ಬಿಗ್ ಬಾಸ್ ಮನೇಲಿರೋ ಗಂಡನ ವಿರುದ್ಧವೇ ಪೋಸ್ಟ್ ಮಾಡಿದ ಹೆಂಡ್ತಿ!
ಬಿಗ್ ಬಾಸ್ ಮನೆಯಲ್ಲಿರುವ ನಾಗ ಮಣಿಕಂಠಗೆ ಅವರ ಪತ್ನಿಯೇ ಭರ್ಜರಿ ಶಾಕ್ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹೆಂಡತಿ, ಮಕ್ಕಳು ಬೇಕು ಎನ್ನುವ ಅರ್ಥದಲ್ಲಿ ಎಮೋಷನಲ್ ಕಾರ್ಡ್ ಬಳಸುತ್ತಾ ಸಹಾನುಭೂತಿ ಆಟವಾಡಲು ಮುಂದಾಗಿದ್ದು, ಇದಕ್ಕೆ ಸ್ವತಃ ಅವರ ಹೆಂಡತಿಯೇ ಬ್ರೇಕ್ ಹಾಕಿದ್ದಾರೆ. ನಾಗ ಮಣಿಕಂಠನ ಬಂಡವಾಳ ಬಯಲು ಮಾಡುವ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಹಾಕಿಕೊಂಡಿದ್ದಾರೆ.
ನಾಗ ಮಣಿಕಂಠ
ಬಿಗ್ ಬಾಸ್ ತೆಲುಗು ಸೀಸನ್ 8 ರ ಸ್ಪರ್ಧಿ ನಾಗ ಮಣಿಕಂಠಗೆ ಹೆಚ್ಚು ಖ್ಯಾತಿ ಇರಲಿಲ್ಲ. ಈ ಯುವಕನ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚು ತಿಳಿದಿರಲಿಲ್ಲ. ಆದರೆ, ಮನೆಗೆ ಬರುತ್ತಿದ್ದಂತೆ ಗಮನ ಸೆಳೆದರು. ತಮ್ಮ ಭಾವನಾತ್ಮಕ, ದುರಂತ ಕುಟುಂಬದ ಹಿನ್ನಲೆಯನ್ನು ಬಹಿರಂಗಪಡಿಸಿದರು.
ಬಿಗ್ ಬಾಸ್ ತೆಲುಗು 8
ಬಾಲ್ಯದಲ್ಲಿಯೇ ನಾಗ ಮಣಿಕಂಠ ತಂದೆ ನಿಧನರಾದರು. ತಾಯಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದರು. ಮಲ ತಂದೆಯಿಂದ ನಾಗ ಮಣಿಕಂಠಗೆ ಹಲವು ಅವಮಾನಗಳು, ಕಷ್ಟಗಳು ಎದುರಾದವು. ತಾಯಿ ಮೃತಪಟ್ಟಾಗ ಅಂತ್ಯಕ್ರಿಯೆ ಮಾಡಲು ಹಣವಿಲ್ಲದೆ, ಬೇರೊಬ್ಬರ ಬಳಿ ಹಣ ಕೇಳಿದ್ದರು.
ಕಣ್ಣೀರು ಹಾಕುತ್ತಾ ನಾಗ ಮಣಿಕಂಠ ಮಾತನಾಡಿದ ಮಾತುಗಳು ಬಿಗ್ ಬಾಸ್ ಮನೆ ಮಂದಿಯ ಮನವನ್ನೂ ಕಲಕಿದವು. ಅವರು ಕೂಡ ಭಾವುಕರಾದರು. ಮತ್ತೊಂದು ಸಂದರ್ಭದಲ್ಲಿ ಮುಖವಾಡ ತೆಗೆದು ಇದಕ್ಕಿಂತ ಹೆಚ್ಚು ಪಾರದರ್ಶಕವಾಗಿರಲು ಸಾಧ್ಯವಿಲ್ಲ ಬಿಗ್ ಬಾಸ್ ಎಂದಿದ್ದಾರೆ. ಮನೆಯಿಂದ ಹೊರಗೆ ಹೋದ ನಂತರ ನನ್ನ ಜೀವನ ಏನೆಂದು ನನಗೆ ತಿಳಿದಿಲ್ಲ ಎಂದು ಅತ್ತಿದ್ದಾರೆ.
ಬಿಗ್ ಬಾಸ್ ತೆಲುಗು 8
ನನಗೆ ನನ್ನ ಹೆಂಡತಿ ಬೇಕು, ನನ್ನ ಮಗು ಬೇಕು. ಅತ್ತೆಯ ಮನೆಯಲ್ಲಿ ಗೌರವ ಬೇಕು. ಅವೆಲ್ಲವನ್ನೂ ಪಡೆಯಬೇಕೆಂದರೆ ನಾನು ಬಿಗ್ ಬಾಸ್ ಪ್ರಶಸ್ತಿ ಗೆಲ್ಲಬೇಕು ಎಂದು ಹೇಳುತ್ತಾರೆ. ನಾಗ ಮಣಿಕಂಠ ಅವರ ನಡವಳಿಕೆಯನ್ನು ಗಮನಿಸಿದ ಕೆಲವರು ಇದು ಸಹಾನುಭೂತಿಯ ಆಟ ಎಂದು ಹೇಳುತ್ತಿದ್ದಾರೆ. ಇದೇ ನಾಟಕವಾಡಿದ್ದ ಪಲ್ಲವಿ ಪ್ರಶಾಂತ್ ಅವರನ್ನು ಅನುಸರಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹೆಂಡತಿ ಮಕ್ಕಳ ಕಾರ್ಡ್ ಬಳಸುತ್ತಿರುವ ನಾಗ ಮಣಿಕಂಠಗೆ ಪತ್ನಿ ಪ್ರಿಯಾ ಬ್ರೇಕ್ ಹಾಕಿದ್ದಾರೆ. ಪತಿ ನಾಗ ಮಣಿಕಂಠ ಅವರ ಬಗ್ಗೆ ಸ್ವತಃ ಹೆಂಡತಿ ಪ್ರಿಯಾ ಅವರೇ ಪರೋಕ್ಷ ಟೀಕೆಗಳನ್ನು ಮಾಡಿದ್ದಾರೆ. ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಬರುತ್ತಿವೆ.
