- Home
- Entertainment
- TV Talk
- Nakuul Mehta RCB Wish: RCB ಗೆದ್ದಾಯ್ತು; ಕೊಟ್ಟ ಮಾತಿನಂತೆ ಕನ್ನಡ ಕಲಿತು ಶುಭಾಶಯ ಹೇಳಿದ ಖ್ಯಾತ ಬಾಲಿವುಡ್ ನಟ!
Nakuul Mehta RCB Wish: RCB ಗೆದ್ದಾಯ್ತು; ಕೊಟ್ಟ ಮಾತಿನಂತೆ ಕನ್ನಡ ಕಲಿತು ಶುಭಾಶಯ ಹೇಳಿದ ಖ್ಯಾತ ಬಾಲಿವುಡ್ ನಟ!
ಅಂತೂ ಹದಿನೇಳು ವರ್ಷಗಳು ಉರುಳಿದ ಬಳಿಕ ನಾವು ಐಪಿಎಲ್ ಕಪ್ ಎತ್ತಿದ್ದೇವೆ. ಈ ಮಧ್ಯೆ ಬಾಲಿವುಡ್ ನಟಿ ನಕುಲ್ ಮೆಹ್ತಾ ಅವರು ಮಾತು ಕೊಟ್ಟಂತೆ ಕನ್ನಡ ಪದಗಳನ್ನು ಕಲಿತಿದ್ದಾರೆ.

ಆರ್‌ಸಿಬಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದ್ದಲ್ಲದೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹನ್ನೊಂದು ಸಾವು ಆಗಿದೆ.
"ಫೈನಲೀ, 18 ವರ್ಷ ಆದ್ಮೇಲೆ ನಾವು ಕಪ್ ಎತ್ತುವ ಸಮಯ ಬಂದಿದೆ. ಮಿಸ್ಟ್ 18, ಇತಿಹಾಸದಲ್ಲಿ ಉತ್ತಮ ಐಪಿಎಲ್ ಆಟಗಾರ, ಈ ಬಾರಿ ಮೊದಲ ಲಿಫ್ಟ್ ಎತ್ತಲಿದ್ದಾರೆ. ನೀವು ನನ್ನ ಜೊತೆಗೆ ಇದ್ದೀರಾ? RCB ನೀವು ಎಂದಿಗೂ ಮಾಸದ ಬ್ಯೂಟಿ. ತಾಳ್ಮೆಯ ಅರ್ಥ ಏನು ಎಂದು ನೀವು ಕಲಿಸಿದ್ದೀರಿ" ಎಂದು ನಟ ನಕುಲ್‌ಮೆಹ್ತಾ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿದ್ದರು.
"ನೀವು ಕಪ್ ಗೆದ್ದರೆ ನಾನು ಕನ್ನಡ ಕಲಿತು ವಿಡಿಯೋ ಮಾಡುವೆ" ಎಂದು ನಕುಲ್ ಮೆಹ್ತಾ ಅವರು ಸೋಶಿಯಲ್‌ಮೀಡಿಯಾ ಪೋಸ್ಟ್‌ಹಂಚಿಕೊಂಡಿದ್ದರು.
ಈಗ ನಕುಲ್ ಮೆಹ್ತಾ ಅವರು ಕನ್ನಡದಲ್ಲಿ ವಿಡಿಯೋ ಮಾಡಿದ್ದಾರೆ. ಒಂದು ಎರಡು ಬಾಳೆಲೆ ಹರಡು, ಮೂರು ನಾಲ್ಕು ಅನ್ನವ ಹಾಕು ಎಂದು ಅವರು ಕನ್ನಡದಲ್ಲಿ ಮಾತನಾಡಿದ್ದಾರೆ.
ಅಂದಹಾಗೆ ನಕುಲ್ ಮೆಹ್ತಾ ಅವರು ಕನ್ನಡದಲ್ಲಿ ವಿಡಿಯೋ ಮಾಡಲು ಕಾರಣ ಬಾದಲ್ ನಂಜುಂಡಸ್ವಾಮಿ ಅವರು.
ಬಾದಲ್ ನಂಜುಂಡಸ್ವಾಮಿ ಅವರಿಂದಲೇ ಕನ್ನಡದಲ್ಲಿ ಕಲಿತು ಮಾತನಾಡಿದ್ದಾರೆ. ನಕುಲ್ ಮೆಹ್ತಾ ಅವರು ಕನ್ನಡ ಕಲಿತಿದ್ದಕ್ಕೆ, ನಟಿ ಕವಿತಾ ಗೌಡ ಮುಂತಾದವರು ಮೆಚ್ಚುಗೆ ಸೂಚಿಸಿದ್ದಾರೆ.