ಬಿಗ್ ಬಾಸ್ ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ ದೊಡ್ಡ ಸೆಲೆಬ್ರಿಟಿ ಆಗೋದ್ರಾ?
ಬಿಗ್ ಬಾಸ್ ಸೀಸನ್ 11ರಲ್ಲಿ ಚೈತ್ರಾ ಕುಂದಾಪುರ 64 ದಿನಗಳ ನಂತರ ಹೊರಬಂದಿದ್ದಾರೆ. ಆದರೆ, ದೊಡ್ಡ ಸೆಲೆಬ್ರಿಟಿಗಳಂತೆ ಮುಖ ಮುಚ್ಚಿಕೊಂಡು (ಮುಖಕ್ಕೆ ಮಾಸ್ಕ್, ಕಣ್ಣಿಗೆ ಗಾಗಲ್ಸ್) ಹೊರಗೆ ಕಾಣಿಸಿಕೊಂಡಿದ್ದಾರೆ. ಇನ್ನು ಚೈತ್ರಾ ಬಿಗ್ ಬಾಸ್ ಮನೆ ಬಿಟ್ಟು ಬಂದ್ರಾ ಎಂದು ಚಿಂತಿಸುವ ಅಭಿಮಾನಿಗಳಿಗೆ ಇಲ್ಲಿದೆ ನೋಡಿ ಉತ್ತರ...
ಬಿಗ್ ಬಾಸ್ ಸೀಸನ್ 11ರ ರಿಯಾಲಿಟಿ ಶೋನಲ್ಲಿ 64 ದಿನಗಳನ್ನು ಪೈರೈಸಿ ಹೊರಗೆ ಬಂದಿರುವ ಚೈತ್ರಾ ಕುಂದಾಪುರ ಅವರು ಶೈಲಿಯೇ ಭಿನ್ನವಾಗಿದೆ. ಕಣ್ಣಿಗೆ ಗಾಗಲ್ಸ್, ದುಬಾರಿ ಸೀರೆ ಧರಿಸಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ನೋಡಿದ ಅಭಿಮಾನಿಗಳು ಶಿಳ್ಳೆ ಚೆಪ್ಪಾಳೆ ಮೂಲಕ ಚೈತ್ರಾ.. ಚೈತ್ರಾ.. ಎಂದು ಕೂಗಿದ್ದಾರೆ.
ಅರೆರೇ ಇದೇನಿದು ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಅರ್ಧದಲ್ಲೇ ಹೊರಗೆ ಬಂದಿದ್ದೇಕೆ ಎಂದು ಆಶ್ಚರ್ಯಪಡುವವರಿಗೆ ಇಲ್ಲಿದೆ ನೋಡಿ ಉತ್ತರ. ಬಿಗ್ ಬಾಸ್ ರಿಯಾಲಟಿ ಶೋ ಸ್ಪರ್ಧಿಯಾಗಿರುವ ಚೈತ್ರಾ ಕುಂದಾಪುರ 65 ದಿನಗಳನ್ನು ಕಳೆದಿದ್ದಾರೆ. ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯಿತಿ ವೇಳೆ ಜನರಿಂದ ಸೇವ್ ಆಗಿದ್ದ ಚೈತ್ರಾ ದೊಡ್ಡದಾಗಿ ಭಾಷಣ ಮಾಡಿದ್ದರು. ಜನರು ತಮ್ಮನ್ನು ಸೇವ್ ಮಾಡಿದ್ದಕ್ಕೆ ಪುಸ್ತಕದಲ್ಲಿ ಹುಡುಕಿದರೂ ಸಿಗದಂತಹ ದೊಡ್ಡ ಮಾತುಗಳನ್ನಾಗಿ ಅಭಿಮಾನಿಗಳ ಮನಸ್ಸು ಗೆದ್ದಿದ್ದರು.
