- Home
- Entertainment
- TV Talk
- ‘ಮರ್ಯಾದೆ ರಾಮಣ್ಣ’ನಾಗಿ ಕಿರುತೆರೆಗೆ ಮತ್ತೆ ಮಾಸ್ ಎಂಟ್ರಿ ಕೊಡ್ತಿದ್ದಾರೆ ಈ ಸ್ಯಾಂಡಲ್’ವುಡ್ ನಟ
‘ಮರ್ಯಾದೆ ರಾಮಣ್ಣ’ನಾಗಿ ಕಿರುತೆರೆಗೆ ಮತ್ತೆ ಮಾಸ್ ಎಂಟ್ರಿ ಕೊಡ್ತಿದ್ದಾರೆ ಈ ಸ್ಯಾಂಡಲ್’ವುಡ್ ನಟ
Maryade Ramanna: ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ಜನಪ್ರಿಯ ನಟರೊಬ್ಬರು ಇದೀಗ ಆರು ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಮಾಸ್ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಮರ್ಯಾದೆ ರಾಮಣ್ಣ’ ಧಾರಾವಾಹಿ ಮೂಲಕ ಎಂಟ್ರಿ ಕೊಡಲಿದ್ದಾರೆ.

ಮರ್ಯಾದೆ ರಾಮಣ್ಣ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಹೊಚ್ಚ ಹೊಸ ಧಾರಾವಾಹಿ ‘ಮರ್ಯಾದೆ ರಾಮಣ್ಣ’ ಶುರುವಾಗಲಿದೆ. ಈಗಾಗಲೇ ಪ್ರೊಮೋ ರಿಲೀಸ್ ಆಗಿದ್ದು ಸಖತ್ ಸೌಂಡ್ ಮಾಡುತ್ತಿದೆ. ಇದು ಪೈಲ್ವಾನ್ ಒಬ್ಬರ ಕಥೆಯಾಗಿದ್ದು, ಕಿರುತೆರೆಯ ಸ್ಟಾರ್ ನಟ ನಾಯಕನಾಗಿ ನಟಿಸಲಿದ್ದಾರೆ.
ಯಾರು ಆ ನಟ?
ಇವರು ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೇ ಚಂದನವನಕ್ಕೂ ಹಾರಿ ಅಲ್ಲೂ ಸಹ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಅವರು ಬೇರ್ಯಾರು ಅಲ್ಲ ಚೇತನ್ ಚಂದ್ರ.
ಚೇತನ್ ಚಂದ್ರ
ಚೇತನ್ 6 ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಆಗ್ತಿದ್ದಾರೆ. ಹೌದು! ಈ ಹಿಂದೆ ಕಿರುತೆರೆಯಲ್ಲಿ ಸತ್ಯಂ ಶಿವಂ ಸುಂದರಂ, ಗಿರಿಜಾಕಲ್ಯಾಣ ಹಾಗೂ ನಾನು ನನ್ನ ಕನಸು ಧಾರವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ಈಗ ಸ್ಟಾರ್ ಸುವರ್ಣ ವಾಹಿನಿಯ ಮುಂಬರುವ ‘ಮರ್ಯಾದೆ ರಾಮಣ್ಣ’ ಧಾರವಾಹಿಯಲ್ಲಿ ನಾಯಕನಾಗಿ ಬಣ್ಣಹಚ್ಚುತ್ತಿದ್ದಾರೆ.
ಇದು ಪೈಲ್ವಾನ್ ಕಥೆ
ಈ ಹಿಂದೆ ಜೋಡಿ ಹಕ್ಕಿ ಧಾರಾವಾಹಿಯಲ್ಲಿ ಪೈಲ್ವಾನ್ ಕಥೆ ಇತ್ತು. ಇದೀಗ ಮರ್ಯಾದೆ ರಾಮಣ್ಣ ಸೀರಿಯಲ್ ನಲ್ಲೂ ಕೂಡ ನಾಯಕ ಪೈಲ್ವಾನ್ ಆಗಿ ನಟಿಸುತ್ತಿದ್ದಾರೆ. ಅದರಲ್ಲೂ ತಾಯಿಗಾಗಿ ಬ್ರಹ್ಮಚರ್ಯ ಪಾಲಿಸುತ್ತಿರುವ ಪೈಲ್ವಾನನ ಪ್ರೀತಿಯ ಕಥೆ ಇದಾಗಿದೆ. ಒಬ್ ಲೈನ್ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್ ಆಗಿತ್ತು. ಕಥೆ ಹೇಗೆ ಮೂಡಿ ಬರಲಿದೆ ಎಂದು ಜನ ಕಾಯುತ್ತಿದ್ದಾರೆ.
ನಾಯಕನ ಮುಖ ರಿವೀಲ್ ಆಗಿಲ್ಲ
ಇಲ್ಲಿವರೆಗೆ ನಾಯಕನ ಮುಖ ರಿವೀಲ್ ಆಗಿಲ್ಲ, ಆದರೆ, ಜನರು ಮಾತ್ರ ಇದು ಚೇತನ್ ಚಂದ್ರ ಅಂತ ಕನ್’ಫರ್ಮ್ ಆಗಿದ್ದಾರೆ. ಚೇತನ್ ಚಂದ್ರ ಅವರ ಸೋಶಿಯಲ್ ಮೀಡಿಯಾದಲ್ಲೂ ಕುಸ್ತಿ ತರಭೇತಿಯ ಹಲವಾರು ವಿಡಿಯೋಗಳನ್ನು ಕಾಣಬಹುದು.
ಚಂದನವನದಲ್ಲಿ ಮಿಂಚಿದ್ದ ಚೇತನ್ ಚಂದ್ರ
ಚೇತನ್ ಚಂದ್ರ ಚಂದನವನದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಪಿಯುಸಿ, ಪ್ರೇಮಿಸಂ, ರಾಜಧಾನಿ, ಜರಾಸಂಧ, ಕುಂಭ ರಾಶಿ, ಹುಚ್ಚುಡುಗರು, ಜಾತ್ರೆ, ಪ್ಲಸ್, ಸಂಯುಕ್ತ 2, ಶಾರ್ದೂಲ, ಬಾಜಾರ್, ಮೆಲೊಡಿ ಡ್ರಾಮಾ, ಪ್ರಭುತ್ವ ಮತ್ತು ಸಂಜು ವೆಡ್ಸ್ ಗೀತಾ 2 ಸಿನಿಮಾಗಳಲ್ಲಿ ಚೇತನ್ ಚಂದ್ರ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