ಬಿಗ್ ಬಾಸ್ ತೆಲುಗು 8
ನಾಗ ಮಣಿಕಂಠ ಅವರ ಹೆಂಡ್ತಿ ಯಾವಾಗಲೂ ವಿಷಕಾರುವ ಸಂಬಂಧವನ್ನು ಮುಂದುವರಿಸುವುದಕ್ಕಿಂತ ಅವರೊಂದಿಗೆ ಬೇರ್ಪಡುವುದೇ ಉತ್ತಮ ಎಂದು ಒಂದು ಪೋಸ್ಟ್ ಮಾಡಿದ್ದಾರೆ. ಗಂಡ ಹೆಂಡತಿಯ ನಡುವಿನ ಕಲಹಗಳು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಪ್ರಿಯಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಗಮನಿಸಿದರೆ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬುದು ಸ್ಪಷ್ಟವಾಗುತ್ತದೆ.
ನಾಗ ಮಣಿಕಂಠ ಅವರ ಮಲತಂದೆಯ ಮೇಲೆ ಮಾಡಿದ ಆರೋಪಗಳನ್ನು ಅವರ ಮಲ ಸಹೋದರಿ ಖಂಡಿಸಿದ್ದರು. ತಾಯಿ ಮೃತಪಟ್ಟ ನಂತರ ಮನೆಯಿಂದ ಹೊರಬರುವುದು ನಾಗ ಮಣಿಕಂಠನದ್ದೇ ಆಯ್ಕೆಯಾಗಿತ್ತು. ಅವರನ್ನು ಯಾರೂ ಹೊರಗೆ ಕಳುಹಿಸಲಿಲ್ಲ. ನನ್ನ ತಂದೆ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ ಎಂದು ಅವರು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ಬಿಗ್ ಬಾಸ್ ತೆಲುಗು 8
ಮತ್ತೊಂದೆಡೆ ನಾಗ ಮಣಿಕಂಠ ಹೇಳಿಕೆ ನೋಡುತ್ತಿದ್ದರೆ... ಬಿಗ್ ಬಾಸ್ ಶೋ ಮೂಲಕ ಬರುವ ಖ್ಯಾತಿ, ಹಣದಿಂದ ಕುಟುಂಬಕ್ಕೆ ಹತ್ತಿರವಾಗಲು ಬಯಸುತ್ತಿದ್ದಾರೆಯೇ ಎಂಬಂತೆ ಕಾಣುತ್ತಿದೆ. ಆದರೆ, ನಾಗ ಮಣಿಕಂಠ ಅವರ ಮತ್ತೊಂದು ಆ್ಯಂಗಲ್ ಮಹಿಳಾ ಸ್ಪರ್ಧಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಇನ್ನು ಸುಖಾ ಸುಮ್ಮನೇ ಮನೆಯಲ್ಲಿ ಮಹಿಳಾ ಸ್ಪರ್ಧಿಗಳನ್ನು ಅಪ್ಪಿಕೊಳ್ಳುತ್ತಿದ್ದಾನೆ. ನಾಗ ಮಣಿಕಂಠ ಅವರು ಪ್ರತಿ ಬಾರಿ ತನ್ನನ್ನು ಅಪ್ಪಿಕೊಳ್ಳುವುದರ ಬಗ್ಗೆ ಯಶ್ಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋನಿಯಾ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಕೇಳಿ ಅಪ್ಪಿಕೊಂಡಿದ್ದಾರೆ.
ಬಿಗ್ ಬಾಸ್ ತೆಲುಗು 8
ಮದುವೆಯಾದ ನೀನು ಹುಡುಗಿಯರ ಹಿಂದೆ ಏಕೆ ಬೀಳುತ್ತಿದ್ದೀಯಾ ಎಂದು ನೈನಿಕಾ ಪ್ರಶ್ನಿಸಿದ್ದಾರೆ. ಈ ಬಿಗ್ ಬಾಸ್ ಮನೆಯಲ್ಲಿ ಇರುವವರೆಗೂ ಚಿಲ್ ಆಗುವುದು. ಹೊರಗೆ ಹೋದ ನಂತರ ಮತ್ತೆ ರೊಟೀನ್ ಲೈಫ್ ಎಂಬರ್ಥದಲ್ಲಿ ನೈನಿಕಾಗೆ ಉತ್ತರಿಸಿದ್ದಾರೆ. ನಾಗ ಮಣಿಕಂಠ ಆಟ ಜನರಿಗೆ ಹೇಗೆ ಹೊಗ್ಗುತ್ತದೆ ನೋಡಬೇಕು. ಆದರೆ, ಬಿಗ್ ಬಾಸ್ ಮೆನಯಲ್ಲಿನ ಆತನ ಆಟಕ್ಕೆ ಉತ್ತಮ ಓಟುಗಳು ಬರುತ್ತಿವೆ. ಪ್ರತಿ ಬಾರಿ ಎಲಿಮಿನೇಷನ್‌ನಲ್ಲಿ ಸೇಫ್ ಆಗುತ್ತಿದ್ದಾರೆ.