ಚಂದನಾ ಮದ್ವೇಲಿ ಜಯಂತ್ ಮಿಸ್ಸಿಂಗ್, ಚಿನ್ನುಮರಿ ರಿಯಲ್ - ರೀಲ್ ಗಂಡನ್ನ ಒಟ್ಟಿಗೆ ನೋಡುವ ಫ್ಯಾನ್ಸ್ ಆಸೆ ಈಡೇರಲಿಲ್ಲ!
ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಚಂದನ ಅನಂತಕೃಷ್ಣ ಅವರು ಪ್ರತ್ಯಕ್ಷ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಮಾರಂಭದಲ್ಲಿ ಲಕ್ಷ್ಮೀ ನಿವಾಸ ತಾರೆಯರು ಆಗಮಿಸಿದ್ದು, ಜಯಂತ್ ಮಿಸ್ ಆಗಿದ್ದಾನೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಚಂದನ ಅನಂತಕೃಷ್ಣ (Chandana ananthakrishna) ನವಂಬರ್ 28 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚಂದನ ತಾವು ಹಲವು ವರ್ಷಗಳಿಂದ ಇಷ್ಟಪಡುತ್ತಿದ್ದ ಪತ್ಯಕ್ಷ್ (Pratyaksh) ಜೊತೆ ಗುರುಹಿರಿಯರು ಹಾಗೂ ಸ್ನೆಹಿತರು, ಬಂಧು ಬಳಗದ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.
ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಇರುವ ಗುರು ನರಸಿಂಹ ಕಲ್ಯಾಣ ಮಂದಿರಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ. ಸಿನಿಮಾ ಹಾಗೂ ಕಿರುತೆರೆ ಸ್ನೇಹಿತರು ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಮದುವೆಗೂ ಮುನ್ನ ಕಳೆದ ಮೂರು ದಿನಗಳಿಂದ ಚಂದನಾ ನಿವಾಸದಲ್ಲಿ ಮೆಹೆಂದಿ, ಸಂಗೀತ್ ಹಾಗೂ ಅರಶಿನ ಶಾಸ್ತ್ರ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು, ಲಕ್ಷ್ಮೀ ನಿವಾಸದ ನಟ- ನಟಿಯರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಲಕ್ಷ್ಮೀ ನಿವಾಸ ದಿಶಾ ಮದನ್, ಲಕ್ಷ್ಮೀ ಹೆಗ್ಡೆ, ಮಧು ಹೆಗ್ಡೆ, ಯಶಸ್ವಿನಿ, ಅಂಜಲಿ, ಅಜಯ್ ರಾಜ್, ಪತ್ನಿ ಪದ್ಮಿನಿ, ಭವೀಷ್ ಗೌಡ, ಅಶೋಕ್ ಜಂಬೆ, ದಿವ್ಯಶ್ರೀ ಗ್ರಾಮ ಆಗಮಿಸಿದ್ದರು.
ಇವರಲ್ಲದೇ ಅನುಪಮಾ ಗೌಡ, ನಿರಂಜನ್ ದೇಶಪಾಂಡೆ, ಪತ್ನಿ ಯಶಶ್ವಿನಿ, ಯಮುನಾ ಸನ್ನಿಧಿ, ಸ್ವಾತಿ, ಸುಜಾತ ಕಷ್ಯಪ್ ಸೇರಿ ಹಲವು ತಾರೆಯರು ಭಾಗಿಯಾಗಿದ್ದರು.
ಆದರೆ ಚಂದನ ಮದುವೆಯಲ್ಲಿ ಜಯಂತ್ ಪಾತ್ರದಲ್ಲಿ ನಟಿಸುತ್ತಿರುವ ದೀಪಕ್ ಸುಬ್ರಹ್ಮಣ ಕಾಣಿಸಲೇ ಇಲ್ಲ. ಹಾಗಾಗಿ ಜನ ಜಯಂತ್ ಗೆ ಆಹ್ವಾನ ಕೊಟ್ಟೇ ಇಲ್ಲ ಚಿನ್ನುಮರಿ ಅಂತೆಲ್ಲಾ ಕೇಳಿದ್ದಾರೆ.
ರಾಜಾ ರಾಣಿ ಧಾರಾವಾಹಿಯಲ್ಲಿ ನಾಯಕಿಯಾಗುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಚಂದನ ಅನಂತಕೃಷ್ಣ, ಮೊದಲ ಧಾರಾವಾಹಿಯ ಮೂಲಕವೇ ಜನಮನ ಗೆದ್ದಿದ್ದರು.
ನಂತರ ಬಿಗ್ ಬಾಸ್ ಸೀಸನ್ 7 ಮೂಲಕ ಮನೆಮಾತಾಗಿ, ಬಳಿಕ ಹೂಮಳೆ ಧಾರಾವಾಹಿಯಲ್ಲಿ ಹಾಗೂ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಸ್ಪರ್ಧಿಯಾಗಿ ಹಾಗೂ ಕನ್ನಡ ಕೋಗಿಲೆ ನಿರೂಪಕಿಯಾಗಿ ಸಹ ಗುರುತಿಸಿಕೊಂಡಿದ್ದರು.
ಭರ್ಜರಿ ಬ್ಯಾಚುಲರ್ಸ್ ನಲ್ಲೂ ಕೆಲಕಾಲ ಸ್ಪರ್ಧಿಯಾಗಿದ್ದರು. ನಂತರ ಆ ಕಾರ್ಯಕ್ರಮದಿಂದ ಹೊರ ನಡೆದಿದ್ದರು. ಅದಾದ ಬಳಿಕ ಫೈನ್ ಆರ್ಟ್ಸ್ ನಲ್ಲಿ ಮಾಸ್ಟರ್ಸ್ ಮಾಡೋದರಲ್ಲಿ ಬ್ಯುಸಿಯಾಗಿದ್ದ ಚಂದನ, ಸದ್ಯ ಲಕ್ಷ್ಮೀ ನಿವಾಸದಲ್ಲಿ ನಟಿಸುತ್ತಿದ್ದಾರೆ.
ಚಂದನ ಮದುವೆ ಫೋಟೊಗಳು ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇವತ್ತು ನಟಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸಿದ ತಾರೆಯರ ಫೋಟೊಗಳನ್ನು ನೀವೂ ನೋಡಿ.