ಬೆಳೆ ಬೆಳೆಯಲು ಗೊತ್ತಿದೆ, ಸಿನಿಮಾ ಪ್ರಚಾರ ಕಷ್ಟವಾಗಿದೆ: ಕಣ್ಣೀರಿಟ್ಟ ಬಿಗ್ ಬಾಸ್ ಶಶಿ
ಸಿನಿಮಾ ಪ್ರಚಾರ ಮಾಡುವಾಗ ಕಣ್ಣೀರಿಟ್ಟ ಮಾಡರ್ನ್ ರೈತ. ಮೆಹಬೂಬ ಹಿಟ್ ಆಗಲಿ ಎಂದು ವಿಶ್ ಮಾಡಿದ ಅಭಿಮಾನಿಗಳು.

ಬಿಗ್‌ಬಾಸ್ ಖ್ಯಾತಿಯ ಆಧುನಿಕ ರೈತ ಶಶಿ ನಟನೆಯ ‘ಮೆಹಬೂಬ’ ಸಿನಿಮಾ ಮಾ.15ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಿದೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಶಶಿ ಭಾವುಕರಾದರು. ನಂತರ ಮಾತನಾಡಿ, ‘ನಾನು ರೈತ. ಬೆಳೆ ಬೆಳೆಯುತ್ತೇನೆ. 40 ಕೃಷಿ ಉತ್ಪನ್ನಗಳನ್ನು ಸಿದ್ಧಗೊಳಿಸಿದ್ದೇನೆ'
'ಆದರೆ ಸಿನಿಮಾ ಪ್ರಚಾರ ಮಾತ್ರ ಕಷ್ಟವಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ನಿದ್ದೆ ಮಾಡಿಲ್ಲ. ಸಿನಿಮಾ ಚೆನ್ನಾಗಿ ಮಾಡಿದ್ದೇವೆ. ಜನರಿಗೆ ತಲುಪಿಸಬೇಕಿದೆ’ ಎಂದರು.
ಬಿಗ್‌ಬಾಸ್ ಸೀಸನ್ 10 ವಿಜೇತ ಕಾರ್ತಿಕ್ ಮಹೇಶ್, ಸ್ಪರ್ಧಿಗಳಾದ ರಕ್ಷಕ್ ಬುಲೆಟ್, ಪವಿ ಪೂವಪ್ಪ ಟೀಸರ್ ಬಿಡುಗಡೆ ಮಾಡಿದ್ದಾರೆ. ನಾಯಕ ನಟಿ ಪಾವನಾ ಗೌಡ, ನಿರ್ದೇಶಕ ಅನೂಪ್ ಆಂಟೋನಿ ಇದ್ದರು.
ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಕಿರಣ್ ಹಂಪಾಪುರ ಛಾಯಾಗ್ರಹಣ ಚಿತ್ರಕ್ಕಿದೆ. ಶಶಿ ನಟಿಸಿರುವ ಶುಗರ್ ಫ್ಯಾಕ್ಟರ್ ಸಿನಿಮಾ ಕೂಡ ಹಿಟ್ ಆಗಿತ್ತು.
ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್, ಸ್ಪರ್ಧಿಗಳಾದ ಪವಿ ಪೂವಪ್ಪ ಮತ್ತು ರಕ್ಷಕ್ ಬುಲೆಟ್ ಟೀಸರ್ ರಿಲೀಸ್ ಮಾಡಿದ್ದಾರೆ.