MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಬೃಂದಾವನ ಸೀರಿಯಲ್ ಘಾಟಿ ಅತ್ತಿಗೆ ಗಿರಿಜಾ ನಟನೆಗೆ ಪ್ರೇಕ್ಷಕರು ಫಿದಾ… ರಿಯಲ್ ಲೈಫಲ್ಲೂ ಹೀಗೇನಾ ಇವ್ರು?

ಬೃಂದಾವನ ಸೀರಿಯಲ್ ಘಾಟಿ ಅತ್ತಿಗೆ ಗಿರಿಜಾ ನಟನೆಗೆ ಪ್ರೇಕ್ಷಕರು ಫಿದಾ… ರಿಯಲ್ ಲೈಫಲ್ಲೂ ಹೀಗೇನಾ ಇವ್ರು?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಬೃಂದಾವನದಲ್ಲಿ ಪುಷ್ಪಾ ಅತ್ತಿಗೆ ಗಿರಿಜಾ ಪಾತ್ರದಲ್ಲಿ ಮಿಂಚುತ್ತಿರುವ ನಟಿಯ ರಿಯಲ್ ಲೈಫ್ ಬಗ್ಗೆ ಒಂದಿಷ್ಟು ಮಾಹಿತಿ.  

2 Min read
Author : Suvarna News
Published : Nov 22 2023, 11:04 AM IST
Share this Photo Gallery
  • FB
  • TW
  • Linkdin
  • Whatsapp
18

ಕಲರ್ಸ್ ಕನ್ನಡದಲ್ಲಿ (Colors Kannada) ಇತ್ತೀಚೆಗಷ್ಟೇ ಆರಂಭವಾದ ಹೊಚ್ಚ ಹೊಸ ಧಾರಾವಾಹಿ ನಾಯಕನ ಬದಲಾವಣೆಯಿಂದ ಸದ್ಯ ಸದ್ದು ಮಾಡುತ್ತಿದೆ. ಅದಕ್ಕೂ ಮೊದಲು ಸೀರಿಯಲ್ ನಾಯಕಿಯ ಅತ್ತಿಗೆಯನ್ನು ನೋಡಿಯೇ ಜನ ಸಿಟ್ಟಿಗೆಟ್ಟಿದ್ದರು. 
 

28

ಈ ಧಾರಾವಾಹಿಯಲ್ಲಿ ನಾಯಕಿ ಪುಷ್ಪಾ, ಅತ್ತಿಗೆಯ ಪಾತ್ರ ಹಣ ಕಂಡ್ರೆ ಬಾಯಿ ಬಿಡೋ ಪಾತ್ರ. ಅಂದ್ರೆ ಹಣಕ್ಕೋಸ್ಕರ ತನ್ನ ನಾದಿನಿಯನ್ನು ಯಾರಿಗೆ ಬೇಕಾದ್ರೂ ಕೊಟ್ಟು ಮಾರುವಂತಹ ಪಾತ್ರ ಅತ್ತಿಗೆ ಗಿರಿಜಾಳದ್ದು. ಈ ಪಾತ್ರ ನೋಡಿ ಹಿಡಿ ಶಾಪ ಹಾಕಿದವರೇ ಹೆಚ್ಚು. 
 

38

ಧನ ಪಿಶಾಚಿ ಅತ್ತಿಗೆ ಗಿರಿಜಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅನುಪಲ್ಲವಿ ಗೌಡ (AnuPallavi Gowda). ಹಣಕ್ಕಾಗಿ ಗಂಡನ ತಂಗಿಯನ್ನು ಮದುವೆ ಮಾಡಿ ಕೊಡುತ್ತಿರುವ ಮನೆಯಿಂದ ಎರಡು ಕೋಟಿ ರೂಪಾಯಿ ಬೇಡಿಕೆ ಇಟ್ಟ ಗಿರಿಜಾಳನ್ನು ನೋಡಿ ಅಯ್ಯೋ ಇಂಥ ಅತ್ತಿಗೇನೂ ಇರ್ತಾರಾ ಎಂದು ಕೇಳಿದ್ದರು. 
 

48

ರಿಯಲ್ ಲೈಫಲ್ಲೂ ತಾನು ಸ್ವಲ್ಪ ಘಾಟಿನೇ ಎನ್ನುವ ಅನುಪಲ್ಲವಿ ಗೌಡ ಹಣದಾಹಿ ಗಿರಿಜಾ ಪಾತ್ರವನ್ನು ಎಷ್ಟು ಅದ್ಭುತವಾಗಿ ಮಾಡಿದ್ದಾರೆ ಅಂದ್ರೆ, ಪ್ರೇಕ್ಷಕರು ಸಹ ಇವರ ಪಾತ್ರವನ್ನು ಇಷ್ಟಪಟ್ಟಿದ್ದಾರೆ. ಆ ಕೊಂಕು ನುಡಿ, ಕುಹಕದ ನಗು, ಮೋಸ ಮಾಡಿ, ತನ್ನ ಮಾತಿನ ಮೋಡಿಯಲ್ಲೇ ಹಣ ಮಾಡೋ ಇವರ ನಟನೆ ನೋಡಿದ್ರೆ ಏನು ಹೆಂಗ್ಸಪ್ಪ ಎನ್ನುವಷ್ಟು ನೈಜ್ಯವಾಗಿ ಅಭಿನಯಿಸಿದ್ದಾರೆ ಅನುಪಲ್ಲವಿ. 
 

