ಬಿಗ್‌ಬಾಸ್ ಸ್ಪರ್ಧಿಗೆ 17 ಲಕ್ಷ ರೂ. ವಂಚನೆ!
ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿರೋ ಸೌಂದರ್ಯಾ, ಕಥೆ ಹೇಳುವ ಟಾಸ್ಕ್‌ನಲ್ಲಿ ತನಗಾದ ವಂಚನೆ ಬಗ್ಗೆ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ.

ಸೌಂದರ್ಯ ನಂಜುಂಡನ್
ಬಿಗ್‌ಬಾಸ್ ಸೀಸನ್ 8ರಲ್ಲಿ ಪ್ರೇಕ್ಷಕರ ಮನಗೆದ್ದ ಸ್ಪರ್ಧಿ ಸೌಂದರ್ಯಾ. ಟೀಕೆಗಳನ್ನೆಲ್ಲ ಲೆಕ್ಕಿಸದೆ ತಮ್ಮದೇ ಶೈಲಿಯಲ್ಲಿ ಉತ್ತರಿಸುತ್ತಾರೆ. ಹಾಗಾಗಿ, ಈ ಸೀಸನ್‌ನಲ್ಲಿ ಬೇರೆ ಸ್ಪರ್ಧಿಗಳಿಗಿಂತ ಹೆಚ್ಚು ಅಭಿಮಾನಿಗಳಿದ್ದಾರೆ. ಮೊದಲ ವಾರದಿಂದಲೂ ಸೌಂದರ್ಯಾರನ್ನ ಜನ ಉಳಿಸುತ್ತಿರೋದ್ರಿಂದ, ಬೇರೆ ಸ್ಪರ್ಧಿಗಳು ಅಸಮಾಧಾನಗೊಂಡಿದ್ದಾರೆ.
ಈ ವಾರದ ಕಥೆ ಹೇಳುವ ಟಾಸ್ಕ್‌ನಲ್ಲಿ, ಸ್ಪರ್ಧಿಗಳು ತಮ್ಮ ಜೀವನದ ಬಗ್ಗೆ ಹೇಳಿಕೊಂಡರು. ನಿನ್ನೆ ಸೌಂದರ್ಯಾ ತಮ್ಮ ಬಗ್ಗೆ ಹೇಳಿಕೊಂಡರು. ನನ್ನ ಧ್ವನಿಯನ್ನಿಟ್ಟು ಅನೇಕರು ನನ್ನನ್ನ ಅವಮಾನಿಸಿದ್ದಾರೆ. ಸಿನಿಮಾಗೆ ಬರಬೇಕೆಂಬ ಆಸೆ ಇದ್ದಾಗ, ನನ್ನ ಹೆತ್ತವರು, ಅದರಲ್ಲೂ ಅಪ್ಪ ಬೆಂಬಲ ನೀಡಿದರು.
8 ವರ್ಷಗಳ ಕಷ್ಟದ ದುಡಿಮೆಯ 17 ಲಕ್ಷ ರೂ. ಉಳಿಸಿದ್ದೆ. ಬಿಗ್‌ಬಾಸ್‌ಗೆ ಬರೋ ಕೆಲವು ವಾರಗಳ ಮೊದಲು ಒಂದು ಫೋನ್ ಬಂತು. 2 ನಿಮಿಷದಲ್ಲಿ 17 ಲಕ್ಷ ಹೋಯ್ತು. ಇದನ್ನ ಹೆತ್ತವರಿಗೆ ಹೇಳೋಕೆ ಆಗಿಲ್ಲ. ಈ ವಿಷಯ ಅಪ್ಪನಿಗೆ ಈ ಶೋ ಮೂಲಕ ಗೊತ್ತಾಗುತ್ತೆ. ಬಿಗ್‌ಬಾಸ್‌ಗೆ ಬರೋವಾಗ ಅಪ್ಪನ ಹತ್ರ ಸಾಲ ತಗೊಂಡು ಬಂದೆ ಅಂತ ಹೇಳಿದ್ದಾರೆ. ಈ ವಿಷಯ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.