೇ ಮಾಡ್ತೀನಿ ಎಂದು ಗುರುಗಳ ಮುಖಾಂತರ ಮಾವನನ್ನು ಒಪ್ಪಿಸುವ ಕೆಲಸ ಮಾಡಿದ್ದಾರೆ.
ಚಾರು ಯೋಜನೆಗೆ ಕಲ್ಲು ಹಾಕಲು ತಯಾರಿ ನಡೆಸಿರುವ ವೈಶಾಖ, ಈ ಬಾರಿ ಸಹ ಷಷ್ಠಿಪೂರ್ತಿಯನ್ನು ನಿಲ್ಲಿಸುವ ಸಲುವಾಗಿ ಚಾರು ತಾಯಿ ಕಿವಿ ಊದಿದ್ದಾಳೆ. ಚಾರು ತಾಯಿ ಈ ಕಾರ್ಯಕ್ರಮ ನಡೆಯದಂತೆ ಮಾಡ್ತಾಳಾ? ಅಥವಾ ಚಾರು ಸಂಭ್ರಮದಿಂದ ಹಬ್ಬ ಆಚರಿಸುತ್ತಾಳೋ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.