- Home
- Entertainment
- TV Talk
- Brahmagantu Serial: ದಿಶಾ ಪ್ರೀತಿನಾ ಒಪ್ಕೊಂಡು ಬಿಟ್ಟ ಚಿರಾಗ್... ಇದೆಂಥ ಸ್ಥಿತಿ ಬಂತು ದೀಪಾಗೆ!
Brahmagantu Serial: ದಿಶಾ ಪ್ರೀತಿನಾ ಒಪ್ಕೊಂಡು ಬಿಟ್ಟ ಚಿರಾಗ್... ಇದೆಂಥ ಸ್ಥಿತಿ ಬಂತು ದೀಪಾಗೆ!
Brahmagantu Serial: ಪ್ರತಿ ದಿನವೂ ತಿರುವುಗಳೊಂದಿಗೆ ಪ್ರಸಾರವಾಗುವ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಇದೀಗ ಮಹಾ ತಿರುವು ಸಿಕ್ಕಿದೆ. ದಿಶಾ ಆಗಿ ಚಿರಾಗ್ ಗೆ ಪ್ರಪೋಸ್ ಮಾಡ್ತಿದ್ದಾಳೆ ದೀಪಾ. ಚಿರಾಗ್ ಸಂತೋಷದಿಂದಲೇ ದಿಶಾ ಕೊಟ್ಟ ಹೂವು ಪಡೆದಿದ್ದಾನೆ, ಮುಂದೇನಾಗಬಹುದು?

ಬ್ರಹ್ಮಗಂಟು ಸೀರಿಯಲ್
ಬ್ರಹ್ಮಗಂಟು ಧಾರಾವಾಹಿಯಲ್ಲಿ ಇದೀಗ ರೋಚಕ ತಿರುವು ಸಿಕ್ಕಿದೆ. ಇಲ್ಲಿವರೆಗೆ ದಿಶಾ ಆಗಿದ್ದ ದೀಪಾ ಇದೀಗ ಚಿರು ನಿಜವಾಗಿಯೂ ಯಾರನ್ನು ಪ್ರೀತಿಸುತ್ತಾನೆ ಅನ್ನೋದನ್ನು ತಿಳಿಯಲು ದಿಶಾ ಆಗಿಯೇ ಚಿರಾಗ್ ಗೆ ಪ್ರಪೋಸ್ ಮಾಡಿದ್ದಾಳೆ. ಚಿರಾಗ್ ದಿಶಾ ಪ್ರಪೋಸಲನ್ನು ಒಪ್ಪಿಕೊಂಡಿದ್ದಾನೆ.
ಗುಣ ಮತ್ತು ಸೌಂದರ್ಯ
ದಿಶಾ ಆಗಿ ಚಿರಾಗ್ ಗೆ ಪ್ರಪೋಸ್ ಮಾಡಬೇಕೆಂದು ನಿರ್ಧರಿಸಿದ್ದಾಳೆ ದೀಪಾ, ಆ ಮೂಲಕ ತನ್ನ ಗಂಡನಿಗೆ ಗುಣ ಮುಖ್ಯವೋ ಅಥವಾ ಸೌಂದರ್ಯ ಮುಖ್ಯವೋ ಅನ್ನೋದನ್ನು ತಿಳಿದುಕೊಳ್ಳುವ ಮಹಾ ನಿರ್ಧಾರವನ್ನು ಮಾಡಿದ್ದಾರೆ.
ಐ ಲವ್ ಯೂ ಎಂದ ದಿಶಾ
ದಿಶಾ ಪ್ರಪೋಸಲ್ ಗೆ ಪೂರ್ತಿ ಅರೇಂಜ್ ಮಾಡಿ, ಚಿರಾಗ್ ನೀವಂದ್ರೆ ನಂಗೆ ತುಂಬಾ ಇಷ್ಟ, ಐ ಲವ್ ಯೂ ಎಂದು ಹೇಳುತ್ತಾ, ಹೂಗುಚ್ಚವನ್ನು ಚಿರಾಗ್ ಕೈಯಲ್ಲಿ ಇಡುತ್ತಾಳೆ. ಚಿರಾಗ್ ಅದನ್ನು ನಗುನಗುತ್ತಲೇ ತೆಗೆದುಕೊಳ್ಳುತ್ತಾನೆ.
ಪ್ರೀತಿಯಲ್ಲಿ ದೀಪಾ ಸೋತು ಹೋದ್ಲ?
ಇದನ್ನೆಲ್ಲಾ ನೋಡಿದ್ರೆ ದೀಪಾ ಭಯ ನಿಜ ಆದಂತಿದೆ. ಸೌಂದರ್ಯದ ಮುಂದೆ ಗುಣ ಸೋತು ಹೋಗಿದೆ. ದೀಪಾ ಅಂದುಕೊಂಡಂತೆ ಹಸ್ಬೆಂಡ್ ದೀಪಾಳನ್ನು ಲವ್ ಮಾಡಿಯೇ ಇಲ್ವಾ? ಎನ್ನುವ ಪ್ರಶ್ನೆ ದೀಪಾಳನ್ನು ಕಾಡುವಂತೆ ಮಾಡಿದೆ.
ಜನ ಏನು ಹೇಳ್ತಿದ್ದಾರೆ?
ಈ ಪ್ರೊಮೋ ನೋಡಿದ ವೀಕ್ಷಕರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಚಿರು, ದಿಶಾ ಪ್ರೀತಿಯನ್ನು ಒಪ್ಪಿಕೊಳ್ಳೋದಿಲ್ಲ ಅಂದ್ರೆ, ಇನ್ನೊಬ್ಬರು ಚಿರಾಗ್ ಗೆ ದಿಯಾ ಮತ್ತು ದೀಪಾ ಇಬ್ಬರು ಒಬ್ಬರೇ ಅನ್ನೋದು ಗೊತ್ತಾಗಿದೆ ಅದಕ್ಕಾಗಿ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ.
ನಿಜವಾಗ್ಲೂ ಚಿರಾಗ್ ಗೆ ಸತ್ಯ ಗೊತ್ತಾಗಿದ್ಯಾ?
ಚಿರಾಗ್ ಗೆ ದೀಪಾ- ದಿಯಾ ಇಬ್ಬರು ಒಬ್ಬರೇ ಅನ್ನೋ ಸತ್ಯ ಗೊತ್ತಾಗೊದ್ಯಾ? ಅಥವಾ ಪ್ರೊಮೋದಲ್ಲಿ ತೋರಿಸೋದು ಮತ್ತು ಸೀರಿಯಲ್ ನಲ್ಲಿ ತೋರಿಸೋದು ಎರಡೂ ಬೇರೆ ಬೇರೆ ಆಗಿರುತ್ತಾ? ದಿಶಾಳನ್ನು ಕೇವಲ ಫ್ರೆಂಡ್ ಆಗಿ ಮಾತ್ರ ಇಷ್ಟಪಡ್ತಾನ ಚಿರಾಗ್ ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

