ಅನಂತಪದ್ಮನಾಭ ಸನ್ನಿಧಿಯಲ್ಲಿ ಚಂದನ್- ಕವಿತಾ ಗೌಡ….. ನಟನೆಯಿಂದ ದೂರ ಇರೋದ್ಯಾಕೆ?
ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಾದ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಕೇರಳದ ಸುಪ್ರಸಿದ್ಧ ಅನಂತಪದ್ಮನಾಭ ದೇವರ ಸನ್ನಿಧಿಗೆ ತೆರಳಿ ಪದ್ಮನಾಭನ ದರ್ಶನ ಪಡೆದು ಬಂದಿದ್ದಾರೆ.
ಒಂದು ಕಾಲದಲ್ಲಿ ಕಿರುತೆರೆಯ ಜನಪ್ರಿಯ ನಟರಾಗಿದ್ದವರು ಚಂದನ್ ಕುಮಾರ್ (Chandan Kumar) ಮತ್ತು ಕವಿತಾ ಗೌಡ. ಇಬ್ಬರೂ ಸಹ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಚಂದು ಮತ್ತು ಚಿನ್ನು ಆಗಿ ಖ್ಯಾತಿ ಪಡೆದಿದ್ದರು.
ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪರಿಚಿತರಾದ ಚಂದನ್ ಬಳಿಕ ರಾಧಾ ಕಲ್ಯಾಣ (Radha Kalyana) ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟರು, ಅದಾದ ಬಳಿಕ ಲಕ್ಷ್ಮೀ ಬಾರಮ್ಮ, ಸರ್ವಮಂಗಲ ಮಾಂಗಲ್ಯೆ, ಮರಳಿ ಮನಸಾಗಿದೆ ಸೀರಿಯಲ್ ನಲ್ಲಿ ನಟಿಸಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 3 (Bigg Boss Season 3), ಥಕದಿಮಿತಾ ಡ್ಯಾನ್ಸ್ ರಿಯಾಲಿಟಿ ಶೋ ಜೊತೆಗೆ ತೆಲುಗು, ತಮಿಳು ಸೀರಿಯಲ್ ಗಳಲ್ಲೂ ಚಂದನ್ ನಟಿಸಿದ್ದಾರೆ. ಅಷ್ಟೇ ಯಾಕೆ ಲೈಫು ಇಷ್ಟೇನೆ, ಪ್ರೇಮ ಬರಹ ಮೊದಲಾದ ಸಿನಿಮಾಗಳಲ್ಲೂ ಚಂದನ್ ನಟಿಸಿದ್ದಾರೆ.
ತಮಿಳು ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಕವಿತಾ ಗೌಡ (Kavitha Gowda), ಕನ್ನಡಕ್ಕೆ ಪರಿಚಿತರಾಗಿದ್ದು, ಲಕ್ಷ್ಮೀ ಬಾರಮ್ಮ ಸೀರಿಯಲ್ ಲಚ್ಚಿಯಾಗಿ. ಬಳಿಕ ವಿದ್ಯಾ ವಿನಾಯಕದಲ್ಲೂ ನಟಿಸಿದ್ದರು. ಒಂದೆರಡು ಸೀರಿಯಲ್ ಗಳಲ್ಲಿ ಅತಿಥಿ ಪಾತ್ರಗಳನ್ನೂ ಸಹ ನಿರ್ವಹಿಸಿದ್ದರು.
ತಮಿಳು ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದ ಕವಿತಾ, ಬಿಗ್ ಬಾಸ್ ಸೀಸನ್ 6, ಥಕದಿಮಿತಾ, ಕುಕ್ಕು ವಿತ್ ಕಿರಿಕ್ ಮೊದಲಾದ ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿದ್ದಾರೆ. ಜೊತೆಗೆ ಶ್ರೀನಿವಾಸ ಕಲ್ಯಾಣ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸೇರಿ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.
ಆದರೆ 2022 ರ ಬಳಿಕ ಚಂದನ್ ಮತ್ತು ಕವಿತಾ ಇಬ್ಬರೂ ಸಹ ಸಿನಿಮಾ, ಸೀರಿಯಲ್ ಗಳಿಂದ ದೂರ ಉಳಿದಿದ್ದಾರೆ. ಚಂದನ್ ಸದ್ಯ ಸೆಲೆಬ್ರಿಟಿ ಕ್ರಿಕೇಟ್ (celebrety cricket)ನಲ್ಲಿ ಕಾಣಿಸಿಕೊಂಡಿದ್ದರೆ, ಕವಿತಾ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡಿದ್ದರು ಅಷ್ಟೇ. ಇಬ್ಬರು ಮತ್ತೆ ಯಾವಾಗ ತೆರೆ ಮೇಲೆ ಕಾಣಿಸಿಕೊಳ್ತಾರೆ ನೋಡ್ಬೇಕು.
ಸದ್ಯಕ್ಕೆ ನಟನೆಯಿಂದ ದೂರ ಉಳಿದು ತಮ್ಮ ಬ್ಯುಸಿನೆಸ್ ಮತ್ತು ಪರ್ಸನಲ್ ಲೈಫ್ ನಲ್ಲೇ ಬ್ಯುಸಿಯಾಗಿರುವ ಕವಿತಾ ಚಂದನ್ ದಂಪತಿ ಇತ್ತೀಚೆಗೆ ಕೇರಳದ ಅನಂತಪದ್ಮನಾಭ ದೇಗುಲಕ್ಕೆ ಭೇಟಿ ನೀಡಿ, ಪದ್ಮನಾಭ ಸ್ವಾಮಿ ದರ್ಶನ ಪಡೆದು ಬಂದಿದ್ದಾರೆ. ಅಲ್ಲಿನ ಫೋಟೋ ಒಂದನ್ನು ಸಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.