58

ಅನುಪಲ್ಲವಿಯವರು ಕಿರುತೆರೆಯಲ್ಲಿ (smallscreen) ಸಕ್ರಿಯರಾಗಿರುವ ನಟಿ. ಇದೇನು ಅವರ ಮೊದಲ ಸೀರಿಯಲ್ ಅಲ್ಲ. ಅನುಪಲ್ಲವಿ ಈ ಹಿಂದೆ ನಮ್ಮನೆ ಯುವರಾಣಿ ಸೀರಿಯಲ್‌ನಲ್ಲೂ ನಟಿಸಿದ್ದರು, ಅಷ್ಟೇ ಅಲ್ಲ ಪರ್ವ, ಹೂಮಳೆ ಸೀರಿಯಲ್, ಜೊತೆ ಸಿನಿಮಾದಲ್ಲೂ ಸಹ ನಟಿಸಿದ್ದರು. ಆದರೆ ಬೃಂದಾವನ ಸೀರಿಯಲ್ ಮೂಲಕ ಇವರು ಕೇವಲ ಮೂರು ವಾರದಲ್ಲೇ ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. 
 

68

ಹಲವಾರು ವರ್ಷಗಳಿಂದ ರಂಗಭೂಮಿ (theater artist) ಕಲಾವಿದರಾಗಿರುವ ಇವರು. ಹಲವಾರು ನಾಟಕಗಳನ್ನು ಸಹ ಮಾಡಿದ್ದಾರೆ, ಹಲವು ಸ್ಟೇಜ್ ಪ್ರೋಗ್ರಾಂ ಸಹ ನೀಡಿದ್ದಾರೆ. ಇದೇ ಪಲ್ಲವಿಯವರಿಗೆ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಲು ನೆರವಾಯಿತು. ಇವರ ನಟನೆಯನ್ನು, ಇವರ ಅಂದವನ್ನು ಇಷ್ಟಪಟ್ಟಿರೋ ಜನರು ಇವರಿಗೆ ಉತ್ತಮ ಭವಿಷ್ಯ ಇದೆ ಎಂದು ಕೊಂಡಾಡಿದ್ದಾರೆ.
 

78

ಇನ್ನು ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್ (makeup artist) ಆಗಿರುವ ಅನುಪಲ್ಲವಿ ಗೌಡ, ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲೂ ಅವರು ಮೇಕಪ್ ಟಿಪ್ಸ್ , ಹೇರ್ ಕೇರ್ ಟಿಪ್ಸ್ ನೀಡುತ್ತಾ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಇವರು ಫೋಟೋ, ಮತ್ತು ಸೀರಿಯಲ್ ತಂಡದ ಜೊತೆಗಿನ ಕಾಮಿಡಿ ರೀಲ್ಸ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. 
 

88

ಸೀರಿಯಲ್ ವಿಚಾರಕ್ಕೆ ಬಂದ್ರೆ ಸದ್ಯ ಪುಷ್ಪ ಆಕಾಶ್ ಮದುವೆಯ ಅದ್ಧೂರಿ ತಯಾರಿ ನಡೆಯುತ್ತಿದೆ. ಒಂದೆಡೆ ಒಂದು ಕೋಟಿ ಪಡೆದಿರುವ ಗಿರಿಜಾ, ಮತ್ತೊಂದು ಕೋಟಿ ದುಡ್ಡಿಗೆ ಕಾಯ್ತಿದ್ದಾಳೆ. ಮತ್ತೊಂದೆಡೆ ಆಕಾಶ್ ನೋಡಿದ್ದು ಪುಷ್ಪ ಫೋಟೋ ಅಲ್ಲ ಅಂತ ಗೊತ್ತಿದ್ದು, ಅದನ್ನು ಮುಚ್ಚಿಟ್ಟು ಸುಮ್ಮನಿದ್ದಾಳೆ ಗಿರಿಜಾ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಪುಷ್ಪಾ - ಆಕಾಶ್ ಮದ್ವೆ ಆಗುತ್ತಾ ಕಾದು ನೋಡಬೇಕು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ನಟಿ

Latest Videos
Recommended Stories
Recommended image1
'ಅಗಸ್ತ್ಯ ವೇದಾಂತ್'… ಮಗನಿಗೆ ಮುದ್ದಾದ ಹೆಸರನ್ನಿಟ್ಟ ನಟಿ Rashmi Prabhakar… ನಾಮಕರಣ Photos
Recommended image2
ಶೀಘ್ರದಲ್ಲಿ ಅಂತ್ಯವಾಗಲಿರೋ Colors Kannada Serial ಯಾವುದು?; ಆ ಜಾಗಕ್ಕೆ ಹೊಸ ಧಾರಾವಾಹಿ ಎಂಟ್ರಿ!
Recommended image3
ಕೃಷ್ಣ-ರುಕ್ಕು ಪಯಣಕ್ಕೆ ಮುಹೂರ್ತ; ಸೀರಿಯಲ್ ಆರಂಭಕ್ಕೂ ಮೊದಲೇ ನವೀನ್ ಸಜ್ಜು ಪಾತ್ರ ಮುಕ್ತಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved