ಕಿಶನ್, ಚೈತ್ರ ಆಚಾರ್ ಎನರ್ಜಿಟಿಕ್ ಡ್ಯಾನ್ಸ್ ನೋಡಿ ನೆಟ್ಟಿಗರು ಫಿದಾ
ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ಕನ್ನಡದ ನಟಿ ಚೈತ್ರಾ ಆಚಾರ್ ಜೊತೆಯಾಗಿ ಡ್ಯಾನ್ಸ್ ಮಾಡಿದ್ದ ವಿಡಿಯೋ ಒಂದು ಸದ್ಯ ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ, ಇಬ್ಬರ ಡ್ಯಾನ್ಸ್ ಮೂವ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ಸದ್ಯ ಇಂಟರ್ನೆಟ್ ನೋಡಿದ್ರೆ ಕನ್ನಡದ ಉದಯೋನ್ಮುಖ ನಟಿ ಚೈತ್ರಾ ಆಚಾರ್ ಮತ್ತು ಡ್ಯಾನ್ಸರ್ ಹಾಗೂ ಬಿಗ್ ಬಾಸ್ ಸೀಸನ್ 7 ಮೂಲಕ ಖ್ಯಾತಿ ಪಡೆದಿದ್ದ ಕಿಶನ್ ಬೆಳಗಲಿ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕಿಶನ್ (Kishen Bilagali) ಡ್ಯಾನ್ಸ್ ಬಗ್ಗೆ ಹೇಳೋದೆ ಬೇಡ, ಈಗಾಗಲೇ ಕಿಶನ್ ಡ್ಯಾನ್ಸ್ ನೋಡಿದ್ದೀವಿ ಅಲ್ವಾ? ಅವರೊಬ್ಬ ಎನರ್ಜಿಟಿಕ್ ಡ್ಯಾನ್ಸರ್ ಅನ್ನೋದು ಗೊತ್ತೆ ಇದೆ. ಇವರು ಹಿಂದಿಯ ಜನಪ್ರಿಯ ಡ್ಯಾನ್ಸ್ ಶೋ ಡ್ಯಾನ್ಸ್ ದೀವಾನೆ ವಿನ್ನರ್ ಆಗಿದ್ದರು, ರೋಡೀಸ್ ನಲ್ಲೂ ಸಹ ಭಾಗಿಯಾಗಿದ್ದರು.
ಆದರೆ ನಟಿಸಿದ ಬೆರಳೆಣಿಕೆಯ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ, ತಮ್ಮ ಹರಳು ಹುರಿದಂತಹ ಮಾತುಗಳಿಂದಲೇ ಜನಪ್ರಿಯತೆ ಪಡೆದ ಅದ್ಭುತ ನಟಿ ಮತ್ತು ಗಾಯಕಿಯಾಗಿರುವ ಚೈತ್ರಾ ಆಚಾರ್ (Chaitra Achar), ತಾವೊಬ್ಬ ಅದ್ಭುತ ಡ್ಯಾನ್ಸರ್ ಅನ್ನೋದನ್ನು ಸಹ ಪ್ರೂವ್ ಮಾಡಿದ್ದಾರೆ.
ಕಿಶನ್ ಬಿಳಗಲಿ ಜೊತೆಗೆ ತಮಿಳಿನ ಇತ್ತೀಚಿನ ಟ್ರೆಂಡ್ ನಲ್ಲಿರೋ ಹಾಡಿಗೆ ಹೆಜ್ಜೆ ಹಾಕಿರುವ ಚೈತ್ರಾ, ಹಾಡಿನ ಫಾಸ್ಟ್ ಬೀಟ್ ಗೆ ತಕ್ಕಂತೆ ಸ್ಟೆಪ್ಸ್ ಹಾಕುತ್ತಾ, ತಮ್ಮ ಎನರ್ಜಿಕ್ ಸ್ಟೆಪ್ಸ್ ಮತ್ತು ಎಕ್ಸ್ ಪ್ರೆಶನ್ ಮೂಲಕ ಅಭಿಮಾನಿಗಳು ವಾವ್ ಎಂದು ಹುಬ್ಬೇರಿಸುವಂತೆ ಮಾಡಿದ್ದಾರೆ.
ನಮ್ಡು ಒಂದಿರ್ಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ (Social Media)ವಿಡಿಯೋ ಶೇರ್ ಮಾಡಿರುವ ಚೈತ್ರಾ, ನನ್ನೊಂದಿಗೆ ತಾಳ್ಮೆಯಿಂದಿದ್ದು, ಈ ಡ್ಯಾನ್ಸ್ ನ್ನು ನನ್ನ ಜೊತೆ ಮಾಡಿದ್ದಕ್ಕಾಗಿ ಥ್ಯಾಂಕ್ಯೂ ಎಂದು ಕಿಶನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ನೀಲಿ ಬಣ್ಣದ ಸೀರೆಯನ್ನು ಕಾಲಿಂದ ಸ್ವಲ್ಪ ಮೇಲಕ್ಕೆ ಎತ್ತಿ ಕಟ್ಟಿ, ಪಕ್ಕಾ ಲೋಕಲ್ ಸ್ಟೈಲ್ ನಲ್ಲಿ ಹೆಜ್ಜೆ ಹಾಕಿರುವ ಚೈತ್ರಾ ಡ್ಯಾನ್ಸ್ ನೋಡಿ, ಸೆಲೆಬ್ರಿಟಿಗಳು ಸೇರಿ, ಅಭಿಮಾನಿಗಳು ಸಹ ಅದ್ಭುತ ಡ್ಯಾನ್ಸ್ ಎಂದು ಕಾಮೆಂಟ್ ಮಾಡಿದ್ದಾರೆ.
ಮ್ಯೂಸಿಕ್ ಡೈರೆಕ್ಟರ್ ಆಗಿರುವ ವಾಸುಕಿ ವೈಭವ್ ಚೈತ್ರಾ ನೀವು ಸೂಪರ್ ನಟಿ, ಸಿಂಗರ್, ಈಗ ಡ್ಯಾನ್ಸರ್ ಕೂಡ ಹೌದು. ನೆಕ್ಸ್ಟ್ ಇನ್ನೇನು… ಪೈಂಟಿಂಗ್ ಮಾಡ್ತೀರಾ ಎಂದು ಕೇಳಿದ್ದಾರೆ. ನಟಿ - ನಿರೂಪಕಿ ಅನುಶ್ರೀಯವರು ಚೈ, ಸೆಮ್ಮಾ ಮಚ್ಚಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್, ಜೊತೆಗೆ ನಟ ಮತ್ತು ಬಿಗ್ ಬಾಸ್ ಸೀಸನ್ 7 ವಿನ್ನರ್ ಶೈನ್ ಶೆಟ್ಟಿ ಸಹ ಅದ್ಭುತವಾಗಿದೆ, ಕಿಲ್ಲರ್ ಬ್ಯೂಟೀಸ್ ಎಂದು ಕಾಮೆಂಟ್ ಮಾಡಿದ್ದಾರೆ. ಜನರು ಬೆಂಕಿಯಂತಹ ಎನರ್ಜಿ ಎಂದಿದ್ದಾರೆ.