ಆದರೆ, ಈ ವಾರ ಬಿಗ್ ಬಾಸ್ ಮನೆಯಿಂದ ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣಗಳ ನೆಪವೊಡ್ಡಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಹೋಗಿದ್ದ ಶೋಭಾಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಇದರ ಬೆನ್ನಲ್ಲಿಯೇ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವುದಕ್ಕೆ ಬೇರೆಯದೇ ಕಾರಣವಿದೆ. ಇವರು ಎಲಿಮಿನೆಟ್ ಆಗಿ ಮನೆಯಿಂದ ಹೊರಗೆ ಬಂದಿಲ್ಲ. ಕೋರ್ಟ್ ಕೇಸಿನ ವಿಚಾರಣೆಗೆ ಬರುವಂತೆ ವಾರೆಂಟ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಅನುಮತಿಯನ್ನು ಪಡೆದು ಒಂದೆರೆಡು ಗಂಟೆಗಳ ಅವಧಿಯಲ್ಲಿ ಕೋರ್ಟ್‌ಗೆ ಬಂದು ವಿಚಾರಣೆ ಎದುರಿಸಿ ಹೋಗಿದ್ದಾರೆ.
ಈ ಹಿಂದೆಯೂ ಅನಾರೋಗ್ಯದಿಂದ ಹೊರಬಂದಿದ್ದ ಚೈತ್ರಾ:
ಚೈತ್ರಾ ಕುಂದಾಪುರ ಅವರು 5ನೇ ವಾರದಲ್ಲಿ ಬಿಗ್ ಬಾಸ್ ಮನೆಯ ಸ್ನಾನದ ಕೋಣೆಯ ಆವರಣದಲ್ಲಿ ಕುಸಿದು ಬಿದ್ದಿದ್ದರು. ಈ ವೇಳೆ ಚಿಕಿತ್ಸೆ ಪಡೆಯುವುದಕ್ಕಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಆಗ ರಿಯಾಲಿಟಿ ಶೋ ತಂಡದಿಂದ ಚಿಕಿತ್ಸೆ ನೀಡಲು ನಿಯೋಜನೆ ಮಾಡಲಾದ ವೈದ್ಯರಿಂದ ಚಿಕಿತ್ಸೆ ಪಡೆದು ವಾಪಸ್ ಮನೆಯೊಳಗೆ ಹೋಗಿದ್ದರು. ಆದರೆ, ಈ ವೇಳೆ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಹೊರಗೆ ಏನೆಲ್ಲಾ ಚರ್ಚೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಕಿಚ್ಚನ ಪಂಚಾಯಿತಿಯಲ್ಲಿ ಕ್ಷಮೆ ಕೇಳಿದ್ದರು.
ಚೈತ್ರಾ ಕೋರ್ಟ್ ಕೇಸ್ ಹಿನ್ನೆಲೆ ಏನು?
ಚೈತ್ರಾ ಕುಂದಾಪುರ ಅವರು ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ. ಪಡೆದು ವಂಚಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಸಂಗಡಿಗರು ಮನೆ ಕಟ್ಟಿಸಿಕೊಳ್ಳುವುದು, ಜಮೀನು ಖರೀದಿ, ಚಿನ್ನಾಭರಣ ಖರೀದಿ ಸೇರಿದಂತೆ ಮಾಡಿದ್ದರು. ಇದರ ಬೆನ್ನಲ್ಲಿಯೇ ಪೊಲೀಸರು ಚೈತ್ರಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ನಂತರ ವಿಚಾರಣೆ ನಡೆಸಿ ಚಾರ್ಚ್ ಶೀಟ್ ಸಲ್ಲಿಕೆ ಮಾಡಿ ಜೈಲಿಗಟ್ಟಿದ್ದರು. ಜಾಮೀನಿನ ಮೇಲೆ ಹೊರಬಂದ ಚೈತ್ರಾ ಕುಂದಾಪುರ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 11ಕ್ಕೆ ಸ್ಪರ್ಧಿಯಾಗಿ ಹೋಗಿದ್ದಾರೆ.