ಶೈನ್, ಭೂಮಿ, ಪ್ರಿಯಾಂಕಾ, ವಾಸುಕಿ...ಮತ್ತೆ ಒಂದೆಡೆ ಸೇರಿದ ಬಿಗ್ ಬಾಸ್ 7 ಸ್ಪರ್ಧಿಗಳು!
ಬೆಸ್ಟ್ ಬಿಗ್ ಬಾಸ್ ಸೀಸನ್ ಎಂದೇ ಜನರ ಬಾಯಲ್ಲಿ ಜನಪ್ರಿಯತೆ ಪಡೆದಿರುವ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಗಳು ಮತ್ತೆ ಒಂದಾಗಿದ್ದು, ಅಭಿಮಾನಿಗಳು ಇವರನ್ನ ನೋಡಿ ಖುಷಿಯಾಗಿದ್ದಾರೆ.
ಈ ಬಾರಿಯ ಬಿಗ್ ಬಾಸ್ 10 ಯಾವಾಗಲೂ ಜಗಳ, ಗದ್ದಲಗಳಿಂದಾನೆ ಸುದ್ದಿಯಾಗುತ್ತಿದೆ. ಇದನ್ನೆಲ್ಲಾ ನೋಡ್ತಾ ಇದ್ದಾಗ ಪ್ರೇಕ್ಷಕರು ಹೆಚ್ಚಾಗಿ ನೆನಪು ಮಾಡಿಕೊಳ್ಳೋದು ಬಿಗ್ ಬಾಸ್ ಸೀಸನ್ 7 (Bigg Boss Season 7). ಎಷ್ಟು ಚೆನ್ನಾಗಿದ್ದು ಆ ಸೀಸನ್ ಎನ್ನುತ್ತಾರೆ.
ಇದೀಗ ಬಿಗ್ ಬಾಸ್ ಸೀಸನ್ 7ರ ಕೆಲವು ಸ್ಪರ್ಧಿಗಳು ಒಟ್ಟಾಗಿ ಸೇರಿ ಎಂಜಾಯ್ ಮಾಡಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ರೌಂಡ್ ಹಾಕುತ್ತಿವೆ. ಮತ್ತೆ ತಮ್ಮ ಫೆವರಿಟ್ ಸ್ಪರ್ಧಿಗಳನ್ನು ನೋಡಿ ಜನರು ಫುಲ್ ಖುಷಿಯಾಗಿದ್ದಾರೆ.
ಹೌದು ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಗಳಾದ ಶೈನ್ ಶೆಟ್ಟಿ, ವಾಸುಕಿ ವೈಭವ್, ಪ್ರಿಯಾಂಕ ಶಿವಣ್ಣ ಮತ್ತು ಭೂಮಿ ಶೆಟ್ಟಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಮತ್ತೆ ಎಲ್ಲರನ್ನು ಒಟ್ಟಿಗೆ ನೋಡಿ ಪ್ರೇಕ್ಷಕರು ಸಂತಸ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 7 ಜನರಿಗೆ ಸಖತ್ ಮನರಂಜನೆ ನೀಡಿತ್ತು. ಅಲ್ಲಿ ಜಗಳ, ಮನಸ್ಥಾಪ ಎಲ್ಲವೂ ಇತ್ತು, ಆದರೆ ಎಲ್ಲಾದಕ್ಕಿಂತ ಹೆಚ್ಚಾಗಿ ಮನರಂಜನೆ (entertainment), ಹಾಸ್ಯ, ಎಲ್ಲರೊಳಗಿನ ಒಗ್ಗಟ್ಟು ಚೆನ್ನಾಗಿತ್ತು. ಹಾಗಾಗಿಯೇ ಆ ಸೀಸನ್ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.
ಸೀಸನ್ 7 ರ ವಿಜೇತರಾಗಿರುವ ಶೈನ್ ಶೆಟ್ಟಿ (Shine Shetty) ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದ್ದು, ಶೂಟಿಂಗ್ ನಲ್ಲಿ ನಟ ಬ್ಯುಸಿಯಾಗಿದ್ದಾರೆ. ಸದ್ಯ ಅಂಕಿತಾ ಅಮರ್ ಜೊತೆ ಜಸ್ಟ್ ಮ್ಯಾರಿಡ್ ಶೂಟಿಂಗ್ ನಲ್ಲಿದ್ದಾರೆ.
ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿ ಜನಪ್ರಿಯತೆ ಪಡೆದಿರುವ ವಾಸುಕಿ ವೈಭವ್ (Vasuki Vaibhav) ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸಂಭ್ರಮದಲ್ಲಿದ್ದಾರೆ. ಜೊತೆಗೆ ಸಂಗೀತ ನಿರ್ದೇಶದಲ್ಲೂ ಬ್ಯುಸಿಯಾಗಿದ್ದಾರೆ.
ಪ್ರಿಯಾಂಕ ಶಿವಣ್ಣ (Priyanka) ಸೀರಿಯಲ್ ಗಳಲ್ಲಿ ನಟಿಸುತ್ತಿದ್ದು, ಕನ್ನಡ, ತಮಿಳು, ತೆಲುಗು ಸೀರಿಯಲ್ ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಪ್ರಿಯಾಂಕ ಖಳನಟಿಯಾಗಿ ನಟಿಸುತ್ತಿದ್ದಾರೆ.
ಇನ್ನು ಭೂಮಿ ಶೆಟ್ಟಿ (Bhoomi Shetty) ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದು, ಬಿಡುಗಡೆಯೂ ಆಗಿದೆ. ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಭೂಮಿ, ಹೆಚ್ಚಾಗಿ ಫೋಟೋ ಶೂಟ್, ವರ್ಕ್ ಔಟ್ ವಿಡೀಯೋ, ರೀಲ್ಸ್ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ. ಅನ್ಯ ಭಾಷಾ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.