ಜಾತ್ರೆ ಬಟ್ಟೆಗಳು ನಿಂಗೆ ಮಾತ್ರ ಸಿಗೋದಾ; ಸೋನು ಗೌಡ ಕಾಲೆಳೆದ ನೆಟ್ಟಿಗರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಸೋನು ಗೌಡ ಸೀರೆ ಲುಕ್. ಮದುವೆ ಫಿಕ್ಸ್ ಆಯ್ತಾ ಎಂದು ಕೇಳುತ್ತಿರುವವರೇ ಹೆಚ್ಚು.......
15

ಬಿಗ್ ಬಾಸ್ ಕನ್ನಡ ಓಟಿಟಿಯಲ್ಲಿ ಮಿಂಚಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಇದೀಗ ಸೀರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.
25
ಪಿಂಕ್ ಬಣ್ಣದ ಸೀರೆಯಲ್ಲಿ ಮಿಂಚುತ್ತಿರುವ ಸೋನು ಗೌಡ ಅದಕ್ಕೆ ಮ್ಯಾಚ್ ಆಗುವ ಕ್ರೀಮ್ ಬಣ್ಣದ ಬ್ಲೌಸ್ ಧರಿಸಿದ್ದಾರೆ. ಅಲ್ಲದೆ ಸೋನು ಮೇಕಪ್ ಮಾಡಿಕೊಂಡಿದ್ದಾಳೆ.
35
'ನನ್ನ ಸೀರೆಯ ಪ್ರತಿಯೊಂದು ಮಡಿಕೆಯಲ್ಲಿ ನನ್ನ ಸಂಸ್ಕೃತಿಯ ತುಣುಕಿದೆ' ಎಂದ ಸೋನು ಬರೆದುಕೊಂಡಿದ್ದಾರೆ. ಐರಾ ಡಿಸೈನರ್ ಸ್ಟುಡಿಯೋದವರು ಈ ವಸ್ತ್ರ ಡಿಸೈನ್ ಮಾಡಿರುವುದು.
45
ಒಂದು ಕೈಯಲ್ಲಿ ವಾಚ್, ಕೊರಳಲ್ಲಿ ಸಿಂಪಲ್ ಸರ ಧರಿಸಿರುವ ಸೋನು ಗೌಡಗೆ ಮೇಕಪ್ ಮಾಡಿರುವುದು ಗೀತಾಂಜಲಿ ಹಗೂ ಫೋಟೋವನ್ನು ತೆಗೆದಿರುವುದು ಕ್ಲಿಕ್ ಬೈ ಬಸ್ಯಾ ಎಂದು.
55
ಈ ವರ್ಷ ಮದುವೆ ಆಗುತ್ತೀನಿ ಎಂದು ಸೋನು ಅನೌನ್ಸ್ ಮಾಡಿದ್ದರು. ಹೀಗಾಗಿ ಮನೆ ನೋಡುವ ಶಾಸ್ತ್ರ ನಡೆದಿರಬೇಕು ಹೀಗಾಗಿ ಸೀರೆ ಧರಿಸಿ ಮೇಕಪ್ ಮಾಡಿಸಿಕೊಂಡಿದ್ದಾಳೆ ಎನ್ನುತ್ತಿದ್ದಾರೆ ನೆಟ್ಟಿಗರು.
Latest Videos